image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಲ್ಲಡ್ಕದಲ್ಲಿ ನಡೆಯಲಿದೆ ಕನ್ನಡ ಶಾಲೆಗಳಿಗೆ ಸನ್ಮಾನ

ಕಲ್ಲಡ್ಕದಲ್ಲಿ ನಡೆಯಲಿದೆ ಕನ್ನಡ ಶಾಲೆಗಳಿಗೆ ಸನ್ಮಾನ

ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ಅಭಾಸಾಪ) ಕರ್ನಾಟಕ ಇದರ ವತಿಯಿಂದ ಕನ್ನಡ ಶಾಲೆಗಳಿಗೆ ಸನ್ಮಾನ ಕಾರ್ಯಕ್ರಮ ನ.10ರಂದು ಬೆಳಗ್ಗೆ 10ರಿಂದ ಕಲ್ಲಡ್ಕದ ಶ್ರೀರಾಮ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಲೆಕ್ಕಪರಿಶೋಧಕ ಸಿಎ ಶಾಂತಾರಾಮ ಶೆಟ್ಟಿ ಉದ್ಘಾಟಿಸಲಿದ್ದಾರೆ. ಅಭಾಸಾಪ ರಾಜ್ಯ ಸಂಪರ್ಕ ಪ್ರಮುಖ ಡಾ.ವಿ.ರಂಗನಾಥ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಅಭಾಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್  ಸೋಮವಾರ  ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕನ್ನಡ ಶಾಲೆ ಸವಾಲು ಮತ್ತು ಸಮಾಧಾನ ವಿಷಯದ ಬಗ್ಗೆ ವಿಚಾರಗೋಷ್ಠಿ ನಡೆಯಲಿದ್ದು, ಶಿಕ್ಷಣ ತಜ್ಞ ರಾಜಾರಾಮ ಹೊಳೆಹೊನ್ನೂರು ರಾಜಾರಾಮ ವಿಷಯ ಮಂಡಿಸಲಿದ್ದಾರೆ. ಜೈಹಿಂದ್ ಪ್ರೌಢ ಶಾಲೆ ಅಂಕೋಲಾ. ಜ್ಞಾನಗಂಗೋತ್ರಿ ಹಿರಿಯ ಪ್ರಾಥಮಿಕ ಶಾಲೆ, ಶಹಾಪುರ, ಯಾದಗಿರಿ, ಶಾಂತಿಧಾಮ ಪೂರ್ವ ಗುರುಕುಲ ಕೋಟೇಶ್ವರ. ವನಿತಾ ಸದನ ಕೃಷ್ಣಮೂರ್ತಿಪುರಂ, ಮೈಸೂರು, ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಪುತ್ತೂರು ಈ ಐದು ಶಾಲೆಗಳನ್ನು ಸನ್ಮಾನಿಸಲಾಗುವುದು. ವಿವೇಕಾನಂದ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ.ಕಲ್ಲಡ್ಕ ಪ್ರಭಾಕರ ಭಟ್ ಸನ್ಮಾನ ನೆರವೇರಿಸಲಿದ್ದಾರೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಅಭಾಸಾಪ ಮಂಗಳೂರು ವಿಭಾಗ ಸಂಯೋಜಕ ಸುಂದರ ಶೆಟ್ಟಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಮಾಧವ,  ಜಿಲ್ಲಾಧ್ಯಕ್ಷ ಪಿ.ಬಿ.ಹರೀಶ್ ರೈ, ಪ್ರಧಾನ ಕಾರ್ಯದರ್ಶಿ ಸುಮಂಗಲಾ ರತ್ನಾಕರ್, ಕೋಶಾಧಿಕಾರಿ ಭಾಸ್ಕರ ರೈ ಕಟ್ಟ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ