image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಿಐಎಸ್‌ಎಫ್ ವತಿಯಿಂದ ಗೌರವ ಸ್ಮರಣಿಕೆ ಸಮರ್ಪಣೆ

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಸಿಐಎಸ್‌ಎಫ್ ವತಿಯಿಂದ ಗೌರವ ಸ್ಮರಣಿಕೆ ಸಮರ್ಪಣೆ

ಮಂಗಳೂರು : ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ವತಿಯಿಂದ 2026ರ ಫೆಬ್ರವರಿ ತಿಂಗಳಲ್ಲಿ ‘ಸುರಕ್ಷಿತ ತಟ್, ಸಮೃದ್ಧ ಭಾರತ್’ ಎಂಬ ಧ್ಯೇಯವಾಕ್ಯದೊಂದಿಗೆ ಆಯೋಜಿಸಲಾಗಿದ್ದ 'ಸಿಐಎಸ್‌ಎಫ್ ಸೈಕ್ಲೋಥಾನ್–2026'ರ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಗೌರವ ಸ್ಮರಣಿಕೆಯನ್ನು ಹಸ್ತಾಂತರಿಸಲಾಯಿತು.

ಕರಾವಳಿ ಭದ್ರತೆ, ರಾಷ್ಟ್ರೀಯ ಏಕತೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಸೈಕಲ್ ಜಾಥಾವನ್ನು ಆಯೋಜಿಸಲಾಗಿತ್ತು. ಸಿಐಎಸ್‌ಎಫ್‌ನ 80 ಸೈಕಲ್ ಸವಾರರು ಭಾಗವಹಿಸಿದ್ದ ಈ ಜಾಥಾವು ಭಾರತದ ಸಂಪೂರ್ಣ ಪಶ್ಚಿಮ ಕರಾವಳಿಯನ್ನು ಒಳಗೊಂಡಂತೆ ಸಂಚರಿಸಿತ್ತು.

ಈ ಪ್ರಮುಖ ಅಭಿಯಾನದ ನೆನಪಿನಲ್ಲಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಿಗೆ ಮೆಚ್ಚುಗೆಯ ಸಂಕೇತವಾಗಿ ಸಿಐಎಸ್‌ಎಫ್ ಈ ಗೌರವವನ್ನು ಸಮರ್ಪಿಸಿದೆ. ಮಂಗಳೂರಿನ ನವಮಂಗಳೂರು ಬಂದರು ಪ್ರಾಧಿಕಾರದ (ಎನ್‌ಎಂಪಿಎ) ಸಿಐಎಸ್‌ಎಫ್ ಘಟಕದ ಉಪ ಕಮಾಂಡೆಂಟ್ ಆರ್. ಪಿ. ಪಾಠಕ್ ಅವರು ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಈ ಸ್ಮರಣಿಕೆಯನ್ನು ಹಸ್ತಾಂತರಿಸಿದರು.

Category
ಕರಾವಳಿ ತರಂಗಿಣಿ