ಮಂಗಳೂರು: ನಗರದ ಬೋಳೂರಿನಲ್ಲಿ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ದೇವಿಯವರು ಪ್ರಾಣ ಪ್ರತಿಷ್ಠೆಗೈದಿರುವ ವಿಶಿಷ್ಠ ದೇವಾಲಯ ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರ. 2008 ರಲ್ಲಿ ಸ್ಥಾಪಿಸಲ್ಪಟ್ಟ ಈ ದೇವಸ್ಥಾನದ ಅಭಿವೃದ್ಧಿ ಹಾಗೂ ಸಮರ್ಪಕ ನಿರ್ವಹಣೆಗಾಗಿ ನೂತನ ಕ್ಷೇತ್ರಾಭಿವೃದ್ಧಿ ಸಮಿತಿಯನ್ನು ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣರವರು ರಚಿಸಿರುತ್ತಾರೆ.
ಡಾ.ಜೀವರಾಜ್ ಸೊರಕೆ ಗೌರವ ಸಲಹೆಗಾರರಾಗಿ, ಗೌರವಾಧ್ಯಕ್ಷರಾಗಿ ಶ್ರೀಮತಿ ಶ್ರುತಿ ಸನತ್ ಹೆಗ್ಡೆ, ಸಲಹೆಗಾರರಾಗಿ ಡಾ.ವಸಂತ ಕುಮಾರ್ ಪೆರ್ಲ ಮತ್ತು ಸೇವಾಸಮಿತಿಯ ಅಧ್ಯಕ್ಷ ಸುರೇಶ್ ಅಮೀನ್ ಸೇವೆ ಸಲ್ಲಿಸಲಿದ್ದಾರೆ. ಶ್ರೀ ಬ್ರಹ್ಮಸ್ಥಾನಂ ಕ್ಷೇತ್ರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ವೈ.ಎನ್.ಸಾಲಿಯಾನ್,ಉಪಾಧ್ಯಕ್ಷರುಗಳಾಗಿ ನವೀನ್ ಪಿ ವಿ ಟಿ. ಮತ್ತು ಸುಧಾಕರ್ ಭಟ್.ಕಾರ್ಯದರ್ಶಿ ಡಾ.ದೇವದಾಸ್ ಪುತ್ರನ್ ಮತ್ತು ಕೋಶಾಧಿಕಾರಿಯಾಗಿ ಶಿಲ್ಪಾ ರೈ ಆಯ್ಕೆಯಾಗಿದ್ದಾರೆ.ಪ್ರವೀಣಚಂದ್ರ ಶರ್ಮ,ಟಿ.ಎ.ಅಶೋಕನ್, ರವಿ ಅಲೆವೂರಾಯ ಮತ್ತು ಮಹಾಬಲ ಚೌಟರವರು ಕಾರ್ಯಕಾರಿ ಸದಸ್ಯರರಾಗಿರುತ್ತಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.