image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಲಂಚುಲಾಲ್ ನೇತೃತ್ವದ ಅಸ್ತ್ರ ಸಂಸ್ಥೆಯಿಂದ ಉಚಿತ ಅಂಬುಲೆನ್ಸ್ ಕೊಡುಗೆ ಮತ್ತು ಸಾಮೂಹಿಕ ಮದುವೆ ಕಾರ್ಯಕ್ರಮ

ಲಂಚುಲಾಲ್ ನೇತೃತ್ವದ ಅಸ್ತ್ರ ಸಂಸ್ಥೆಯಿಂದ ಉಚಿತ ಅಂಬುಲೆನ್ಸ್ ಕೊಡುಗೆ ಮತ್ತು ಸಾಮೂಹಿಕ ಮದುವೆ ಕಾರ್ಯಕ್ರಮ

ಮಂಗಳೂರು: ಲಂಚುಲಾಲ್ ನೇತೃತ್ವದ ಅಸ್ತ್ರ ಸಂಸ್ಥೆಯಿಂದ ಉಚಿತ ಅಂಬುಲೆನ್ಸ್ ಕೊಡುಗೆ ಮತ್ತು ಸಾಮೂಹಿಕ ಮದುವೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಂಚುಲಾಲ್ ಕೆ.ಎಸ್. ತಿಳಿಸಿದ್ದಾರೆ. ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನ.14 ರಂದು ತೊಕ್ಕೊಟ್ಟು ಒಳಪೇಟೆ ಅಂಬೇಡ್ಕರ್ ರಂಗ ಮಂದಿರದಲ್ಲಿ ಅಂಬುಲೆನ್ಸ್ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ತೊಕ್ಕೊಟ್ಟು ಉಳ್ಳಾಲ ನಗರ ವಾಸುಕೀ ಬ್ರಾಂಚ್ ನ ವಿಶ್ವಹಿಂದೂ ಪರಿಷತ್ ಬಜರಂಗದಳಕ್ಕೆ ಈ ಅಂಬುಲೆನ್ಸ್ ಹಸ್ತಾಂತರ ಮಾಡಲಾಗುವುದು ಎಂದರು. ಹಿಂದು-ಮುಸ್ಲಿಂ-ಕ್ರೈಸ್ತ ಸಮುದಾಯದ ಬಡ ಕುಟುಂಬದ ತಲಾ ಒಂದು ಜೋಡಿಗೆ ಸಾಮೂಹಿಕ ವಿವಾಹ ಮಾಡಿಕೊಡಲು ನಿರ್ಧರಿಸಲಾಗಿದೆ.  ಮದುವೆಯಾಗುವ ಜೋಡಿ ಅಂತಿಮಗೊಂಡ ಬಳಿಕ ಸಾಮೂಹಿಕ ಮದುವೆಯ ದಿನಾಂಕ ನಿಗದಿಪಡಿಸಲಾಗುವುದು ಎಂದರು.

ಅಸ್ತ್ರ ಗ್ರೂಪ್ ಉದ್ಯಮದ ಜತೆಗೆ ಯುವ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು, ಕಡುಬಡವರಿಗಾಗಿ ಟ್ರಸ್ಟ್ ಮೂಲಕ ನಾನಾ ರೀತಿಯ  ಸಹಕಾರ ನೀಡುತ್ತಾ ಬಂದಿದ್ದೇವೆ. ಹಾಗೇ ಕ್ರೀಡೆಯಲ್ಲಿ ಆಸಕ್ತಿ ಇದ್ದು, ಬಡತನದಿಂದ ಅದನ್ನು ಮುಂದುವರಿಸಲು ಆಗದೇ ಇದ್ದಲ್ಲಿ ಅಂತವರಿಗೆ ನಮ್ಮನ್ನು ಸಂಪರ್ಕಿಸಿದರೆ ಅವರಿಗೆ ಪೂರ್ಣ ಸಹಕಾರ ನೀಡಲಾಗುವುದು ಎಂದರು. ಪತ್ರಿಕಾಗೋಷ್ಟಿಯಲ್ಲಿ ಪ್ರಕಾಶ್ ಶೆಟ್ಟಿ ಧರ್ಮನಗರ, ಯತೀಶ್ ಪೂಜಾರಿ, ಚರಣ್ ರಾಜ್ ಬಂದ್ಯೋಡು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ