ಮಂಗಳೂರು: ವಾತ್ಸಲ್ಯ ಛಾಯಾ ಟ್ರಸ್ಟ್ ಇವರ ವಾತ್ಸಲ್ಯ ಛಾಯಾ ಹಿರಿಯ ನಾಗರಿಕರ ಹಗಲು ಯೋಗ ಕ್ಷೇಮ ಕೇಂದ್ರದ ಉದ್ಘಾಟನೆಯು 21ನೇ ತಾರೀಕು ಗುರುವಾರ ಬೆಳಿಗ್ಗೆ 9:30ಗೆ ಬಲ್ಲಾಳ್ ಬಾಗ್ ನ ರಸ್ಕ್ಯುನ ಕಾಂಪೌಂಡ್ ಮಂಗಳೂರಿನಲ್ಲಿ ನಡಯಲಿದೆ ಎಂದು ಟ್ರಸ್ಟ್ ನ ಅಧ್ಯಕ್ಷರಾದ ಸೂರಜ್ ಸಾಗರ್ ಕುಂಪಲ ಹೇಳಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ವಿವರ ನೀಡಿ, ಬೆಳಿಗ್ಗೆ 9ಗಂಟೆಯಿಂದ ಸಂಜೆ 6ಗಂಟೆಯವರೆಗೆ ಕೇಂದ್ರವು ಕಾರ್ಯ ನಿರ್ವಹಿಸಲಿದ್ದು, ಕೇಂದ್ರದಲ್ಲಿ ಬೆಳಿಗ್ಗೆ ಲಘು ಉಪಹಾರ ಇರಲಿದೆ. 60ವಯಸ್ಸಿನ ಮೇಲಿನವರು ಹೆಸರು ನೊಂದಾಯಿಸಿಕೊಳ್ಳಬಹುದು. ಅವರಿಗೆ ಸಮಯ ಕಳೆಯಲು ಬೇಕಾದ ಚಟುವಟಿಕೆಗಳನ್ನು ಇಲ್ಲಿ ಮಾಡಲಾಗುತ್ತದೆ. ಕೇಂದ್ರದಲ್ಲಿ ಇಬ್ಬರು ನರ್ಸ್ ಗಳು ಮತ್ತು ಒಬ್ಬ ಎಮ್ ಬಿ ಬಿ ಎಸ್ ಡಾಕ್ಟರ್ ಇದ್ದು ಹಿರಿಯರ ಯೋಗಕ್ಷೇಮ ನೋಡಿಕೊಳ್ಳಲಿದ್ದಾರೆ. ಸುಮಾರು 40 ಜನರನ್ನು ನೋಡಿಕೊಳ್ಳುವ ವ್ಯವಸ್ಥೆ ಇದೆ ಎಂದರು. ಕೇಂದ್ರವನ್ನು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸಲಿದ್ದು, ಜಿಲ್ಲಾಧಿಕಾರಿಗಳಾದ ಡಾ. ಮಲೈ ಮುಗಿಲನ್ ಎಂ ಪಿ ದೀಪ ಪ್ರಜಲನೆ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ ವೇದವ್ಯಾಸ ಕಾಮತ್ ವಹಿಸಿಕೊಳ್ಳಲಿದ್ದು, ಅತಿಥಿಗಳಾಗಿ ಮೇಯರ್ ಮನೋಜ್ ಕುಮಾರ್ ಶಾಸಕರುಗಳಾದ ಐವನ್ ಡಿಸೋಜಾ, ಕಿಶೋರ್ ಕುಮಾರ್ ಪುತ್ತೂರು, ಡಾ. ವೈ ಭರತ್ ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚೇತನ್ ಶೆಟ್ಟಿ, ಜೀವನ್ ಕೊಲ್ಯ, ಪ್ರತಾಪ್ ಚಿಲಿಂಬಿ ಮತ್ತು ಚೇತನ್ ಪನೊಲಿಬೈಲ್ ಉಪಸ್ಥಿತರಿದ್ದರು.