image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಪಘಾತ ಆಹ್ವಾನಿಸುತ್ತಿದ್ದ 10 ಹಂಪ್ಸ್‌ಗಳಿಗೆ ಬಣ್ಣ: ಮೀಡಿಯಾ ಮನಸುಗಳು ತಂಡದ ಯಶಸ್ವಿ 14ನೇ ಕಾರ್ಯಕ್ರಮ

ಅಪಘಾತ ಆಹ್ವಾನಿಸುತ್ತಿದ್ದ 10 ಹಂಪ್ಸ್‌ಗಳಿಗೆ ಬಣ್ಣ: ಮೀಡಿಯಾ ಮನಸುಗಳು ತಂಡದ ಯಶಸ್ವಿ 14ನೇ ಕಾರ್ಯಕ್ರಮ

ಸುರತ್ಕಲ್: ರಸ್ತೆಯಲ್ಲಿರುವ ಹಂಪ್ಸ್‌ಗಳು ವಾಹನಗಳ ವೇಗವನ್ನು ನಿಯಂತ್ರಿಸಬೇಕೇ ಹೊರತು, ಸವಾರರಿಗೆ ಅಪಾಯ ತಂದೊಡ್ಡುವುದಲ್ಲ. ಆದರೆ ಸುರತ್ಕಲ್‌ನ ಪ್ರಮುಖ ರಸ್ತೆಗಳಲ್ಲಿ ಬಣ್ಣ ಮಾಸಿ ಹೋಗಿದ್ದ ಹಂಪ್ಸ್‌ಗಳು ರಾತ್ರಿ ವೇಳೆ ಕಾಣದೆ ದ್ವಿಚಕ್ರ ಸವಾರರ ಪ್ರಾಣಕ್ಕೆ ಸಂಚಕಾರ ತರುತ್ತಿದ್ದವು. 

ಈ ಗಂಭೀರ ಸಮಸ್ಯೆಗೆ ಸ್ಪಂದಿಸಿದ 'ಮೀಡಿಯಾ ಮನಸುಗಳು' ತಂಡದ ಸದಸ್ಯರು ಬುಧವಾರ ತಡರಾತ್ರಿ ಹತ್ತು ಹಂಪ್ಸ್‌ಗಳಿಗೆ ಬಣ್ಣ ಬಳಿಯುವ ಮೂಲಕ ತನ್ನ 14ನೇ ಸಾಮಾಜಿಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದರು.
ಸುರತ್ಕಲ್ ಬಳಿಯ ರಚನಾ ಹೋಟೆಲ್, ತಡಂಬೈಲ್, ಮಾರಿಗುಡಿ, NITK ಬಳಿಯ ಸರ್ವಿಸ್ ರಸ್ತೆಗಳಲ್ಲಿದ್ದ 10 ಹಂಪ್ಸ್ ಗಳಿಗೆ ಬುಧವಾರ ತಡರಾತ್ರಿ ವಾಹನ ಸಂಚಾರಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ತಡರಾತ್ರಿ ರಸ್ತೆಗಿಳಿದು ಶ್ರಮದಾನ ನಡೆಸಿದರು. 

ಈ ಕಾರ್ಯದಲ್ಲಿ 'ಮೀಡಿಯಾ ಮನಸುಗಳು' ತಂಡದ ಪ್ರಮುಖರಾದ ಶಶಿ ಬೆಳ್ಳಾಯರು, ರಜನ್ ಕುಮಾರ್ ಕಾವೂರು,  ಶಿವು ಕುಲಾಲ್ ಹಾಗೂ ಸಂದೇಶ್ ಶೆಟ್ಟಿ  ಭಾಗವಹಿಸಿದರು.

Category
ಕರಾವಳಿ ತರಂಗಿಣಿ