image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಾಮೋದರ ಆರ್. ಸುವರ್ಣ ಜನ್ಮಶತಾಬ್ಬಿ ಸಂಭ್ರಮ: ಶಕಪುರುಷನಿಗೆ ಶತ ನಮನ ಕೃತಿ ಬಿಡುಗಡೆ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ

ದಾಮೋದರ ಆರ್. ಸುವರ್ಣ ಜನ್ಮಶತಾಬ್ಬಿ ಸಂಭ್ರಮ: ಶಕಪುರುಷನಿಗೆ ಶತ ನಮನ ಕೃತಿ ಬಿಡುಗಡೆ, ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಿಂದುಳಿದ ಸಮಾಜಗಳ ಶ್ರೇಯೋಭಿವೃದ್ಧಿಗಾಗಿ ನಿಸ್ವಾರ್ಥ, ಪ್ರಾಮಾಣಿಕತೆಯಿಂದ ಸೇವೆಗೈದಿರುವ ಹಿರಿಯ ಚೇತನ ದಿ.ದಾಮೋದರ ಆರ್ ಸುವರ್ಣರವರ, ಪ್ರಸ್ತುತ ಈ ವರುಷ ಜನ್ಮಶತಾಬ್ಬಿಯ ವಿಶೇಷ ಸಂಭ್ರಮದ ಅಂಗವಾಗಿ ದಾಮೋದರ್ ಆರ್ ಸುವರ್ಣ ರ ಬದುಕು, ಸಾಧನೆ, ಸ್ಮೃತಿ ಸಂಪುಟ "ಶಕಪುರುಷನಿಗೆ ಶತ ನಮನ ಕೃತಿ ಬಿಡುಗಡೆ", ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ನಗರದ ಕುದ್ರೋಳಿಯ ಗೋಕರ್ಣನಾಥ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ದಾಮೋದರ ಸುವರ್ಣ ಎಜುಕೇಷನಲ್ ಅ್ರಸ್ಟ್ ನ ಅಧ್ಯಕ್ಷರಾದ ನವೀನ್ ಚಂದ್ರ ಡಿ ಸುವರ್ಣ ತಿಳಿಸಿದರು.  ನಗರದ‌ ಖಾಸಗಿ ಹೊಟೇಲಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ‌ ಅವರು, 24.09.1924 ರಂದು ಜನಿಸಿರುವ ದಾಮೋದರ ಆರ್.ಸುವರ್ಣ ರವರು ತಮ್ಮ ಜೀವಿತಾವಧಿಯ 69 ವರುಷಗಳ ಬದುಕನ್ನು ಕೇವಲ ಸಂಸಾರ, ತನ್ನ ಕುಟುಂಬ ಎಂದು ಯೋಚಿಸದೆ ಸಮಸ್ತ ಹಿಂದುಳಿದ ಸಮಾಜ ತನ್ನ ಕುಟುಂಬ ಎಂಬ ಕಲ್ಪನೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದವರು. ಶೋಷಿತ ಸಮಾಜಕ್ಕೆ ಸಾಮಾಜಿಕ ಕ್ರಾಂತಿಯ ಮೂಲಕ ಭವ್ಯ ಭವಿಷ್ಯ ಕರುಣಿಸಿದ ಯುಗಪುರುಷ ಬ್ರಹ್ಮಶ್ರೀ ನಾರಾಯಣ ಗುರುಗಳ ತಮ್ಮ ಸಿದ್ಧಾಂತಗಳಿಗೆ ಅನುಗುಣವಾಗಿ ನಿರಂತರವಾಗಿ ದುಡಿದವರು. 1976 ರಲ್ಲಿ ಬಿಲ್ಲವರ ಮಾತೃ ಸಂಸ್ಥೆಯಾಗಿರುವ ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಆಡಳಿತ ಚುಕ್ಕಾಣಿ ಯನ್ನು ಹಿಡಿದು ಕಾಲಿಗೆ ಚಕ್ರ ಕಟ್ಟಿದ ರೀತಿಯಲ್ಲಿ ಅವಳಿ ಜಿಲ್ಲೆಗಳಲ್ಲಿ ಸುತ್ತಾಡಿ ಸಮಾಜದ ಸಂಘಟನೆಯನ್ನು ಬೆಳೆಸಿದವರು. ಗ್ರಾಮ ಗ್ರಾಮಗಳಲ್ಲಿ ಬಿಲ್ಲವ ಸಂಘ ಗಳ ಉಗಮಕ್ಕೆ ನಾಂದಿ ಹಾಡಿದವರು.

1977 ರಲ್ಲಿ ಆರ್ಥಿಕ ದುರ್ಬಲ ಕುಟುಂಬದ ವಿದ್ಯಾರ್ಥಿಗಳಿಗೆ ಅಂಗ್ಲ ಮಾಧ್ಯಮ ಶಿಕ್ಷಣ ಗಗನಕುಸುಮವಾಗಿದ್ದ ಕಾಲಘಟ್ಟದಲ್ಲಿ ತಮ್ಮ ಸ್ವಂತ ದುಡಿಮೆಯ ಆದಾಯದಿಂದ ಕುದ್ರೋಳಿಯಲ್ಲಿ ನಾರಾಯಣ ಗುರು ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ಈಗಲೂ ಇಡೀ ಜಿಲ್ಲೆಯಲ್ಲಿ ಅತೀ ಕನಿಷ್ಠ ಶುಲ್ಕದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ನೀಡುವ ಸಂಸ್ಥೆ ಇದಾಗಿದೆ. ಪ್ರಸ್ತುತ ಈ ಸಂಸ್ಥೆ ಪ್ರಾಥಮಿಕ, ಪ್ರೌಡ, ಪದವಿ ಪೂರ್ವ, ಪದವಿ, ತಾಂತ್ರಿಕ ವಿಭಾಗಗಳಿಗೆ ವಿಸ್ತರಣೆಯಾಗಿ ಸುಮಾರು ಒಂದುವರೆ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ, ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಕಲಿತು ತಮ್ಮ ಭವ್ಯ ಭವಿಷ್ಯ ರೂಪಿಸಿದ್ದಾರೆ.

ದಾಮೋದರ ಆ‌ರ್.ಸುವರ್ಣ ರವರದು ಒಬ್ಬ ಅಸಾಧಾರಣ ಶಕ್ತಿಯ ವ್ಯಕ್ತಿತ್ವ, ಸರ್ಕಾರ ಗಳು ಪ್ರಸ್ತುತ ಜಾರಿಗೊಳಿಸುವ ನಿರ್ಧಾರಗಳನ್ನು ಅವರು ಅಂದು ತಮ್ಮ ಅವಧಿಯಲ್ಲಿಯೇ ಕಾರ್ಯಗತ ಮಾಡಿದವರು. 1980 ರಲ್ಲಿ ಎರಡು ವ್ಯಾನ್ ಮೂಲಕ ಸಂಚಾರಿ ಕ್ಲಿನಿಕ್ ನ್ನು ಸ್ಥಾಪಿಸಿ ವೈದ್ಯರುಗಳೊಂದಿಗೆ ಅವಿಜಿತ ದ. ಕ. ಜಿಲ್ಲೆಯಾದ್ಯಂತ ಗ್ರಾಮಗ್ರಾಮಗಳಿಗೆ ಸಂಚರಿಸುವ ಮೂಲಕ ಉಚಿತವಾಗಿ ಬಡಜನರ ಆರೋಗ್ಯ ರಕ್ಷಣೆಗೆ ವಿಶೇಷ ಕಾಳಜಿ ತೋರಿದವರು. ಬಡಹೆಣ್ಣು ಮಕ್ಕಳ ಹೊಸಜೀವನಕ್ಕೆ ದಿವ್ಯ ಸ್ಪರ್ಶ ನೀಡಲು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಾಮೂಹಿಕ ವಿವಾಹ, ದೀನ ದಲಿತರ ಸೇವೆಗಾಗಿ ವಿಶೇಷ ಅನುದಾನ ಗಳನ್ನು ನೀಡಿದ ಮಹನೀಯರು.

ಪ್ರಸ್ತುತ ಈ ವರುಷ ಅವರ ಜನ್ಮಶತಾಬ್ಬಿಯನ್ನು ಅವರ ಆದರ್ಶಗಳನ್ನು ಪರಿಪಾಲಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ದಾಮೋದರ ಆ‌ರ್.ಸುವರ್ಣ ಜನ್ಮಶತಾಬ್ಬಿ ಸಂಭ್ರಮ ನವೆಂಬರ್ 24 ಆದಿತ್ಯವಾರದಂದು ಬೆಳಿಗ್ಗೆ 10.00 ಘಂಟೆಗೆ ಮಂಗಳೂರಿನ ಕುದ್ರೋಳಿಯ ಶ್ರೀ ಗೋಕರ್ಣನಾಥ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ಈ ಸಂಧರ್ಭದಲ್ಲಿ ಸುಮಾರು 50 ಲಕ್ಷಕ್ಕೂ ಅಧಿಕ ಮೊತ್ತದ ವಿಧ್ಯಾರ್ಥಿ ವೇತನವನ್ನು ವೃತ್ತಿಪರ ಶಿಕ್ಷಣ ಪಡೆಯುವ ಆರ್ಥಿಕ ದುರ್ಬಲ ಕುಟುಂಬದ ಹಿಂದುಳಿದ ಸಮಾಜದ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು. ಅದೇ ರೀತಿ ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಸಾಧಕರಿಗೆ ಅಭಿನಂದನೆ ನಡೆಸಲಾಗುವುದು ಎಂದರು.

ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯ ರವರು ಈ ಕಾರ್ಯಕ್ರಮವನ್ನು ಉದ್ಘಾಟನಾ ಮಾಡಲಿದ್ದು, ಕರ್ನಾಟಕ ವಿಧಾನ ಸಭೆಯ ಸಭಾಪತಿಗಳಾದ ಗೌರವಾನ್ವಿತ ಯು. ಟಿ. ಖಾದರ್ ರವರು ಸಾಹಿತಿಗಳಾದ ಮುದ್ದು ಮೂಡುಬೆಳ್ಳೆಯವರು ರಚಿಸಿರುವ ದಾಮೋದರ ಆರ್.ಸುವರ್ಣರವರ ಬದುಕಿನ 'ಶಕಪುರುಷನಿಗೆ ಶತನಮನಗಳು' ಕೃತಿಯನ್ನು ಬಿಡುಗಡೆ ಮಾಡಲಿದ್ದಾರೆ. ಕೇಂದ್ರದ ಸಚಿವೆ ಮಾನ್ಯ ಕು.ಶೋಭಾ ಕರಂದ್ಲಾಜೆಯವರು ವಿದ್ಯಾರ್ಥಿವೇತನ ವಿತರಣೆಗೆ ಚಾಲನೆ ನೀಡಲಿದ್ದಾರೆ. ಲೋಕಸಭಾ ಸಚೇತಕರು, ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಪ್ರತಿಭಾ ಪುರಸ್ಕಾರ ಮಾಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ರಾಜ್ಯ ಸಚಿವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಮಂತ್ರಿ ಗಳಾದ ದಿನೇಶ್ ಗುಂಡೂರಾವ್, ಸಚಿವರಾದ ಮಧು ಬಂಗಾರಪ್ಪ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾ, ಬ್ರಿಜೇಶ್ ಚೌಟ, ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದ ರಾಜು, ಶಾಸಕರಾದ ಸುನೀಲ್ ಕುಮಾರ್, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಉಉದಯಚಂದ್ರ ಡಿ ಸುವರ್ಣ, ವಿನಯಚಂದ್ರ ಡಿ ಸುವರ್ಣ ಮತ್ತು ಜಗದೀಪ್ ಡಿ ಸುವರ್ಣ

Category
ಕರಾವಳಿ ತರಂಗಿಣಿ