image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ನ.30ರಂದು ಬೃಹತ್ ಉದ್ಯೋಗ ಮೇಳ: ‘ಯುವ ಉದ್ಯೋಗ ಸೇತು’ ಪೋರ್ಟಲ್‌ನಲ್ಲಿ ನೋಂದಣಿಗೆ ಆಹ್ವಾನ

ಮಂಗಳೂರಿನಲ್ಲಿ ನ.30ರಂದು ಬೃಹತ್ ಉದ್ಯೋಗ ಮೇಳ: ‘ಯುವ ಉದ್ಯೋಗ ಸೇತು’ ಪೋರ್ಟಲ್‌ನಲ್ಲಿ ನೋಂದಣಿಗೆ ಆಹ್ವಾನ

ಮಂಗಳೂರು : ಕರಾವಳಿ ಪ್ರದೇಶದ ವಿಭಾಗೀಯ ಮಟ್ಟದ ಬೃಹತ್ ಉದ್ಯೋಗ ಮೇಳವು ನವೆಂಬರ್ 30ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಗರದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ. ಸುಮಾರು 10 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಹಾಗೂ 200ಕ್ಕೂ ಅಧಿಕ ಉದ್ಯೋಗದಾತರು ಈ ಮೇಳದಲ್ಲಿ ಭಾಗವಹಿಸಿ ನೇರ ಸಂದರ್ಶನ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ವಿದ್ಯಾವಂತ ಹಾಗೂ ಕೌಶಲ್ಯಯುಕ್ತ ಯುವಸಮೂಹ ಮತ್ತು ಉದ್ಯೋಗದಾತರ ನಡುವಿನ ಅಂತರವನ್ನು ತೊಡೆದುಹಾಕಲು ‘ಯುವ ಉದ್ಯೋಗ ಸೇತು’ ಡಿಜಿಟಲ್ ವೇದಿಕೆಗೆ ಚಾಲನೆ ನೀಡಿದೆ. ಈ ಪೋರ್ಟಲ್‌ನಲ್ಲಿ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಕೌಶಲ್ಯ ತರಬೇತಿ ಮತ್ತು ಅನುಭವದ ವಿವರಗಳನ್ನು ದಾಖಲಿಸಿ ನೇರ ಉದ್ಯೋಗ ಪಡೆಯಬಹುದು. ಅಲ್ಲದೆ, ಸ್ವಂತ ಉದ್ಯಮ ಪ್ರಾರಂಭಿಸಲು ಇಚ್ಛಿಸುವವರಿಗೆ ಮಾರ್ಗದರ್ಶನ, ತರಬೇತಿ ಮತ್ತು ಸರ್ಕಾರದ ಸಾಲ ಹಾಗೂ ಸಹಾಯಧನ ಯೋಜನೆಗಳ ಮಾಹಿತಿಯೂ ಇಲ್ಲಿ ಲಭ್ಯವಿದೆ.

ಆಸಕ್ತ ಯುವಜನರು https://yuvaugyogasethu.karnataka.gov.in ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿ, ತಮ್ಮ ನೋಂದಣಿ ಸಂಖ್ಯೆಯ ಸ್ಕ್ರೀನ್ ಶಾಟ್ ಅನ್ನು ಮೊಬೈಲ್ ಸಂಖ್ಯೆ 7760715858 ಗೆ ಕಳುಹಿಸಬೇಕು. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಅಭ್ಯರ್ಥಿಗಳು ಮತ್ತು ಉದ್ಯೋಗದಾತರು https://yuvaugyogasethu.karnataka.gov.in/services/events ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮ ವಿಭಾಗವನ್ನು ಆಯ್ಕೆ ಮಾಡಿಕೊಂಡು ವಾಟ್ಸ್‌ಆ್ಯಪ್ ಒಟಿಪಿ ಮೂಲಕ ಪ್ರೊಫೈಲ್ ವಿವರಗಳನ್ನು ಭರ್ತಿ ಮಾಡಿ ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಪಡೀಲ್ ಜಿಲ್ಲಾಡಳಿತ ಕಟ್ಟಡದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ (0824-2457139) ಅಥವಾ ಮೇಳದ ಸಹಾಯವಾಣಿ ಸಂಖ್ಯೆ 9606494308 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.

 

Category
ಕರಾವಳಿ ತರಂಗಿಣಿ