image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅದ್ಧೂರಿಯಾಗಿ ನೆರವೇರಿದ 'ಕಮಲ್‌ದೀಪ್ಸ್ ಆದಿನಾಥ್ ರೆಸಿಡೆನ್ಸಿ' ಉದ್ಘಾಟನಾ ಸಮಾರಂಭ

ಅದ್ಧೂರಿಯಾಗಿ ನೆರವೇರಿದ 'ಕಮಲ್‌ದೀಪ್ಸ್ ಆದಿನಾಥ್ ರೆಸಿಡೆನ್ಸಿ' ಉದ್ಘಾಟನಾ ಸಮಾರಂಭ

ಮಂಗಳೂರು: ಶಕ್ತಿನಗರದಲ್ಲಿ 'ಕಮಲ್‌ದೀಪ್ ಪ್ರೊಮೋಟರ್ಸ್ ಆಂಡ್ ಡೆವಲಪರ್ಸ್' ಸಂಸ್ಥೆಯ ವತಿಯಿಂದ ನೂತನವಾಗಿ ನಿರ್ಮಿಸಲಾದ 'ಕಮಲ್‌ದೀಪ್ ಆದಿನಾಥ್ ರೆಸಿಡೆನ್ಸಿ' (Kamaldeep Adinath Residency) ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಸಮಾರಂಭವು ಇಂದು ಅತ್ಯಂತ ಸಂಭ್ರಮದಿಂದ ನೆರವೇರಿತು.

ಕಾರ್ಯಕ್ರಮದ ಆರಂಭದಲ್ಲಿ ಧಾರ್ಮಿಕ ವಿಧಿ-ವಿಧಾನಗಳಂತೆ ಗಣಹೋಮವನ್ನು ನೆರವೇರಿಸಲಾಯಿತು. ಬಳಿಕ ಶ್ರೀಮತಿ ಹೇಮಾವತಿ ಯು ಶೆಟ್ಟಿಯವರು  ರಿಬ್ಬನ್ ಕತ್ತರಿಸುವ ಮೂಲಕ ನೂತನ ಸಂಕೀರ್ಣವನ್ನು ಅಧಿಕೃತವಾಗಿ ಉದ್ಘಾಟಿಸಿದರು.

ಆಧುನಿಕ ಸೌಲಭ್ಯಗಳೊಂದಿಗೆ ನಿರ್ಮಾಣಗೊಂಡಿರುವ ಈ ಯೋಜನೆಯು 33 ಸುಸಜ್ಜಿತ ಫ್ಲ್ಯಾಟ್‌ಗಳು ಹಾಗೂ ವ್ಯಾಪಾರ-ವಹಿವಾಟಿಗೆ ಪೂರಕವಾದ 33 ವಾಣಿಜ್ಯ ಮಳಿಗೆಗಳನ್ನು (Shops) ಒಳಗೊಂಡಿದೆ.

ಕಳೆದ ಎರಡು ದಶಕಗಳಿಂದ ಕರಾವಳಿ ಭಾಗದ ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಈ ಸಂಸ್ಥೆಯು, 2003ರಲ್ಲಿ ಪಾಲುದಾರರಾದ ಕಮಲಾಕ್ಷ ಆಳ್ವ ಮತ್ತು ಪ್ರದೀಪ್ ಕುಮಾರ್ ಶೆಟ್ಟಿ ಅವರ ನೇತೃತ್ವದಲ್ಲಿ ಆರಂಭಗೊಂಡಿತು. ಇಲ್ಲಿಯವರೆಗೆ 15 ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಸಂಸ್ಥೆಯು, 1,000ಕ್ಕೂ ಅಧಿಕ ಸಂತೃಪ್ತ ಕುಟುಂಬಗಳ ಕನಸಿನ ಸೂರು ನನಸಾಗಿಸಿದೆ. ಗುಣಮಟ್ಟದ ನಿರ್ಮಾಣ, ನಿಗದಿತ ಸಮಯಕ್ಕೆ ಹಸ್ತಾಂತರ ಮತ್ತು ಪಾರದರ್ಶಕ ವ್ಯವಹಾರದ ಮೂಲಕ ಮಂಗಳೂರು-ಉಡುಪಿ ಭಾಗದಲ್ಲಿ ಸಂಸ್ಥೆಯು ತನ್ನದೇ ಆದ ಛಾಪು ಮೂಡಿಸಿದೆ.

ಪ್ರಸ್ತುತ ಕಮಲ್‌ದೀಪ್ ಸಂಸ್ಥೆಯು ಮಂಗಳೂರು ಮತ್ತು ಉಡುಪಿಯಲ್ಲಿ ಹಲವು ಬೃಹತ್ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಮಂಗಳೂರಿನ ಉರ್ವದಲ್ಲಿ 46 ಫ್ಲ್ಯಾಟ್‌ಗಳನ್ನು ಹೊಂದಿರುವ 'ಅನಘಾ' (Anagha) ವಸತಿ ಸಮುಚ್ಚಯ, ಉಡುಪಿಯ ಕೆ-ಇಂದ್ರಾಳಿಯಲ್ಲಿ (K-Indrali) 30 ಪ್ಲಾಟ್ ಗಳ ಆಧುನಿಕ ಸಂಕೀರ್ಣ ಹಾಗೂ ನಗರದ ಪ್ರಮುಖ ಕೇಂದ್ರವಾದ ಪಂಪ್‌ವೆಲ್‌ನಲ್ಲಿ ಬರೋಬ್ಬರಿ 250 ಘಟಕಗಳ ಬೃಹತ್ 'ಟ್ವಿನ್ ಟವರ್' (Twin Tower) ಯೋಜನೆಗಳು ನಿರ್ಮಾಣ ಹಂತದಲ್ಲಿವೆ. ಇದರೊಂದಿಗೆ 24 ಸುಸಜ್ಜಿತ 2 BHK ಫ್ಲ್ಯಾಟ್‌ಗಳ ನಿರ್ಮಾಣ ಕಾರ್ಯವೂ ಭರದಿಂದ ಸಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಶೀಘ್ರದಲ್ಲೇ ಮಂಗಳೂರಿನ ಪ್ರತಿಷ್ಠಿತ ಬಡಾವಣೆಗಳಾದ ಮಣ್ಣಗುಡ್ಡ ಮತ್ತು ಮಠದಕಣಿಯಲ್ಲಿ ಎರಡು ಹೊಸ ಯೋಜನೆಗಳನ್ನು ಆರಂಭಿಸಲಿದೆ.

Category
ಕರಾವಳಿ ತರಂಗಿಣಿ