image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆರ್. ತನ್ವಿಗೆ ಜೈವಿಕ ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಚಿನ್ನದ ಪದಕ

ಆರ್. ತನ್ವಿಗೆ ಜೈವಿಕ ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಚಿನ್ನದ ಪದಕ

ಮಂಗಳೂರು: ದೇರಳಕಟ್ಟೆಯಲ್ಲಿ ನಡೆದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ 16ನೇ ಘಟಿಕೋತ್ಸವದಲ್ಲಿ, ಜೈವಿಕ ವೈದ್ಯಕೀಯ ವಿಜ್ಞಾನ (ಬಯೋ ಮೆಡಿಕಲ್ ಸೈನ್ಸ್) ವಿಭಾಗದಲ್ಲಿ ಅತ್ಯುನ್ನತ ಶೈಕ್ಷಣಿಕ ಸಾಧನೆ ಮಾಡಿರುವ ಆರ್. ತನ್ವಿ ಅವರು ಚಿನ್ನದ ಪದಕವನ್ನು ಪಡೆದು ಹೆಮ್ಮೆಯ ಪಾತ್ರರಾಗಿದ್ದಾರೆ.

ಘಟಿಕೋತ್ಸವ ಸಮಾರಂಭದಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ, ಚಂಡೀಗಢದ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (PGIMER) ನಿರ್ದೇಶಕ ಡಾ. ವಿವೇಕ್ ಲಾಲ್, ನಿಟ್ಟೆ ವಿವಿಯ ಕುಲಪತಿ ಪ್ರೊ. ಎಂ.ಎಸ್. ಮೂಡಿತ್ತಾಯ, ಪ್ರೊ-ಚಾನ್ಸಲರ್ ಪ್ರೊ. ಡಾ. ಎಂ. ಶಾಂತರಾಮ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿದರು.

ಸಾಧನೆಗೈದ ಆರ್. ತನ್ವಿ ಅವರು ಹಿರಿಯ ಪತ್ರಕರ್ತ ರಾಮಕೃಷ್ಣ ಆರ್. ಮತ್ತು ಖ್ಯಾತ ವೈದ್ಯೆ ಹಾಗೂ ಲೇಖಕಿ ಡಾ. ರೇಶ್ಮಾ ಜಿ. ಉಳ್ಳಾಲ್ ದಂಪತಿಯ ಪುತ್ರಿಯಾಗಿದ್ದು, ಈ ಅಪರೂಪದ ಸಾಧನೆಯು ಇವರ ಕುಟುಂಬಕ್ಕೆ ಹಾಗೂ ಇಡೀ ಶಿಕ್ಷಣ ವಲಯಕ್ಕೆ ಹೆಮ್ಮೆಯ ಕ್ಷಣವಾಗಿದೆ. ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಯುವ ಪ್ರತಿಭೆಯು ಈ ಮೈಲಿಗಲ್ಲು ತಲುಪುವ ಮೂಲಕ ಮಂಗಳೂರಿಗೆ ಕೀರ್ತಿ ತಂದಿದ್ದಾರೆ.

Category
ಕರಾವಳಿ ತರಂಗಿಣಿ