image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಹ್ಯಾದ್ರಿ ವಿಜ್‌ಕ್ವಿಜ್ ಜೂನಿಯರ್ಸ್ 2026: ಶಾರದಾ ಪಿಯು ಕಾಲೇಜಿಗೆ ಪ್ರಥಮ ಸ್ಥಾನ

ಸಹ್ಯಾದ್ರಿ ವಿಜ್‌ಕ್ವಿಜ್ ಜೂನಿಯರ್ಸ್ 2026: ಶಾರದಾ ಪಿಯು ಕಾಲೇಜಿಗೆ ಪ್ರಥಮ ಸ್ಥಾನ

ಮಂಗಳೂರು : ನಗರದ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಪದವಿಪೂರ್ವ ವಿದ್ಯಾರ್ಥಿಗಳ ರಸಪ್ರಶ್ನೆ ಸ್ಪರ್ಧೆ 'ಸಹ್ಯಾದ್ರಿ ವಿಜ್‌ಕ್ವಿಜ್ ಜೂನಿಯರ್ಸ್ 2026'ರ ಗ್ರ್ಯಾಂಡ್ ಫಿನಾಲೆ ನವೆಂಬರ್ 13ರಂದು ಯಶಸ್ವಿಯಾಗಿ ನಡೆಯಿತು. ದೇಶದ 22 ಕಾಲೇಜುಗಳನ್ನು ಪ್ರತಿನಿಧಿಸಿದ 252 ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.

ಸ್ಪರ್ಧೆಯಲ್ಲಿ ಶಾರದಾ ಪದವಿಪೂರ್ವ ಕಾಲೇಜು ಸಮಗ್ರ ಪ್ರಥಮ ಸ್ಥಾನವನ್ನು ಗಳಿಸಿದ್ದು, ಈ ತಂಡದ ವಿಕ್ರಮ್ ಶೈಲೇಶ ನಾಯಕ್, ಪೃಥ್ವಿಶ್ ಗಟ್ಟಿ ಕೆ. ಹಾಗೂ ಚಿನ್ಮಯ್ ಎನ್. ಶೆಟ್ಟಿ ಪ್ರಥಮ ಬಹುಮಾನ ಪಡೆದಿದ್ದಾರೆ. ಪ್ರೆಸಿಡೆನ್ಸಿ ಸಿಬಿಎಸ್‌ಇ ಶಾಲೆಯ ರತನ್, ಪವನ್ ಮತ್ತು ಸಯ್ಯಾದ್ ರಶ್ದಾನ್ ತಂಡ ದ್ವಿತೀಯ ಸ್ಥಾನ ಗಳಿಸಿದರೆ, ಶಾರದಾ ಪದವಿಪೂರ್ವ ಕಾಲೇಜಿನ ಗಣೇಶ್‌ರಾಜ್ ಕೆ. ಎಂ., ಸೋಹನ್ ಬಾಳಿಗ ಬಿ. ಹಾಗೂ ಸಂಚಯ್ ಪಿ. ಶೆಟ್ಟಿ ಅವರ ಮತ್ತೊಂದು ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ.

ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಎಸ್. ಇಂಜಗನೇರಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಟ್ರಸ್ಟಿ ದೇವದಾಸ್ ಹೆಗ್ಡೆ ಹಾಗೂ ನಿರ್ದೇಶಕ ಡಾ. ವಿಶಾಲ್ ಸಮರ್ಥ್ ಉಪಸ್ಥಿತರಿದ್ದರು. ರಸಪ್ರಶ್ನೆ ನಿರೂಪಕ ರಕ್ಷಿತ್ ಶೆಟ್ಟಿ ಅವರು ಸ್ಪರ್ಧೆಯನ್ನು ಆಕರ್ಷಕವಾಗಿ ನಡೆಸಿಕೊಟ್ಟರು.

Category
ಕರಾವಳಿ ತರಂಗಿಣಿ