image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜನವರಿ 15 ರಿಂದ 19ರವರೆಗೆ ಮಂಗಳೂರಿಗರಿಗೆ ರಸದೌತಣ ಉಣಿಸಲಿದೆ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಸ್ಟ್ರೀಟ್ ಫುಡ್ ಫಿಯಸ್ಟಾ

ಜನವರಿ 15 ರಿಂದ 19ರವರೆಗೆ ಮಂಗಳೂರಿಗರಿಗೆ ರಸದೌತಣ ಉಣಿಸಲಿದೆ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಸ್ಟ್ರೀಟ್ ಫುಡ್ ಫಿಯಸ್ಟಾ

ಮಂಗಳೂರು: ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಬಹು ನಿರೀಕ್ಷಿತ ಮೂರನೇ ಆವೃತ್ತಿಯ ಸ್ಟ್ರೀಟ್ ಫುಡ್ ಫಿಯೆಸ್ಟಾವು 2025 ರ ಜನವರಿ 15 ರಿಂದ 19 ರವರೆಗೆ ಐದು ದಿನಗಳ ಕಾಲ ನಡೆಯಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಘೋಷಿಸಿದರು. ನಗರದ ವಿ.ಟಿ ರಸ್ತೆಯ ಚೇತನ ಶಿಶು ಅಭಿವೃದ್ಧಿ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು, ಕಳೆದೆರಡು ಆವೃತ್ತಿಯ ಸ್ಟ್ರೀಟ್ ಫುಡ್ ಫಿಯೆಸ್ಟಾವು ಯಶಸ್ವಿಯಾಗಿ ಸಾಗಿದ್ದು ಲಕ್ಷಾಂತರ ಜನರನ್ನು ಆಕರ್ಷಿಸಿ ಜಿಲ್ಲೆಯ ಪ್ರವಾಸೋದ್ಯಮವನ್ನು ಉತ್ತೇಜಿಸಿತ್ತು.

ಅದರಂತೆ ಈ ಬಾರಿಯೂ ಹಿಂದಿನ ಆವೃತ್ತಿಗಳಂತೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ, ಪಬ್ಬಾಸ್, ಮಣ್ಣಗುಡ್ಡ, ಕೆನರಾ ಹೈಸ್ಕೂಲ್ ಉರ್ವದ ಸುತ್ತಮುತ್ತ ಸಂಜೆ 4 ರಿಂದ ರಾತ್ರಿ 11ರ ವರೆಗೆ ಫುಡ್ ಫಿಯೆಸ್ಟಾ ಆಯೋಜಿಸಲಾಗಿದ್ದು, ಸಾರ್ವಜನಿಕರಿಗಾಗಿ ವಿವಿಧ ಮನೋರಂಜನಾ ಕಾರ್ಯಕ್ರಮಗಳೂ ನಡೆಯಲಿವೆ. ಬಹು ಬೇಡಿಕೆಯನುಸಾರ ಈ ಬಾರಿ ಸಸ್ಯಾಹಾರಿಗಳಿಗೆಂದೇ ಪ್ರತ್ಯೇಕ ವ್ಯವಸ್ಥೆಯನ್ನು ಸಹ ಮಾಡಲಾಗುವುದಾಗಿದ್ದು, ಮಕ್ಕಳಿಗಾಗಿ ವಿಶೇಷ ವಿನೋದಾವಳಿಗಳನ್ನು ಏರ್ಪಡಿಸಲಾಗುತ್ತದೆ ಎಂದು ತಿಳಿಸಿದರು. 

ಪ್ರತಿಷ್ಠಾನದ ಮಾರ್ಗದರ್ಶಕರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರು ಮಾತನಾಡಿ ಅತ್ಯಂತ ಯಶಸ್ವಿಯಾಗಿ ನಡೆದ ಕಳೆದೆರಡು ಬಾರಿಯ ಫುಡ್ ಫೆಸ್ಟ್ ನಿಂದ ಪ್ರೇರೇಪಣೆಗೊಂಡು ಪುತ್ತೂರು, ಸುರತ್ಕಲ್, ಮೂಡಬಿದ್ರಿ ಸೇರಿದಂತೆ ಅನೇಕ ಕಡೆಗಳಲ್ಲಿ ಇದೇ ರೀತಿಯ ಕಾರ್ಯಕ್ರಮಗಳು ನಡೆದಿವೆ.

ಇದು ಎಲ್ಲೆಡೆ ಆಹಾರ ಸಂಸ್ಕೃತಿಯ ವಿನಿಮಯಕ್ಕೆ ದಾರಿಯಾಗಲಿದ್ದು ಈ ಬಾರಿಯ ಸ್ಟ್ರೀಟ್ ಫುಡ್ ಫಿಯೆಸ್ಟ ಈ ಹಿಂದಿಗಿಂತಲೂ ಹೆಚ್ಚಿನ ಜನರನ್ನು ಆಕರ್ಷಿಸಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ಗೌರವಾಧ್ಯಕ್ಷರಾದ ಗಿರಿಧರ್ ಶೆಟ್ಟಿ, ಅಧ್ಯಕ್ಷರಾದ ದಿವಾಕರ್ ಪಾಂಡೇಶ್ವರ್, ನರೇಶ್ ಶೆಣೈ, ಲಲಿತ್ ಮೆಂಡನ್, ಜಗದೀಶ್ ಕದ್ರಿ, ಅಶ್ವಿತ್ ಕೊಟ್ಟಾರಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ