ಪುತ್ತೂರು : ಪುರಾಣ ಪ್ರಸಿದ್ದ ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಸ್ತ್ರ ಶಂಹಿತೆಗೆ ದೇವಳದ ಆಡಳಿತ ಮಂಡಳಿ ಮಾರ್ಗ ಸೂಚಿ ಬಿಡುಗಡೆ ಮಾಡಿದೆ. ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಿತ್ತಿರುವ ಹಿನ್ನೆಲೆಯಲ್ಲಿ ಮತ್ತು ಶಿಸ್ತು ಕಾಪಾಡಲು ಅನುಕೂಲವಾಗುವಂತೆ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ವಸ್ತ್ರ ಸಂಹಿತೆಯ ಸಲುವಾಗಿ ಪ್ರವೇಶ ದ್ವಾರದ ಬಳಿ ಬೋರ್ಡ್ ಅಳವಡಿಸಲಾಗಿದೆ. ಈ ಹಿಂದೆಯೇ ಬೋರ್ಡ್ ಅಳವಡಿಸಿತ್ತಾದರೂ ಕಡ್ಡಾಯವಾಗಿ ಭಕ್ತರು ಅನುಸರಿಸುತ್ತಲ್ಲ. ಹಾಗಾಗಿ ಬಾರಿ ಕೆಲವೊಂದು ಚಿತ್ರಗಳನ್ನು ಬರೆದು ಬೋರ್ಡ್ ಅಳವಡಿಸಿದ್ದು ಮುಂದೆ ಕ್ಷೇತ್ರಕ್ಕೆ ಬರುವ ಎಲ್ಲ ಭಕ್ತಾಧಿಗಳು ಈ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವಂತೆ ಸಾಮಾಜಿಕ ಜಾಲ ತಾಣಗಳ ಮೂಲಕ ಮನವಿ ಮಾಡಲಾಗುತ್ತಿದೆ.