ಮಂಗಳೂರು: PM-ABHIM (Pradhana Manthri Ayushman Bharath Health Infrastructure Mission) ಕಾರ್ಯಕ್ರಮದಡಿಯಲ್ಲಿ 50 ಹಾಸಿಗೆಗಳ ತೀವ್ರ ನಿಗಾ ಘಟಕ ಕಟ್ಟಡಕ್ಕೆ ನವದೆಹಲಿಯಿಂದ ಪ್ರದಾನಮಂತ್ರಿ ನರೇಂದ್ರ ಮೋದಿಯವರು ವೀಡಿಯೋ ಕಾನ್ಸರೆನ್ಸ್ ಮೂಲಕ ಶಿಲಾನ್ಯಾಸ ಮಾಡಿದರು. ತೀವ್ರ ನಿಗಾ ಘಟಕ ಕಟ್ಟಡವು ಒಟ್ಟು 5460 ಚ.ಮೀ.ವಿಸ್ತೀರ್ಣವನ್ನು ಹೊಂದಿದ್ದು, ನೆಲಮಹಡಿ ಸಹಿತ ಒಟ್ಟು 3 ಅಂತಸ್ತುಗಳನ್ನು ಒಳಗೊಂಡಿದೆ. ಈ ಯೋಜನೆಯು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಜಂಟಿ ಆಶ್ರಯದಲ್ಲಿ ನಡೆಯಲಿದ್ದು, ಒಟ್ಟು ರೂ. 23-75 ಕೋಟಿ ವೆಚ್ಚದ ಕಾಮಗಾರಿಯಾಗಿದ್ದು, ಈ ಕಟ್ಟಡವು HDU-6 ಹಾಸಿಗೆ, ICU-10 ಹಾಸಿಗೆ, Isolation ward-24 ಹಾಸಿಗೆ, Isolation room-2, Dialysis-2 ಹಾಸಿಗೆ, MCH-2 ಹಾಸಿಗೆ, Emergency-5 ಹಾಸಿಗೆ, Operation Theater-2 ಒಳಗೊಂಡಿದೆ.
ಐಎಂಎ ಭವನ, ಅತ್ತಾವರ, ಮಂಗಳೂರು (ಜಿಲ್ಲಾ ವೆನ್‌ಲಾಕ್ ಆಸ್ಪತ್ರೆಯ ನೂತನ ಶಸ್ತ್ರಚಿಕಿತ್ಸಾ ವಿಭಾಗದ ಮುಂಭಾಗ)ದಲ್ಲಿ ನಡೆದೆ ಸಮಾರಂಭದ ಅದ್ಯಕ್ಷತೆಯನ್ನು ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ವಹಿಸಿದ್ದರು.
ಈ ಸಂದರ್ಭದಲ್ಲಿ ವಿದಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಮೇಯರ್ ಮನೋಜ್ ಕುಮಾರ್, ವಿದಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ , ಉಪಮೇಯರ್ ಸುನಿತಾ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸದಾಶಿವ ಉಳ್ಳಾಲ್ , ಉನ್ನಿಕೃಷ್ಣ, ದುರ್ಗಾ ಪ್ರಸಾದ್, ಜಗದೀಶ್, ಸುದಾಕರ್, ಶಿವಪ್ರಕಾಶ್ ಡಿ ಎಸ್, ಅರೋಗ್ಯ ರಕ್ಷಾ ಅಧಿಕಾರೇತರ ಸದಸ್ಯರಾದ ಕೆ ಎಮ್ ಅಬ್ದುಲ್ ಕರೀಮ್, ಪದ್ಮನಾಭ ಅಮೀನ್, ಶಶಿಧರ್ ಬಜಾಲ್,ಅನಿಲ್ ಎನ್ ರಸ್ಕಿನ್ಹಾ, ಪ್ರಮೀಳಾ ಈಶ್ವರ್ ಅಬ್ದುಲ್ ಸಲೀಂ ಉಪಸ್ಥಿತರಿದ್ದರು.