image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಕಸಿತ್ ಭಾರತ್ @ 2047: ರಾಷ್ಟ್ರೀಯ ವಿಚಾರ ಸಂಕಿರಣ

ವಿಕಸಿತ್ ಭಾರತ್ @ 2047: ರಾಷ್ಟ್ರೀಯ ವಿಚಾರ ಸಂಕಿರಣ

ಮಂಗಳೂರು: ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು ಹಾಗೂ ಬಿಲ್ಲವ ಎಂಪ್ಲಾಯಿ ವೆಲ್ಫೇರ್ ಸೊಸೈಟಿ (0) ಇದರ ಸಹ ಯೋಗದಲ್ಲಿ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಸಭಾಂಗಣದಲ್ಲಿ ವಿಕಸಿಶ್ ಭಾರತ್ @2047 ಎಂಬ ರಾಷ್ಟ್ರೀಯ ವಿಚಾರ ಸಂಕಿರ್ಣವು ದಿನಾಂಕ 7 ನವೆಂಬರ್ 2024 ರಂದು ನಡೆಯಲಿದೆ ಎಂದು  ವಸಂತ್ ಕಾರಂದೂರು ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೊಷ್ಟಿಯಲ್ಲಿ ವಿಚಾರ ಸಂಕಿರಣದ ಬಗ್ಗೆ ವಿವರ ನೀಡಿ, ಇಂದು ಭಾರತ ದೇಶವು ಮುಂದುವರಿದ ದೇಶಗಳಂತೆ ಅಭಿವೃದ್ಧಿಯ ಪಥದತ್ತ ಸಾಗುತ್ತಾ ಬಂದಿದೆ ಅಭಿವೃದ್ಧಿ ಶೀಲ ರಾಷ್ಟ್ರಗಳು ಹೇಗೆ ಜಾಗತಿಕ ರಂಗದಲ್ಲಿ ವಿಶ್ವ ಮಾನ್ಯತೆಯನ್ನು ಪಡೆದುಕೊಂಡಿದೆಯೋ ಹಾಗೆಯೇ ಆಧುವಿಕ ಯುವ ಸಮುದಾಯವು ಭಾರತದ ಅಭಿವೃದ್ಧಿಯ ಸಾಧನೆಗೆ ತನ್ನದೇ ನೆಲೆಯಲ್ಲಿ ಕಾರ್ಯ ನಿರ್ವಹಿಸಬೇಕಿದೆ.

ನಮ್ಮ ಯುವ ಮನಸ್ಸುಗಳಿಗೆ ಮತ್ತು ಮುಂದಿನ ಪೀಳಿಗೆಗೆ ಭಾರತವು 2047ರಲ್ಲಿ ಶೈಕ್ಷಣಿಕ, ಸಾಮಾಜಿಕ, ವಿಚಾರ- ತಂತ್ರಜ್ಞಾನ ಅಭಿವೃದ್ಧಿ ಇವೆಲ್ಲದರ ಕುರಿತು ಭವಿಷ್ಯತ್ತಿನ ಕಲ್ಮನೆಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣವು ನಡೆಯಲಿರುವುದು.

ಈ ವಿಚಾರ ಸಂಕಿರಣದಲ್ಲಿ ಸುಮಾರು 400 ಕ್ಕಿಂತಲೂ ಹೆಚ್ಚಿನ ಶಿಕ್ಷಣ ತಜ್ಞರು ಕೈಗಾರಿಕೋದ್ಯಮಿಗಳು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಈಗಾಗಲೇ 80ಕ್ಕಿಂತಲೂ ಹೆಚ್ಚು ಸಂಶೋಧನಾ ಬರವಣಿಗೆಗಳು ಈ ವಿಚಾರ ಸಂಕಿರಣದಲ್ಲಿ ಮಂಡಿಸಲು ಬಂದಿರುತ್ತದೆ. ಈ ವಿಚಾರ ಸಂಕಿರ್ಣವು ಬೆಳಿಗ್ಗೆ, ಪೂಫೆಸರ್ ಎಮ್. ಎಸ್. ಮೂಡಿತ್ತಾಯ, ಕುಲಪತಿಗಳು, ನಿಟ್ಟೆ ಡೀಮ್ಡ್ ಟು ಬಿ. ಯೂನಿವರ್ಸಿಟಿ ಇವರಿಂದ ಉದ್ಘಾಟನೆಗೊಳ್ಳಲಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರದ ನಿವೃತ್ತ ಮುಖ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಅಲೆನ್ ಪಿರೇರಾ ದಿಕ್ಕೂಚಿ ಭಾಷಣವನ್ನು ಮಾಡಲಿದ್ದು, ಕಾರ್ಯಕ್ರಮದಲ್ಲಿ ಶ್ರೀ ವಂಕಟೇಶ ಶಿವ ಭಕ್ತಿ ಯೋಗ ಸಂಘದ ಸಂಚಾಲಕರಾದ ಶ್ರೀ ವಸಂತ್ ಕಾರಂದುರ್ ಉಪಾಧ್ಯಕ್ಷರಾದ ಶ್ರೀ ಎಮ್ ಶೇಖರ್ ಪೂಜಾರಿ ಹಾಗೂ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಆಶಾಲತಾ ಎಸ್. ಸುವರ್ಣ, ಬಿಲ್ಲವ ಎಂಪ್ಲಾಯಿ ವೆಲ್ಪೇರ್ ಸೊಸೈಟಿಯ ಅಧ್ಯಕ್ಷರು ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜ್ ಮುಡಿಪು ಇಲ್ಲಿನ ಪ್ರಾದ್ಯಾಪಕರಾದ  ಡಾ. ಶೇಷಪ್ಪ ಕೆಯವರು ಉಪಸ್ಥಿತರಿರುತ್ತಾರೆ

ಈ ವಿಚಾರ ಗೋಷ್ಠಿಯು ನಾಲ್ಕು ಭಾಗದಲ್ಲಿ ನಡೆಯಲಿದ್ದು ಮೊದಲನೇಯ ವಿಚಾರ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ನಿಟ್ಟೆ ವಿಶ್ವ ವಿದ್ಯಾನಿಲಯದ ಶ್ರೀ ಅಂಕಿತ್ ಎಸ್ ಕುಮಾರ್ ಅವರು 'ಜಾಗತಿಕ ಸನ್ನಿವೇಶದಲ್ಲಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಸಾಮರಸ್ಯ ಬ್ರಹ್ಮ ಶ್ರೀ ನಾರಾಯಣ ಗುರುಗಳ ಕೊಡುಗೆ" ಎಂಬುದರ ಕುರಿತು ವಿಚಾರವನ್ನು ಮಂಡಿಸಲಿದ್ದಾರೆ. ಅಧ್ಯಕ್ಷತೆ ಯನ್ನು ಡಾ.ಶೇಷಪ್ಪ ಕೆ, ಸಹ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಕಾಲೇಜ್ ಮುದಿಪು. ವಹಿಸಲಿದ್ದಾರೆ.

ಎರಡನೆ ವಿಚಾರ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ಕೇಂದ್ರ ವಿಶ್ವ ವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ರಾಮಕೃಷ್ಣ, ಬಂಡಾರು ಅವರು “ಆರ್ಥಿಕ ಬೆಳವಣಿಗೆಗೆ ತಾಂತ್ರಿಕ ಮಧ್ಯಸ್ಥಿಕೆಗಳು" ಎಂಬುದರ ಕುರಿತು. ವಿಚಾರವನ್ನು ಮಂಡಿಸಲಿದ್ದಾರೆ ಅಧ್ಯಕ್ಷತೆ ಯನ್ನು ಡಾ. ಎ. ಸಿದ್ಧಿಕ್, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ವಹಿಸಲಿದ್ದಾರೆ.

ಮೂರನೇ ವಿಚಾರ ಗೋಷ್ಠಿಯ ಅಧ್ಯಕ್ಷತೆಯನ್ನು ಮನಃಶಾಂತಿ ಮಂಗಳೂರಿನ ಮಾನಸಿಕ ಆರೋಗ್ಯ ವೃತ್ತಿಪರ ತಜ್ಞರಾದ ಡಾ. ರಮೀಳಾ ಶೇಖರ್ ಅವರು 'ನವ ಭಾರತವನ್ನು ನಿರ್ಮಿಸುವುದು: ನಾವೀನ್ಯತೆ ಮತ್ತು ಅಂತರ್ಗತವಾಗಿ ಎಂಬುದರ ಕುರಿತು ವಿಚಾರವನ್ನು ಮಂಡಿಸಲಿದ್ದಾರೆ. ಶ್ರೀ ಗೌರವ್ ಕಾಮತ್, ಪೂಫೆಸರ್ ಪ್ರಕಾಶ್ ಪಿಂಟೋ, ಡಾ.ಹರಿಪ್ರಸಾದ್ ಎಸ್.ವಿಚಾರ ಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ.

ನಾಲ್ಕನೇ ಭಾಗದಲ್ಲಿ ಸಂಶೋಧನಾ ಬರವಣಿಗೆಗಳನ್ನು ಮಂಡಿಸಲು ಅವಕಾಶ ಮಾಡಿಕೊಡಲಾಗುವುದು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಸಂಚಾಲಕರಾದ ಶ್ರೀ ವಸಂತ್ ಕಾರಂದೂರ್, ಶ್ರೀ ವೆಂಕಟೇಶ ಶಿವ ಭಕ್ತಿ ಯೋಗ ಸಂಘದ ಉಪಾಧ್ಯಕ್ಷರಾದ ಡಾ. ಬಿ ಜಿ ಸುವರ್ಣ, ಮಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಪೂಫೆಸರ್ ಈಶ್ವರ ಪಿ. ಮಾಜಿ ಡೀನ್ ಅಕಾಡೆಮಿಕ್ ಡಾ.ಉಮಪ್ಪ ಪೂಜಾರಿ, ಬಿಲ್ಲವ ಎಂಪ್ಯೂಯಿ ವೆಲ್ಫೇರ್ ಸೊಸೈಟಿಯ ಕಾರ್ಯದರ್ಶಿ ಸುರೇಶ್ ಹಾಗೂ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಆಡಳಿತಧಿಕಾರಿ ಶ್ರೀ ನಾಗೇಶ್ ಕರ್ಕೇರ ಉಪಸ್ಥಿತರಿರುತ್ತಾರೆ ಎಂದರು.

Category
ಕರಾವಳಿ ತರಂಗಿಣಿ