ಮಂಗಳೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ರಜತ ಮಹೋ ತ್ಸವ ಮತ್ತು ಶ್ರೀ ಡಾ. ಬಾಲಗಂಗಾಧರನಾಥ ಮಹಾ ಸ್ವಾಮೀಜಿ ಅವರ ಪಟ್ಟಾಭಿಷೇಕ ಸುವರ್ಣ ಮಹೋತ್ಸವ ನವೆಂಬರ್ ಮತ್ತು ಜನವರಿ ತಿಂಗಳಲ್ಲಿ ವೈಭವದಿಂದ ನಡೆಯಲಿದೆ ಎಂದು ಡಾ. ಧರ್ಮಪಾಲನಾಥ ಸ್ವಾಮೀಜಿ ತಿಳಿಸಿದರು. ಅವರು ಕಾವೂರು ಶಾಖಾಮಠದಲ್ಲಿ ಆಯೋಜಿದ್ದ ಪತ್ರಿಕಾ ಗೋಷ್ಠಿ ಯಲ್ಲಿ ಮಾತನಾಡಿ, "ನ.26ರಂದು ರಜತ ಮಹೋತ್ಸವದ ಅಂಗವಾಗಿ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಲಿದ್ದು, ಜ.1ಮತ್ತು 2ರಂದು ಪಟ್ಟಾಭಿಷೇಕ ಸುವರ್ಣ ಮಹೋತ್ಸವ ನಡೆಯಲಿದೆ. ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕ್ಯಾಂಪಸ್ ಉದ್ಘಾಟನೆ ಹಾಗೂ ಬಿಜಿಎಸ್ 5ನೆ ಸುವರ್ಣ ಭವನಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಕಾವೂರಿನಿಂದ ಕಾಲೇಜಿನವರೆಗೆ ಕುಣಿತ ಭಜನೆಯ ಜೊತೆಗೆ ನಾನಾ ಕಲಾ ತಂಡಗಳೊಂದಿಗೆ ಮೆರವಣಿಗೆ ನಡೆಯಲಿದೆ. ನಾಡಿನ ಮಠಾಧೀಶರು, ಸಾಹಿತಿಗಳು, ಸಾಧು-ಸಂತರು, ರಾಜಕೀಯ ನೇತಾರರು ಶ್ರೀ ಮಠದ ಸದ್ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದರು.
ರಜತ ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಪಿ.ಎಸ್. ಪ್ರಕಾಶ್ ಮಾತನಾಡಿ, "ಬಿಜಿಎಸ್ ಕರಾವಳಿ ರತ್ನ ಮಹೋತ್ಸವದಲ್ಲಿ ಆದಿಚುಂಚನ ಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದ ಮಹಾ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಶ್ರೀಗುರು ದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ.
ಶಾಸಕ ಡಾ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕ ಸಂಜೀವ ಮಠಂದೂರು, ಮನಪಾ ಸದಸ್ಯ ಸುಮಂಗಳ ಭಾಗ ವಹಿಸಲಿದ್ದಾರೆ, '' ಎಂದರು.
ರಜತ ಮಹೋತ್ಸವ ಸಮಿತಿ ಉಪಾಧ್ಯಕ್ಷರಾದ ಹರಿನಾಥ್, ಕಿರಣ್ ಬುಡ್ಡೆಗುತ್ತು, ಸುರೇಶ್ ಬೈಲು, ಯೋಗೀಶ್ ಶೆಟ್ಟಿ ಜೆಪ್ಪು, ಪ್ರಧಾನ ಕಾರ್ಯದರ್ಶಿ ರಣದೀಪ್ ಕಾಂಚನ್, ಸಹ ಕಾರ್ಯದರ್ಶಿ ರಕ್ಷಿತ್ ಪುತ್ತಿಲ, ಕೋಶಾಧಿಕಾರಿ ನರಸಿಂಹ ಕುಲಕರ್ಣಿ, ಮಂಗಳೂರು ಶಾಖಾ ಮಠದ ಮ್ಯಾನೇಜರ್ ಸುಬ್ಬ ಕಾರಡ್ಕ ಉಪಸ್ಥಿತರಿದ್ದರು.
ರಜತ ಮಹೋತ್ಸವ ಸಮಿತಿ ಅಧ್ಯಕ್ಷಡಾ.ವೈ. ಭರತ್ ಶೆಟ್ಟಿ ಮಾತನಾಡಿ, ''ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಕಾವೂರು ಶಾಖಾ ಮಠದ ರಜತ ಮಹೋ ತ್ಸವ ಅಂಗವಾಗಿ ನ.26ರಂದು ಬಿಜಿಎಸ್ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಡಾ.ಕೆ. ಚಿನ್ನಪ್ಪಗೌಡ (ಸಾಹಿತ್ಯ), ಕೆ.ವಿ. ರಾವ್ (ವಿಜ್ಞಾನ), ಗುರುವಪ್ಪ ಬಾಳೆಪುಣಿ (ಮಾಧ್ಯಮ), ಡಾ.ರಮೇಶ್, ಡಾ. ಸತೀಶ್ ಕಲ್ಲಿಮಾರ್ (ವೈದ್ಯಕೀಯ), ಪ್ರಕಾಶ್ ಅಂಚನ್ (ಶಿಕ್ಷಣ), ಮಾಧವ ಸುವರ್ಣ (ಧಾರ್ಮಿಕ), ಭಕ್ತಿಭೂಷಣ್ ದಾಸ್ (ಗೋಸೇವೆ), ಪುಷ್ಪಾವತಿ ಬುಡ್ಡೆಗುತ್ತು (ನಾಟಿ ವೈದ್ಯೆ), ವೀಣಾ ಕುಲಾಲ್ (ಸಮಾಜಸೇವೆ), ನರಸಿಂಹ ರಾವ್, ಗೋಪಾಲಕೃಷ್ಣ, ಸುರೇಶ್ (ಕೃಷಿ ಕ್ಷೇತ್ರ), ಗೋಪಿನಾಥ್ ಭಟ್ (ಸಿನಿಮಾ), ಜಗದೀಶ್ ಆಚಾರ್ಯ (ಸಂಗೀತ), ಮಂಜುಳಾ ಸುಬ್ರಹ್ಮಣ್ಯ(ನೃತ್ಯ), ಶಿವರಾಮ ಪಣಂಬೂರು(ಯಕ್ಷಗಾನ), ಸುಜಾತ ಮಾರ್ಲ (ಯೋಗ), ಸಚಿನ್ ಸುಂದರ ಗೌಡ, ರಾಧಾಕೃಷ್ಣ, ಕೇಶವ ಅಮೈ, ಕುಸುಮಾಧರ (ಉದ್ಯಮ), ಅಭಿಷೇಕ್ ಶೆಟ್ಟಿ (ಕ್ರೀಡೆ), ಮಾಧವ ಉಳ್ಳಾಲ್ (ಪರಿಸರ), ವಿಕ್ರಂ ಬಿ. ಶೆಟ್ಟಿ (ಚಿತ್ರಕಲೆ) ಅವರನ್ನು ಬಿಜಿಎಸ್ ಕರಾವಳಿ ರತ್ನ ಗೌರವ ನೀಡಿ ಪುರಸ್ಕರಿಸಲಾಗುವುದು ಎಂದರು.