ಮಂಗಳೂರು: ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಕಾಲೇಜಿನ ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳಿಗೆ ಸ್ಪೆಷಲೈಝಷನ್ ವಿಷಯದಲ್ಲಿ ಮತ್ತೆ ಅನ್ಯಾಯ ಮಾಡಲಾಗುತ್ತಿದೆ ಎಂದು ಈ ಹಿಂದೆ ಎಮ್ ಎಸ್ ಡಬ್ಲ್ಯೂ ವಿದ್ಯಾರ್ಥಿಗಳ ಮುಷ್ಕರದ ಮುಖಂಡತ್ವ ವಹಿಸಿದ್ದ ನಿಖಿಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಕಾಲೇಜಿನ ಎಂ ಎಸ್ ಡಬ್ಲ್ಯೂ ವಿದ್ಯಾರ್ಥಿಗಳಿಗೆ ಸ್ಪೆಷಲೈಝಷನ್ ವಿಷಯದ ಕುರಿತು ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಿದ ಫಲವಾಗಿ ಮಾನ್ಯ ಶಿಕ್ಷಣ ಆಯುಕ್ತರು ಕನಿಷ್ಠ 15 ವಿದ್ಯಾರ್ಥಿಗಳು ಸ್ಪೆಷಲೈಸೇಶನ್ ನಲ್ಲಿ ಇರಬೇಕೆಂಬ ಆದೇಶವನ್ನು ಸಡಿಲಗೊಳಿಸಿದರು ಹಾಗೂ ವಿದ್ಯಾರ್ಥಿಗಳು ಆಯಾಯ ಸ್ಪೆಶಲೈಸೇಶನ್ ಅನ್ನು ಆಯ್ಕೆ ಮಾಡಲು ಅನುಮತಿ ನೀಡಿದರು.
ಆದರೆ ಸ್ವಲ್ಪ ದಿನದ ನಂತರ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಯಾವುದೇ ಲಿಖಿತ ಪ್ರತಿ ಕೊಡದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಂಗಲ್ digit ನಲ್ಲಿ ವಿದ್ಯಾರ್ಥಿಗಳಿದ್ದರೆ ಸ್ಪೆಷಲೈಸೇಶನ್ ಅನ್ನು ಕೊಡಬಾರದೆಂದು ಹೊಸ ಆದೇಶವನ್ನು ನೀಡುತ್ತಾರೆ. ಸರಕಾರಿ ಕಾಲೇಜ್ ಗಳಲ್ಲಿ ಅಷ್ಟು ವಿದ್ಯಾರ್ಥಿಗಳು ಇರುವುದಿಲ್ಲವೆಂದು ತಿಳಿದಿದ್ದರೂ ಕೂಡ ಈ ಆದೇಶವನ್ನು ನೀಡಿರುತ್ತಾರೆ. ಹಳೆಯ ಆದೇಶಕ್ಕೂ ಈ ಆದೇಶಕ್ಕೂ ಯಾವುದೇ ವ್ಯತ್ಯಾಸಗಳಿರುವುದಿಲ್ಲ ಈ ರೀತಿ ನಿಯಮಗಳನ್ನು ಕೊಡುವುದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆ ಉಂಟು ಆಗಿದೆ. ಹೀಗೆ ಮುಂದುವರಿದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.