ಮಂಗಳೂರು: ಸದ್ಯ ಇಡೀ ಭಾರತ ದೇಶಕ್ಕೆ ವಕ್ಫ್ ಎಂಬ ರಾಕ್ಷಸ ವಕ್ಕರಿಸಿದ್ದಾನೆ. ಈ ರಾಕ್ಷಸನ ಸಂಹಾರಕ್ಕೆ ಹಿಂದೂಗಳೆಲ್ಲರೂ ವಕ್ಫ್ ಎಂಬ ಪಹಣಿಯ ಸ್ಥಳದಲ್ಲೆಲ್ಲಾ ವರಾಹ ಸ್ವಾಮಿ ಅಥವಾ ಪಂಜುರ್ಲಿ ದೈವವನ್ನು ಪ್ರತಿಷ್ಠಾಪಿಸಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಿಂದೂಗಳಿಗೆ ಕರೆ ನೀಡಿದ್ದಾರೆ. ವಕ್ಫ್ ಆಸ್ತಿ ವಿವಾದದ ಬಗ್ಗೆ ರಾಜ್ಯದಲ್ಲಿ ಮಾತ್ರ ಇಡೀ ದೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಬೀದಿಗಿಳಿದು ಹೋರಾಟ ಮಾಡುತ್ತಿದೆ. ಇದೀಗ ವಕ್ಫ್ ಬಗ್ಗೆ ಶ್ರೀ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ತಿರುಪತಿಯಲ್ಲಿ ಅಂದು ವಕ್ಫ್ ಎಂಬ ರಾಕ್ಷಸನನ್ನು ನಾಶಪಡಿಸಲಾಗದ ಸಂದರ್ಭದಲ್ಲಿ ವರಾಹಸ್ವಾಮಿಯ ಪ್ರತಿಷ್ಠೆಯಿದ್ದರಿಂದ ಯಾವುದೇ ರಾಕ್ಷಸರಿಗೆ ಅಲ್ಲಿನ ಭೂಮಿಯನ್ನು ನಾಶಪಡಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಈಗಲೂ ನಾವು ವೇಂಕಟರಮಣ ಸ್ವಾಮಿಯನ್ನು ಪೂಜಿಸುತ್ತಿದ್ದೇವೆ ಎಂದರು.
ಆದ್ದರಿಂದ ಎಲ್ಲೆಲ್ಲಾ ಪಹಣಿಯಲ್ಲಿ ವಕ್ಫ್ ಎಂಬ ಹೆಸರು ವಕ್ಕರಿಸಿದೆ ಅಲ್ಲಿ ಆ ರಾಕ್ಷಸನ ವಧೆಗಾಗಿ ವರಾಹಸ್ವಾಮಿ ಅಥವಾ ನಮ್ಮ ಪಂಜುರ್ಲಿ ದೈವವನ್ನು ಪ್ರತಿಷ್ಠೆ ಮಾಡಬೇಕು. ಈ ರೀತಿ ಮಾಡಿದ್ದಲ್ಲಿ ಮಾತ್ರ ವಕ್ಫ್ ಎಂಬ ರಾಕ್ಷಸ ತನ್ನಿಂದ ತಾನಾಗಿ ನಾಶವಾಗಿ ಹೋಗುತ್ತಾನೆ ಎಂದು ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ