ಪುತ್ತೂರು: ಮಾಣಿ - ಮೈಸೂರು ರಾಷ್ಟ್ರೀಯ ಹೆದ್ದಾರಿ, ಪೆರಾಜೆಯ ಕಲ್ಬರ್ಪೆ ಬಳಿ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದೆ. ಗಾಳಿ ಮಳೆಯಿಂದಾಗಿ ಮರ ತೆರವುಗೊಳಿಸುವ ಕಾರ್ಯಕ್ಕೆ ಸ್ವಲ್ಪ ಮಟ್ಟಿಗೆ ತಡೆ ಉಂಟಾಯಿತಾದರೂ, ಈಗ ಮರ ತೆರವುಗೊಂಡು ರಸ್ತೆ ಸಂಚಾರ ಸುಗಮಗೊಂಡಿದೆ ಎಂದು ವರದಿಯಾಗಿದೆ.