image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ನೂಪುರ ಧ್ವನಿ -2026 ಸಾಂಸ್ಕೃತಿಕ ವೈಭವ

ಮಂಗಳೂರಿನಲ್ಲಿ ನೂಪುರ ಧ್ವನಿ -2026 ಸಾಂಸ್ಕೃತಿಕ ವೈಭವ

ಮಂಗಳೂರು: ಕದ್ರಿಯ ನೂಪುರ (ರಿ.) ನೃತ್ಯ ಮತ್ತು ಸಂಗೀತ ಅಕಾಡೆಮಿಯ 45ನೇ ವಾರ್ಷಿಕೋತ್ಸವದ ಅಂಗವಾಗಿ 'ನೂಪುರ ಧ್ವನಿ -2026' ಸಾಂಸ್ಕೃತಿಕ ನೃತ್ಯ ವೈಭವ ಹಾಗೂ ಕಲಾವಿದರ ಸನ್ಮಾನ ಕಾರ್ಯಕ್ರಮವು ನವೆಂಬರ್ 28 ಮತ್ತು 29 ರಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಎಲ್. ಸಿ. ಆರ್.ಐ ಸಭಾಂಗಣದಲ್ಲಿ ನಡೆಯಲಿದೆ ಎಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷರಾದ ಡಾ. ಪವಮಾನ್ ಪಿ. ಎಸ್ ತಿಳಿಸಿದರು.

ಶ್ರೀ ಸುಧಾಕರ ರಾವ್ ಪೇಜಾವರ  ಮಾತನಾಡಿ, ನವೆಂಬರ್ 28 ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಎಸ್. ಎಲ್. ಶೇಟ್ ಡೈಮಂಡ್ ಹೌಸ್ ಮಾಲೀಕರಾದ ಶ್ರೀ ರವೀಂದ್ರ ಶೇಟ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ರಾಜೇಶ್ ಜಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಂದು ನೂಪುರ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಹಾಗೂ ಹುಬ್ಬಳ್ಳಿಯ ವಿದ್ವಾನ್ ಸುಜಯ ಶಾನುಭೋಗ ಮತ್ತು ಬೆಂಗಳೂರಿನ ವಿದುಷಿ ಶ್ರೀಮತಿ ಗೌರಿ ಸಾಗರ್ ಅವರಿಂದ ಭರತ ನಾಟ್ಯ ಕಾರ್ಯಕ್ರಮ ನಡೆಯಲಿದೆ  ತಿಳಿಸಿದರು.

ನವೆಂಬರ್ 29 ರಂದು ಸಮಾರೋಪ ಸಮಾರಂಭ ಜರುಗಲಿದ್ದು, ಶ್ರೀನಿವಾಸ ವಿಶ್ವವಿದ್ಯಾಲಯದ ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿ ಟ್ರಸ್ಟಿ ಶ್ರೀಮತಿ ಎ. ಮಿತ್ರ ಎಸ್. ರಾವ್ ಮತ್ತು ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀ ಅರುಣ್ ಐತಾಳ್ ಮುಖ್ಯ ಅತಿಥಿಗಳಾಗಿರುತ್ತಾರೆ. ಈ ಸಂದರ್ಭದಲ್ಲಿ ಕರ್ನಾಟಕ ಕಲಾಶ್ರೀ ವಿದುಷಿ ನಯನ ವಿ. ರೈ, ವಿದ್ವಾನ್ ಗಣೇಶ್‌ರಾಜ್ ಎಂ.ವಿ. ಮತ್ತು ಡಾ. ಪಿ. ಶ್ರೀಧರ ಆಚಾರ್ಯ ಅವರಿಗೆ 'ನೂಪುರ ಕಸ್ತೂರಿ' ಬಿರುದು ನೀಡಿ ಸನ್ಮಾನಿಸಲಾಗುವುದು. ಜೊತೆಗೆ 'ನೂಪುರ ಸಿಂಚನ' ಸ್ಮರಣ ಸಂಚಿಕೆ ಬಿಡುಗಡೆಯಾಗಲಿದೆ. ಉಡುಪಿಯ ಶ್ರೀಮತಿ ಶುಭಶ್ರೀ ಅಡಿಗ ಅವರಿಂದ ವೀಣಾ ವಾದನ ಮತ್ತು ನೂಪುರ ವಿದ್ಯಾರ್ಥಿಗಳಿಂದ 'ಮಹಿಷಾಸುರ ಮರ್ದಿನಿ' ನೃತ್ಯರೂಪಕ ಪ್ರದರ್ಶನಗೊಳ್ಳಲಿದೆ ಎಂದು ಶ್ರೀಮತಿ ಸುಲೋಚನಾ ವಿ. ಭಟ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಡಾ. ಪವಮಾನ್ ಪಿ.ಎಸ್.,  ಶ್ರೀ ಸುಧಾಕರ ರಾವ್ ಪೇಜಾವರ , ಅನು ಪ್ರಶಾಂತ್ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ