ಮಂಗಳೂರು: ಮಂಗಳೂರಿನಲ್ಲಿ ಕೋಸ್ಟಲ್ ಬಿಗ್ ಭಾಷ್ ಕ್ರಿಕೆಟ್ ಲೀಗ್ ಕ್ರಿಕೇಟ್ ಪಂದ್ಯಾಟವನ್ನು ಸಹ್ಯಾದ್ರಿ ಕಾಲೇಜಿನ ಮೈದಾನಲ್ಲಿ ಜನವರಿ ತಿಂಗಳಾಂತ್ಯದಲ್ಲಿ ಆಯೋಜಿಸಲಾಗುವುದು ಎಂದು ಆಯೋಜಕ ಶೈಖ್ ಮೊಹಮ್ಮದ್ ಆತಿಫ್ ಮಾಹಿತಿ ನೀಡಿದರು. ಅವರು ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದು ಟಿ20 ಫಾರ್ಮ್ಯಾಟ್ ಟೂರ್ನಮೆಂಟ್ ಆಗಿದ್ದು, ಫ್ರಾಂಚೈಸ್ ಆಧಾರಿತ ಟೂರ್ನಮೆಂಟ್ ಅಗಿದೆ. ಇದರಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಪ್ರತಿ ಫ್ರಾಂಚೈಸ್‌ಗೆ 16 ಆಟಗಾರರು ಇರಲಿದ್ದು, ಪ್ರತಿ ತಂಡವು 4 ಲೀಗ್ ಪಂದ್ಯಗಳನ್ನು ಆಡುತ್ತದೆ. ಪ್ರತಿ ಪೂಲ್‌ನಿಂದ ಟಾಪ್ 2 ತಂಡಗಳು ಸೆಮಿಫೈನಲ್‌ಗಾಗಿ ಅರ್ಹರಾಗುವರು. ಈ ಆಟ OTT ಪ್ಲ್ಯಾಟ್‌ಫಾರ್ಮ್ ಒಂದರಲ್ಲಿ ಬಿತ್ತರಗೋಳ್ಳಲಿದೆ. KSCA ಯಿಂದ ವೈಶಿಷ್ಟ್ಯಪೂರ್ಣ ಗುರುತಿನ ಸಂಖ್ಯೆಯು ಇರುವವರು ಮಾತ್ರ ಪಾಲ್ಗೊಳ್ಳಲು ಅರ್ಹರಾಗಿದ್ದಾರೆ, ಕರ್ನಾಟಕ ಡೊಮೆಸ್ಟಿಕ್ ಕ್ರಿಕೆಟ್‌ನಲ್ಲಿ ಪಾಲ್ಗೊಂಡ 8 ಐಕಾನ್ ಆಟಗಾರರು ಆಡಳಿದ್ದಾರೆ. ನೋಂದಾಯಿತ ಆಟಗಾರರನ್ನು ಹರಾಜು ಪಟ್ಟಿಯಲ್ಲಿ ವಿಂಗಡಿಸಲಾಗುವುದು. ಒಂದು Under-19 ಆಟಗಾರ ಮತ್ತು ಎರಡು Under-23 ವಯೋಮಿತಿಯ ಆಟಗಾರರು ಪ್ಲೇಯಿಂಗ್ 11 ರ ತಂಡದಲ್ಲಿರಬೇಕು. ಪ್ರತಿ ದಿನ 3 ಪಂದ್ಯಗಳು. ಪ್ರೇಕ್ಷಕರು ಪ್ರವೇಶ ಶುಲ್ಕವಿಲ್ಲದೆ ಟೂರ್ನಮೆಂಟ್ ಅನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗುವುದು. ಸಲಹಾ ಸಮಿತಿಯ ಕೆಲವು ಸದಸ್ಯರನ್ನು ಮುಂದಿನ ಮಾಧ್ಯಮ ಸಭೆಯಲ್ಲಿ ಪರಿಚಯಿಸಲಾಗುವುದು ಎಂದರು.
ಮೊದಲ ಡಿವಿಷನ್ ಆಟಗಾರರು - ಮಂಗಳೂರು ಮತ್ತು ಬೆಂಗಳೂರು ನಡುವೆ ಆಡಿದವರು ಮತ್ತು Karnataka Under-19, Under-23 ರಾಜ್ಯ ತಂಡವನ್ನು ಪ್ರತಿನಿಧಿಸಿದವರು ವರ್ಗ A ಯಲ್ಲಿ ಸೇರಿಸಲ್ಪಡುತ್ತಾರೆ. KSCA ಝೋನ್ ಲೀಗ್‌ಗಳನ್ನು ಪ್ರತಿನಿಧಿಸಿದ ಆಟಗಾರರು, ಕಠಿನ ನಿಯಮಗಳು ಮತ್ತು ಭ್ರಷ್ಟಾಚಾರ ವಿರೋಧಿ ಕ್ರಮಗಳನ್ನು ಅನುಸರಿಸಲಾಗುವುದು. ಆಟಗಾರರು ಮತ್ತು ಮಂಡಳಿಯ ನಡುವೆ ಅಗ್ರಿಮೆಂಟ್ ಕಡ್ಡಾಯವಾಗಿದೆ, KSCA ಆಡಳಿತ ನಿಯಮಾವಳಿಗಳ ಅಡಿಯಲ್ಲಿ ಟೂರ್ನಮೆಂಟ್ ನಡೆಯುತ್ತದೆ ಎಂದರು.
ಟೂರ್ನಮೆಂಟ್‌ನ ಅತ್ಯುತ್ತಮ ಆಟಗಾರ, ಟೂರ್ನಮೆಂಟ್‌ನ ಅತ್ಯುತ್ತಮ ಕ್ಯಾಚ್, ಪರ್ಪಲ್ ಕ್ಯಾಪ್, ಆರಂಜ್ ಕ್ಯಾಪ್, Under-23 ಶ್ರೇಣಿಯ ಅತ್ಯುತ್ತಮ ಎಮರ್ಜಿಂಗ್ ಆಟಗಾರ ಹೀಗೆ ಹಲವಾರು ಪ್ರಶಸ್ತಿಗಳು ಇವೆ. KSCA ಪ್ರಮಾಣಿತ ಮ್ಯಾಚ್ ಅಧಿಕೃತರನ್ನು ನೇಮಕ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಕೀರ್ತಿರಾಜ್ ರೈ (9741931062), ಶೈಖ್ ಮೊಹಮ್ಮದ್ ಅತಿಫ್ (9901683095), ಅಖಿಲೇಶ್ ಶೆಟ್ಟಿ (9594367713) ಇವರನ್ನು ಸಂಪರ್ಕಿಸಲು ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ಕೀರ್ತಿರಾಜ್ ರೈ, ಅಖಿಲೇಶ್ ಶೆಟ್ಟಿ, ಸುರೇಶ್ ಶೆಟ್ಟಿ, ಲಯನ್ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.