ಮಂಗಳೂರು: ಸ್ಯಾಂಡೀಸ್ ಕಂಪೆನಿ ಅರ್ಪಿಸುವ, ಶಾಸಕ ಉಮಾನಾಥ ಕೋಟ್ಯಾನ್ ಇವರ ಸಾರಥ್ಯದಲ್ಲಿ ನಡೆಯಲಿರುವ ಎರಡನೇ ವರ್ಷದ "ಮಂಗಳೂರು ಯುವ ದಸರಾ 2024 ಸ್ಟಾರ್ ಮ್ಯೂಸಿಕಲ್ ನೈಟ್" ಕಾರ್ಯಕ್ರಮವು ನವೆಂಬರ್ 2ರಂದು ಮಂಗಳೂರಿನ ಕರಾವಳಿ ಉತ್ಸವ ಗೌಂಡಿನಲ್ಲಿ ದೀಪಾವಳಿಯ ಸಂಭ್ರಮದೊಂದಿಗೆ ಸಂಜೆ 6.00 ಗಂಟೆಗೆ ನಡೆಯಲಿದೆ ಎಂದು ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಸರಾ ಸಮಯದಲ್ಲಿ ನಡೆಯಬೇಕಿದ್ದ ಈ ಕಾರ್ಯಕ್ರಮ ಚುನಾವಣಾ ನೀತಿ ಸಂಹಿತೆ ಕಾರಣದಿಂದ ಮುಂದೂಡಲಾಗಿತ್ತು ಎಂದರು.
ಈ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈಸೂರಿನ ಮಹಾರಾಜ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮಾಜಿ ಉಪಮುಖ್ಯಮಂತ್ರಿ ಶ್ರೀ ಅಶ್ವತ್ಥನಾರಾಯಣ್, ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ತರುಣ್ ಸುಧೀರ್, ಖ್ಯಾತ ಚಿತ್ರನಟಿ ಸೋನಲ್ ಮೊಂತೇರೊ ಖ್ಯಾತ ಹಿನ್ನಲೆ ಗಾಯಕಿಯರಾದ ಸುಪ್ರಿಯಾ ರಾಮ್, ಐಶ್ವರ್ಯ ರಂಗರಾಜನ್ ಖ್ಯಾತ ಹಿನ್ನಲೆ ಗಾಯಕ ನಿಶಾನ್ ರೈ, ಚಿತ್ರನಟ ಪೃಥ್ವಿ ಅಂಬರ್, ಬಿಗ್‌ಬಾಸ್ ವಿನ್ನರ್ ರೂಪೇಶ್ ಶೆಟ್ಟಿ, ಹಾಗೂ ಇನ್ನಿತರ ಸ್ಯಾಂಡಲ್‌ವುಡ್ ತಾರೆಯರು ಪಾಲ್ಗೊಳ್ಳಲ್ಲಿದ್ದು, ಸಿಝಲಿಂಗ್ ಗೈಸ್ ಡ್ಯಾನ್ಸ್ ಸ್ಟುಡಿಯೋ ಮಂಗಳೂರು ಇವರಿಂದ ಮೈನವಿರೇಳಿಸುವ ನೃತ್ಯವೈಭವ, ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಈ ಬಾರಿಯ ಮಂಗಳೂರು ಯುವದಸರಾ ಸನ್ಮಾನವನ್ನು ಡಾ| ಎಂ ಮೋಹನ್ ಆಳ್ವ ಇವರಿಗೆ ನೀಡಲಾಗುವುದು ಎಂದರು.
ಸ್ಯಾಂಡಿಸ್ ಕಂಪನಿಯ ಮಾಲಿಕರಾದ ಸಂದೇಶ್ ರಾಜ್ ಬಂಗೇರ ಮಾತನಾಡಿ ಕಾರ್ಯಕ್ರಮಕ್ಕೆ ಯಾವುದೇ ಎಂಟ್ರಿ ಫೀಸ್ ಇರುವುದಿಲ್ಲ. ಎಲ್ಲರಿಗೂ ಮುಕ್ತ ಪ್ರವೇಶವಿದ್ದು ಎಲ್ಲರೂ ಭಾಗವಹಿಸಬೇಕು ಎಂದು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಯಶ್ ರಾಜ್ ಸಾತ್ವಿಕ್ ಪೂಜಾರಿ ಪಾನ್ ಪುತ್ತೂರು ತಿಲಕ್ ಆಚಾರ್ಯ ಉಪಸ್ಥಿತರಿದ್ದರು