ಮಂಗಳೂರು: ನಗರದ ಫಲ್ನೀರ್ ನಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯಲ್ಲಿ ಸ್ವರ್ಣಕೃತಿಯ ಅನಾವರಣ ಕಾರ್ಯಕ್ರಮವು ಇಂದು ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುನೀಶ್ ವೋರ್ಲ್ಡ್ ಆಫ್ ಬ್ಯೂಟಿ ಮತ್ತು ಸುನೀಶ್ ಮೇಕ್‌ಅಪ್ ಸ್ಟುಡಿಯೋದ ಮಾಲಕಿ ಸುನೀಶಾ ಸಶಾಂಕ್ ಸ್ವರ್ಣಕೃತಿಯನ್ನು ಅನಾವರಣಗೊಳಿಸಿ, ಮಾತನಾಡಿ, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯ ಸಿಬ್ಬಂದಿ ವರ್ಗವು ಗ್ರಾಹಕರ ಮನತೃಪ್ತಿಗೊಳಿಸುವಂತಹ ಸೇವೆಯನ್ನು ನೀಡುತ್ತಿದೆ. ಅದುವೇ ಇವರ ಯಶಸ್ಸಿನ ಗುಟ್ಟಾಗಿದೆ. ಇಲ್ಲಿ ಗ್ರಾಹಕರ ನಿರೀಕ್ಷೆಗೂ ಮೀರಿದ ಕರಕುಶಲ ಚಿನ್ನದ ಆಭರಣಗಳ ಅಪೂರ್ವ ಸಂಗ್ರಹವಿದೆ ಎಂದರು.
ಈ ಸಂದರ್ಭ ಮಳಿಗೆಯ ಸ್ಟೋರ್ ಹೆಡ್ ಶರತ್ ಚಂದ್ರನ್, ಶೋರೂಮ್ ಮ್ಯಾನೇಜರ್ ರಘುರಾಮ್, ಸೇಲ್ಸ್ ಮ್ಯಾನೇಜರ್ ಗಿರೀಶ್, ಡೆಪ್ಯುಟಿ ಮ್ಯಾನೇಜರ್ ಮುಹಮ್ಮದ್ ಸಮೀರ್, ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್, ಸೊನಾಲ್ ಸುವರ್ಣ ಉಪಸ್ಥಿತರಿದ್ದರು.