image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದ. ಕ. ಕಾಸರಗೋಡು ಹವ್ಯಕ ಮಹಾಸಭೆಗೆ ನೂತನ ಪದಾಧಿಕಾರಿಗಳ ಆಯ್ಕೆ

ದ. ಕ. ಕಾಸರಗೋಡು ಹವ್ಯಕ ಮಹಾಸಭೆಗೆ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಕಾಸರಗೋಡು ಹವ್ಯಕ ಮಹಾಸಭೆಯ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆದಿದ್ದು, ಸಂಘಟನೆಗೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಮೆದು ತಿರುಮಲೇಶ್ವರ ಭಟ್, ಉಪಾಧ್ಯಕ್ಷರಾಗಿ ಈಶ್ವರಭಟ್ ಕೆ. ಹಾಗೂ ಡಾ. ವಸಂತಕುಮಾರ ಪೆರ್ಲ, ಕಾರ್ಯದರ್ಶಿಯಾಗಿ ಬೇತ ರಾಮಕೃಷ್ಣ ಭಟ್ ಮತ್ತು ಖಜಾಂಚಿಯಾಗಿ ಗೀತಾದೇವಿ ಸಿ. ಅವರು ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ವಸಂತಿ ಎಸ್. ಭಟ್, ಪುಷ್ಪಾ ಕೆ. ಖಂಡಿಗೆ, ಪ್ರವೀಣಶಂಕರ ಕೆ., ಬಾಲಸುಬ್ರಹ್ಮಣ್ಯ ಕಬೆಕ್ಕೋಡು, ರಾಜೇಂದ್ರಪ್ರಸಾದ್ ಬಲ್ಲರಮಜಲು, ಕಾನತ್ತಿಲ ಶಾಮಭಟ್ ಹಾಗೂ ಕಾಕುಂಜೆ ರಾಜಶೇಖರ ಭಟ್ ಆಯ್ಕೆಯಾದರು. ವಿಶೇಷ ಜವಾಬ್ದಾರಿಗಳೊಂದಿಗೆ ಶಿವಪ್ರಸಾದ್ ಬಿ. (ಹವ್ಯಕವಾರ್ತೆ ಪತ್ರಿಕೆ), ದಿವಾಣ ಗೋವಿಂದಭಟ್ (ಮಂಗಳೂರು ಹವ್ಯಕಸಭಾ ಪ್ರತಿನಿಧಿ) ಹಾಗೂ ವಿಜಯಲಕ್ಷ್ಮಿ ಉಳುವಾನ (ಭಾರತಿ ಹಾಸ್ಟೆಲ್ ಸಂಯೋಜನೆ) ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಸಂಘಟನೆಯ ಲೆಕ್ಕ ಪರಿಶೋಧಕರಾಗಿ ಸಿ ಎ ಶ್ಯಾಮ್ ಭಟ್ ಅವರನ್ನು ನೇಮಕ ಮಾಡಿಕೊಳ್ಳಲಾಯಿತು. ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಗಿರೀಶ್ ಚಂದ್ರ ಎ. ಟಿ. ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ