image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪರವಾನಿಗೆ ಇಲ್ಲದೆ ಕ್ಯಾಟರಿಂಗ್ ನಡೆಸುವವರ ವಿರುದ್ಧ ಕ್ರಮಕ್ಕೆ ಕ್ಯಾಟರಿಂಗ್ ಮಾಲಕರ ಸಂಘದ ಒತ್ತಾಯ

ಪರವಾನಿಗೆ ಇಲ್ಲದೆ ಕ್ಯಾಟರಿಂಗ್ ನಡೆಸುವವರ ವಿರುದ್ಧ ಕ್ರಮಕ್ಕೆ ಕ್ಯಾಟರಿಂಗ್ ಮಾಲಕರ ಸಂಘದ ಒತ್ತಾಯ

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಮದುವೆ ಇನ್ನಿತರ ಶುಭಕಾರ್ಯಗಳ ಆಹಾರ ಪೂರೈಸುವರರಲ್ಲಿ ಪೈಪೋಟಿ ನಡೆಯುತ್ತಿದ್ದು, ಪರವಾನಿಗೆ ಇಲ್ಲದೆ ಕ್ಯಾಟರಿಂಗ್ ನಡೆಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ದ.ಕ. ಕ್ಯಾಟರಿಂಗ್ ಮಾಲಕರ ಸಂಘದ ಅದ್ಯಕ್ಷ ಅಬ್ದುಲ್ ರಶೀದ್ ಆಗ್ರಹಿಸಿದರು.  ಅವರು  ಇಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕಳೆದ 6 ವರ್ಷಗಳ ಹಿಂದೆ ಕ್ಯಾಟರಿಂಗ್ ಮಾಲಕರ ಸಂಘ ಸ್ಥಾಪನೆಗೊಂಡಿದ್ದು, ಜಿಲ್ಲೆಯಲ್ಲಿ 6 ವರ್ಷ ದಿಂದ ಕೇವಲ 250 ಮಾಲಕರು ನೋಂದಾಯಿಸಿದ್ದು. ಎಲ್ಲರನ್ನೂ ಒಗ್ಗೂಡಿಸಲು ಈ ಸಂಘ ಸ್ಥಾಪಿಸಿದ್ದು ಜಿಲ್ಲೆಯಲ್ಲಿ ಇನ್ನೂ 750 ಕ್ಕೂ ಹೆಚ್ಚು ಕ್ಯಾಟರಿಂಗ್ ಮಾಲಕರು ಸಂಘ ಸೇರಲು ಹಿಂದೆ ಸರಿಯುತ್ತಿದ್ದಾರೆ ತಿಳಿಸಿದ್ದಾರೆ. ಅಷ್ಟೇ ಇಲ್ಲದೇ ನೊಂದಾವಣೆಗೆ ಪರವಾನಗಿ ಕಡ್ಡಾಯವಾಗಿದ್ದು, ಹೆಚ್ಚಿನವರು ಪರವಾನಗಿ ಮಾಡಿಲ್ಲ. ಕ್ಯಾಟರಿಂಗ್ ಮಾಲಕರ ಸಂಘದ ವತಿಯಿಂದ ಆಹಾರ ಪದ್ದತಿಯ ಬಗ್ಗೆ ಎಲ್ಲಾ ನೋಂದಾಯಿತ ಕ್ಯಾಟರಿಂಗ್ ಮಾಲಕರಿಗೆ ಮಾರ್ಗದರ್ಶನ ನೀಡುತ್ತಿದ್ದು ಪ್ರಸ್ತುತ ಸಂಘದ ಎಲ್ಲಾ ಸದಸ್ಯರು ಭಾಗಿಯಾಗಿರುತ್ತಾರೆ.

ಆದರೆ ಇತ್ತೀಚ್ಚಿಗೆ ಜಿಲ್ಲೆಯಲ್ಲಿ ಕಳಪೆ ಆಹಾರ ಪೂರೈಸುತ್ತಿರುವ ಪರವಾನಿಗೆ ಇಲ್ಲದ ಕ್ಯಾಟರಿಂಗ್ ಮಾಲಕರ ವಿರುದ್ಧ ಕ್ರಮವಹಿಸಬೇಕು ಹಾಗೂ ತ್ಯಾಜ್ಯ ವಿಲೇವಾರಿಗೆ ನೋಂದಾಯಿತ ಪರವಾನಿಗೆ ಇರುವ ಮಾಲಕರು ಸರಿ ಸುಮಾರು 40-1 ಲಕ್ಷದ ವರೆಗೆ ತೆರೆಗೆ ಪಾವತಿಸಿದ್ದು ಇಲ್ಲಿ ತೆರಿಗೆ ಪಾವತಿಸದವರಿಗೆ ಎಲ್ಲಾ ಬಿಟ್ಟಿಯಾಗಿ ದೊರೆಯುತ್ತಿದೆಂದು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲೆಯಲ್ಲಿ 1000 ಮಿಗಿಲಾಗಿ ಕ್ಯಾಟರಿಂಗ್ ಮಾಡುತ್ತಿದ್ದು,ನೊಂದಾಯಿಸದ 250 ಜನರ ತೆರಿಗೆಯನ್ನು 750 ಜನ ಲಾಭ ಪಡೆಯುತ್ತಿದ್ದಾರೆ.ಈ ಬಗ್ಗೆ ಜಿಲ್ಲಾಧಿಕಾರಿ ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಕ್ರಮವಹಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ. ಕೃತಕ ಮಾರಕ ಕಲರ್, ಕಳಪೆ ಎಣ್ಣೆ ಬಳಸುವವರ ವಿರುದ್ದವೂ ಕ್ರಮವಹಿಸುವಂತೆ ಹಾಗೂ ಪರವಾನಿಗೆ ಇದ್ದವರ ಜೊತೆ ಪರವಾನಿಗೆ ಇಲ್ಲದವರು ಪೈಪೋಟಿಯ ವ್ಯಾಪಾರ ನಡೆಸುತ್ತಿದು ಈ ಬಗ್ಗೆ ಸೂಕ್ತ ಕ್ರಮವಹಿಸಬೇಕಾಗಿ ವಿನಂತಿಸಿದರು.

ಪತ್ರಿಕಾಗೋಷ್ಠಿಯಲ್ಲಿ  ಗೌರವಾಧ್ಯಕ್ಷ ಸುಧಾಕರ ಕಾಮತ್ , ಉಪಾಧ್ಯಕ್ಷ ವಿಜಯಕುಮಾರ್, ಕಾರ್ಯದರ್ಶಿ ಸುಧಾಕರ ಪಡಿವಾಳ್, ಮಾಜಿ ಅಧ್ಯಕ್ಷ ರಾಜಗೋಪಾಲ್ ರೈ ಹಾಗೂ ಸದಸ್ಯರು ಉಪಸ್ಥಿತರಿದ್ದರು

Category
ಕರಾವಳಿ ತರಂಗಿಣಿ