image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

24ನೇ ವಾರ್ಷಿಕ ರೋಟರಿ ಚಿಣ್ಣರ ಉತ್ಸವ :ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ

24ನೇ ವಾರ್ಷಿಕ ರೋಟರಿ ಚಿಣ್ಣರ ಉತ್ಸವ :ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾಕೂಟ

ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ರೋಟರಿ ಮಂಗಳೂರು ಸೆಂಟ್ರಲ್ ಫೌಂಡೇಶನ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಇದರ ಸಂಯುಕ್ತಾಶ್ರಯದಲ್ಲಿ ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ 24ನೇ ವಾರ್ಷಿಕ "ರೋಟರಿ ಚಿಣ್ಣರ ಉತ್ಸವ"-ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧಾ ಕೂಟ ಆಯೋಜಿಸಲಾಗಿದ್ದು ದಿ.24/11/2024 ರವಿವಾರ, ಉರ್ವ ಕೆನರಾ ಹೈಸ್ಕೂಲ್‌ನ ಆವರಣದಲ್ಲಿ ಬೆಳಿಗ್ಗೆ 9.00ರಿಂದ ನಡೆಯಲಿದೆ ಎಂದು ರೋಟರಿ ಚಿಣ್ಣರ ಉತ್ಸವ-2024ರ ಚೆರ್‌ಮೆನ್ ರೋ. ರೊನಾಲ್ಡ್ ಮೆಂಡೋನ್ಸಾ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಪುಟ್ಟ ಹೃದಯಗಳಲ್ಲಿ ಸಂತೋಷ ಹಾಗೂ ಭರವಸೆ ಮೂಡಿಸುವ ಗುರಿಯೊಂದಿಗೆ ಮಕ್ಕಳ ಜೊತೆಗೆ "ಒಂದು ದಿನ ನಗು ತರುವ" ಹಬ್ಬವಾಗಿ ಆಚರಿಸಲಾಗುತ್ತಿದೆ.

ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಗೌರವಾನ್ವಿತ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮಾನ್ಯ ಮುಲ್ಲೈ ಮುಗಿಲನ್‌ರವರು ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರೋಟರಿ ಜಿಲ್ಲಾ 3181 ವಲಯ-2 ಇದರ ಸಹಾಯಕ ಗವರ್ನರ್ ರೋ. ಕೃಷ್ಣ ಹೆಗ್ಡೆ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಮಂಗಳೂರು ಸೆಂಟ್ರಲ್ ರೋಟರಿ ಕ್ಲಬ್‌ನ ಅಧ್ಯಕ್ಷ ರೋ. ಬ್ರಾಯಾನ್ ಪಿಂಟೋ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ ಎಂದರು. 

1996ರಲ್ಲಿ ಕ್ಲಬ್‌ನ ದಶಮಾನೋತ್ಸವದ ಆಚರಣೆಯ ಅಂಗವಾಗಿ ಪ್ರಾರಂಭವಾದ ರೋಟರಿ ಚಿಣ್ಣರ ಉತ್ಸವವು, ವರ್ಷಗಳ ಹಿಂದೆ ಅನೇಕರ ಜೀವಗಳನ್ನು ಸ್ಪರ್ಶಿಸಿರುವ ಒಂದು ಅಪರೂಪದ ಸಂಪ್ರದಾಯವಾಗಿ ಬೆಳೆದಿದೆ. ಈ ಉತ್ಸವವು ಕೇವಲ ಕಾರ್ಯಕ್ರಮವಷ್ಟೇ ಅಲ್ಲ, ಇದು ಮಕ್ಕಳ ಪ್ರತಿಭೆಯನ್ನು ಪೋಷಿಸುವುದು. ಸ್ನೇಹಾಭಿವೃದ್ಧಿ ಮಾಡಲು ವೇದಿಕೆ ಒದಗಿಸುವುದು, ಮತ್ತು ಮಕ್ಕಳಿಗೆ ಸಮರ್ಪಿತ ಪ್ರಯತ್ನವಾಗಿದೆ. ದಿನಪೂರ್ತಿ ನಡೆಯುವ ಈ ಉತ್ಸವವು ಬೆಳಿಗ್ಗೆ ಕ್ರೀಡಾ ಸ್ಪರ್ಧೆಗಳೊಂದಿಗೆ ಆರಂಭಗೊಳ್ಳುತ್ತದೆ. ನಂತರ ಮಧ್ಯಾಹ್ನದಲ್ಲಿ ಗಾನ, ನೃತ್ಯ, ನಾಟಕ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮವು ಈ ವರ್ಷದ ರೋಟರಿ ಇಂಟರ್‌ನ್ಯಾಷನಲ್ ಥೀಮ್ "ಮ್ಯಾಜಿಕ್ ಆಫ್ ರೋಟರಿ" ಎಂಬ ಸ್ಫೂರ್ತಿಯನ್ನು ಪ್ರತಿಫಲಿಸುತ್ತದೆ. ಇದು ನಿಸ್ವಾರ್ಥ ಸೇವಾ ಚಟುವಟಿಕೆಗಳು ಮತ್ತು ಸಮುದಾಯ ಬಾಳಿನ ಆರ್ಥಿಕತೆಯನ್ನು ಹೇಗೆ ಬದಲಾಯಿಸಬಹುದು ಎಂಬುದನ್ನು ತೋರಿಸುತ್ತದೆ.ಈ ಸ್ಪೂರ್ತಿದಾಯಕ ಉತ್ಸವದಲ್ಲಿ 10 ಮಕ್ಕಳ ರಕ್ಷಣೆ ಮತ್ತು ಆರೈಕೆ ಕೇಂದ್ರಗಳಿಂದ ಸುಮಾರು 550  ಮಕ್ಕಳು ಭಾಗವಹಿಸಲಿದ್ದಾರೆ.

ಸಾಯಂಕಾಲ 5:00 ಗಂಟೆಗೆ ಉರ್ವ ಕೆನರಾ ಹೈಸ್ಕೂಲ್‌ನ ಸಭಾಂಗಣದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ರೋ.3181 ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಹಾಗೂ ವಿಶೇಷ ಆಹ್ವಾನಿತರಾಗಿ ಮಂಗಳೂರು ಸೆಂಟ್ರಲ್ ರೋಟರಿ ಫೌಂಡೇಶನ್‌ ಅಧ್ಯಕ್ಷರಾದ ರೋ. ಪ್ರೇಮನಾಥ ಕುಡ್ಡ, ಭಾಗವಹಿಸಲಿದ್ದಾರೆ. ವಿಜೇತರಿಗೆ ಬಹುಮಾನ ಮತ್ತು ಟ್ರೋಫಿಗಳನ್ನು ಮತ್ತು ಶ್ರೇಷ್ಠ ಪ್ರದರ್ಶನ ನೀಡಿದವರನ್ನು ಗೌರವಿಸಲಾಗುವುದು ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷರು ಬ್ರಾಯನ್ ಪಿಂಟೋ, ಕಾರ್ಯದರ್ಶಿ ರೋ. ರಾಜೇಶ್ ಸೀತಾರಾಂ,  ಸಂಯೋಜಕ ರೋ. ಕರಣ್ ಜೈನ್, ರೋಟರಾಕ್ಟ್ ಕ್ಲಬ್ ಮಂಗಳೂರು ಸೆಂಟ್ರಲ್ ಕಾರ್ಯದರ್ಶಿ ಅಕ್ಷಯ್ ಬಿ ರೈ, ಮಾಜಿ ಅಸಿಸ್ಟೆಂಟ್ ಗವರ್ನರ್, ರೋ ರಾಜ್ ಗೋಪಾಲ್ ರೈ, ಮಾಜಿ ಅಧ್ಯಕ್ಷರು ರಾಜೇಶ್ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ