image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನವೆಂಬರ್ 8ರಂದು ಮಂಗಳೂರಿನ ಪುರಭವನದಲ್ಲಿ ಸಾರ್ವಜನಿಕ ಸಮಾವೇಶ

ನವೆಂಬರ್ 8ರಂದು ಮಂಗಳೂರಿನ ಪುರಭವನದಲ್ಲಿ ಸಾರ್ವಜನಿಕ ಸಮಾವೇಶ

ಮಂಗಳೂರು ನಗರದ ಟೌನ್ ಹಾಲ್‌ನಲ್ಲಿ ನವೆಂಬರ್ 8 ಶುಕ್ರವಾರ ಸಂಜೆ 6.40ಕ್ಕೆ ಸಾರ್ವಜನಿಕ ಸಭೆಯ ಆಯೋಜಿಸಿದೆ ಎಂದುಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು ಅಧ್ಯಕ್ಷರಾದ ಇಸ್ಟಾಕ್ ಪುತ್ತೂರು ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಪ್ರವಾದಿ ಮುಹಮ್ಮದ್  ಪರಿಚಯಿಸಿದ ಆದರ್ಶ ಸಮಾಜ ಮತ್ತು ಇಂದಿನ ಸವಾಲು ಎಂಬುದು ಕಾರ್ಯಕ್ರಮ ಮುಖ್ಯ ಧೈಯ. ಒಂದು ಆದರ್ಶ ಸಮಾಜವನ್ನು ಕಟ್ಟುವ ದಿಶೆಯಲ್ಲಿ ಮಾಡಲಾವ ಅವಲೋಕನ ಈ ಸಭೆ. ಪ್ರವಾದಿ ಮುಹಮ್ಮದ್  ಜನಿಸಿದ ತಿಂಗಳು ಎಂಬ ನೆಲೆಯಲ್ಲಿ ಅವರು ಪರಿಚಯಿದ ಸಾಮಾಜಿಕ ಮೌಲ್ಯಗಳು, ತತ್ವಗಳನ್ನು ಚರ್ಚೆಗೊಡ್ಡುವುದೂ ಈ ಕಾರ್ಯಕ್ರಮದಲ್ಲಿ ನಡೆಯಲಿದೆ. ಹಾಗೆ ಇವತ್ತಿನ ದಿನಗಳಲ್ಲಿ ಉತ್ತಮ ಮೌಲ್ಯಾಧಾರಿತ ಸಮಾಜದ ರಚನೆಗೆ ಎದುರಾಗುತ್ತಿರುವ ಸವಾಲುಗಳೇನು ಎಂಬ ವಿಶ್ಲೇಷಣೆಯೂ ನಡೆಯಿದೆ. ಇದರಲ್ಲಿ ಲೆಫ್ಟಿನೆಂಟ್ ಭವ್ಯಾ ನರಸಿಂಹಮೂರ್ತಿ ಅವರು ಭಾಗವಹಿಸಲಿದ್ದು, ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿ, ವಾರ್ತಾಭಾರತಿ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಮತ್ತು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞ ಭಾಗವಹಿಸಲಿದ್ದಾರೆ. ಸರ್ವ ಧರ್ಮೀಯರನ್ನೂ ಜಮಾಅತೆ ಇಸ್ಲಾಮೀ ಹಿಂದ್ ಈ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತದೆ ಎಂದರು. 

ಪತ್ರಿಕಾಗೋಷ್ಟಿಯಲ್ಲಿ ಅಬ್ದುರಹ್ಮಾನ್ ಕೆ. ಉಪಾಧ್ಯಕ್ಷರು, ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು, ಝಾಕಿರ್ ಹುಸೈನ್ ,ಪ್ರಧಾನ ಕಾರ್ಯದರ್ಶಿ, ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು ಸುಮಯ್ಯ ಹಮೀದುಲ್ಲಾ ,ಸಂಚಾಲಕಿ, ಮಹಿಳಾ ವಿಭಾಗ, ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು,  ಶಹೀದಾ ಉಮರ್ , ಉಪಸಂಚಾಲಕಿ, ಮಹಿಳಾ ವಿಭಾಗ, ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ