ಗುರುಪುರ : ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ವಿಕಾಸನಗರದಲ್ಲಿ ನ. 5ರಂದು ನೂತನ ಅಂಗನವಾಡಿ ಕಟ್ಟಡ ನಿಮಾಣಕ್ಕೆ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು. ನಂತರ
ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಜಾಗ ಕೊಡುಗೆಯಾಗಿ ನೀಡಿದ ಸ್ಥಳೀಯ ಉದ್ಯಮಿ ಜೆರಾಲ್ಡ್ ಲೋಬೊ ಅವರ ಮನೆಗೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದರು. ಮಂಗಳೂರು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶೈಲಾ ಕಾರಗಿ ಮಾತನಾಡಿ, ಇಲಾಖೆಯ 15 ಲಕ್ಷ ಹಾಗೂ ಗುರುಪುರ ಪಂಚಾಯತ್‌ನ 5 ಲಕ್ಷ ರೂ(ಒಟ್ಟು 20 ಲ. ರೂ) ಅನುದಾನದಡಿ ನೂತನ ಅಂಗನವಾಡಿ ನಿರ್ಮಾಣವಾಗಲಿದೆ. ಇದರಿಂದ ಸ್ಥಳೀಯ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಫರಾ ಎಂ, ಉಪಾಧ್ಯಕ್ಷ ದಾವೂದ್ ಬಂಗ್ಲೆಗುಡ್ಡೆ, ಸದಸ್ಯರಾದ ಯಶವಂತ ಶೆಟ್ಟಿ, ಸಚಿನ್ ಅಡಪ, ಜಿ. ಎಂ. ಉದಯ ಭಟ್, ರಾಜೇಶ್ ಸುವರ್ಣ, ಸುನಿಲ್ ಜಲ್ಲಿಗುಡ್ಡೆ, ಹರೀಶ್ ಬಳ್ಳಿ, ಬಬಿತಾ, ರಿಯಾಝ್, ಬುಶ್ರಾ, ರೆಹನಾ, ಮರಿಯಮ್ಮ, ಶಾಹಿಕ್, ಗುರುಪುರ ಗ್ರಾಮ ಪಂಚಾಯತ್ ಪಿಡಿಒ ಪಂಕಜಾ ಶೆಟ್ಟಿ, ಕಾರ್ಯದರ್ಶಿ ಅಶೋಕ್ ಮತ್ತು ಸಿಬ್ಬಂದಿ ವರ್ಗ, ಪ್ರಮುಖರಾದ ಶ್ರೀಕರ ಶೆಟ್ಟಿ ಗುರುಪುರ, ಜಯರಾಮ ವಿಕಾಸನಗರ, ಅಂಗನವಾಡಿ ಕಾರ್ಯಕರ್ತೆ ಪವಿತ್ರಾ, ಗುತ್ತಿಗೆದಾರ ಸುನಿಲ್ ಕುಮಾರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.