ಮಂಗಳೂರು: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸ್ನೇಹಮಿಲನ-ಸಿನಿರಂಗ ಪುರಸ್ಕಾರದಲ್ಲಿ ಹಿರಿಯ ಪತ್ರಕರ್ತ, ರಂಗಚಾವಡಿ ಸಂಸ್ಥೆಯ ಸಂಚಾಲಕ ಬಾಳ ಜಗನ್ನಾಥ ಶೆಟ್ಟಿ ಅವರನ್ನು "ರಂಗಮಿತ್ರ ಪತ್ರಕರ್ತ" ಪ್ರಶಸ್ತಿ ನೀಡಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಬಾಳ ಜಗನ್ನಾಥ ಶೆಟ್ಟಿಯವರು ನೂರಕ್ಕೂ ಹೆಚ್ಚಿನ ತುಳು ಮತ್ತು ಕನ್ನಡ ಸಿನಿಮಾಗಳಿಗೆ PRO ಆಗಿ ಕರ್ತವ್ಯ ನಿರ್ವಹಣೆ ಮತ್ತು ತುಳು ಸಿನಿಮಾರಂಗದ ಸಮಗ್ರ ಮಾಹಿತಿಯುಳ್ಳ ತುಳು ಸಿನಿಮಾವಲೋಕನ ಕೃತಿಯನ್ನು ರಚಿಸಿರುವುದನ್ನು ಸನ್ಮಾನ ಸಮಾರಂಭದಲ್ಲಿ ಸ್ಮರಿಸಲಾಯಿತು.