image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

“ಡ್ರೀಮ್ ಡೀಲ್” ಲಕ್ಕಿ ಡ್ರಾದಲ್ಲಿ ಮೋಸದಾಟದ ವಿಡಿಯೋ ವೈರಲ್ : ಆಡಳಿತ ಮಂಡಳಿ ಸ್ಪಷ್ಟನೆ

“ಡ್ರೀಮ್ ಡೀಲ್” ಲಕ್ಕಿ ಡ್ರಾದಲ್ಲಿ ಮೋಸದಾಟದ ವಿಡಿಯೋ ವೈರಲ್ : ಆಡಳಿತ ಮಂಡಳಿ ಸ್ಪಷ್ಟನೆ

ಮಂಗಳೂರು: “ಡ್ರೀಮ್ ಡೀಲ್ ಗ್ರೂಪ್ ವತಿಯಿಂದ ಪ್ರತಿ ತಿಂಗಳು ಪ್ರಮೋಷನ್ ಸಲುವಾಗಿ ಬಹುಮಾನ ಕೊಡುತ್ತಾ ಬಂದಿದ್ದೇವೆ. ಅದರಂತೆ ನಿನ್ನೆ ನಡೆದ ಲಕ್ಕಿ ಡ್ರಾ ದಲ್ಲಿ ಉಬೈದ್ ಮತ್ತು ಹರ್ಷಿತ್ ಎನ್ನುವ ನಮ್ಮ ಉದ್ಯೋಗಿಗಳು ಸಂಸ್ಥೆಗೆ ಮೋಸ ಮಾಡಿದ್ದಾರೆ. ಇದು ನಮ್ಮ ಗಮನಕ್ಕೆ ಬಂದ ತಕ್ಷಣವೇ ಮರು ಡ್ರಾ ಮಾಡಿದುವುದರ ಜೊತೆಗೆ ಮೋಸ  ಮಾಡಿದವರ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅವರನ್ನು ಕಂಪನಿಯಿಂದ ವಜಾ ಮಾಡಲಾಗಿದ್ದು, ಪೊಲೀಸ್ ಅಧಿಕಾರಿಗಳು ಈ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಡ್ರೀಮ್ ಡೀಲ್ ಗ್ರೂಪ್ ನ ಆಡಳಿತ ನಿರ್ದೇಶಕ ಸುಹೈಲ್  ಸ್ಪಷ್ಟಪಡಿಸಿದ್ದಾರೆ. ಅವರು ನಗರದ ಡ್ರೀಮ್ ಡೀಲ್ ಕಟ್ಟಡದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತಾಡಿ, ಕಂಪೆನಿ ಇಲ್ಲಿಯವರೆಗೆ ವಿಶ್ವಾಸದಿಂದ ನಡೆದುಕೊಂಡಿದ್ದೇವೆ. ಮುಂದೆಯೂ ಜನರ ವಿಶ್ವಾಸಕ್ಕೆ ಬದ್ಧವಾಗಿದೆ. ಡ್ರೀಮ್ ಡೀಲ್ ಸಂಸ್ಥೆಯು ಆರ್ ಬಿಐ ನಿಯಮಗಳ ಅನ್ವಯ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದಲ್ಲಿ 15000ಕ್ಕೂ ಅಧಿಕ ಮಂದಿ ಗ್ರಾಹಕರಿದ್ದಾರೆ. ಗ್ರಾಹಕರಿಗೆ ಪ್ರತೀ ತಿಂಗಳು 1000 ಪಾವತಿ ಮಾಡಿದರೆ ಅವರಿಗೆ ಕೂಪನ್ ನೀಡಲಾಗುತ್ತದೆ. ಲಕ್ಕಿ ಡ್ರಾ ಮೂಲಕ ಆಯ್ಕೆಯಾಗುವ ಗ್ರಾಹಕರಿಗೆ 20000 ರೂಪಾಯಿಗಿಂತ ಮೇಲ್ಪಟ್ಟ ಉಡುಗೊರೆ ಕೊಡುತ್ತಾ ಬಂದಿದ್ದೇವೆ. ವಿಶೇಷ ಉಡುಗೊರೆಯಾಗಿ ದುಬಾರಿ ಮಹಿಂದ್ರಾ ಥಾರ್ ಮತ್ತಿತರ ಉಡುಗೊರೆಗಳನ್ನು ಸಂಸ್ಥೆ ನೀಡುತ್ತಾ ಬಂದಿದೆ. 

ಪ್ರತಿ ಡ್ರಾ ಸಮಯದಲ್ಲಿ ಯೂಟ್ಯೂಬ್ ಲೈವ್ ಮಾಡಲಾಗುತ್ತದೆ. ನಿನ್ನೆ ಡ್ರಾ ಸಂದರ್ಭದಲ್ಲಿಯೂ ಯೂಟ್ಯೂಬ್ ಲೈವ್ ಇದ್ದರೂ ಸಂಸ್ಥೆಯ ಇಬ್ಬರು ಕೆಲಸಗಾರರು ಬೇರೊಂದು ಚೀಟಿಯನ್ನು ಉದ್ದೇಶಪೂರ್ವಕವಾಗಿ ಅದರಲ್ಲಿ ಹಾಕಿದ್ದಾರೆ. ಅದನ್ನು ಗಮನಿಸಿದ ಸಂಸ್ಥೆಯು ಗ್ರಾಹಕರ ಹಿತದೃಷ್ಟಿಯಿಂದ ಇಬ್ಬರಿಗೆ ಥಾರ್ ಗಾಡಿಯನ್ನು ನೀಡಲಾಗಿದೆ. ಸಂಸ್ಥೆಗೆ ಗ್ರಾಹಕರು ಮುಖ್ಯ“ ಎಂದರು. ಡ್ರೀಮ್ ಡೀಲ್ ಗ್ರೂಪ್ ನ ಈಗಾಗಲೇ 15ಕ್ಕೂ ಹೆಚ್ಚು ಬ್ರಾಂಚ್ ಗಳು ರಾಜ್ಯಾದ್ಯಂತ ಕಾರ್ಯಾಚರಿಸುತ್ತಿದ್ದು, ಎಲ್ಲಾ ಕಡೆಗಳಲ್ಲಿ ಗ್ರಾಹಕ ಸ್ನೇಹಿಯಾಗಿ  ಕಾರ್ಯ ನಿರ್ವಹಿಸುತ್ತಿದೆ.  

”ಡ್ರೀಮ್ ಡೀಲ್ ಗ್ರೂಪ್ ಮುಂದಿನ ದಿನಗಳಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಿಸ್ತರಿಸುವ ಉದ್ದೇಶವಿದ್ದು ಅದಕ್ಕಾಗಿ ಯೋಜನೆ ರೂಪಿಸಲಾಗಿದೆ. ಎಲ್ಲ ಬ್ರಾಂಚ್ ಗಳಲ್ಲೂ ಗ್ರಾಹಕರಿಗೆ ಯಾವುದೇ ರೀತಿಯಲ್ಲಿ ಮೋಸ ವಂಚನೆಯಾಗದಂತೆ ಕಾರ್ಯ ನಿರ್ವಹಿಸಲಿದ್ದೇವೆ. ಮುಂದಿನ ದಿನಗಳಲ್ಲಿ ಗ್ರಾಹಕರಿಂದಲೇ ಪಾರದರ್ಶಕವಾಗಿ ಲಕ್ಕಿ ಡ್ರಾ ನಡೆಸಲಾಗುವುದು“ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಡ್ವೈಸರಿ ಬೋರ್ಡ್ ಮೆಂಬರ್ ಕಿಶನ್ ಭಟ್, ಸಿಇಓ ಸಾಜಿದ್ ಮತ್ತಿತರರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ