image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಸ್‌ಜೆಇಸಿಯಲ್ಲಿ ಜೋಶಿಯಾನಾ 15.0 ಸಂಭ್ರಮ

ಎಸ್‌ಜೆಇಸಿಯಲ್ಲಿ ಜೋಶಿಯಾನಾ 15.0 ಸಂಭ್ರಮ

ಮಂಗಳೂರು : ಮಂಗಳೂರಿನ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ (ಎಸ್‌ಜೆಇಸಿ) ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದ 'ದಿ ಟೆಕ್ನೋಕ್ರಾಟ್ಸ್' ವಿದ್ಯಾರ್ಥಿ ಸಂಘಟನೆಯು ಎಂಸಿಎ ಮತ್ತು ಬಿಸಿಎ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಐಟಿ ಉತ್ಸವ 'ಜೋಶಿಯಾನಾ 15.0' ನವೆಂಬರ್ 5ರಂದು ಕಾಲೇಜಿನ ಕಲಾಂ ಸಭಾಂಗಣದಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ನಿರ್ದೇಶಕ ವಂ. ಫಾ. ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ ಹಾಗೂ ಮುಖ್ಯ ಅತಿಥಿ, ಪ್ರಾಂಶುಪಾಲ ಡಾ. ರಿಯೋ ಡಿಸೋಜಾ ಅವರು ವಿದ್ಯಾರ್ಥಿಗಳ ತಾಂತ್ರಿಕ ಕೌಶಲ್ಯ, ನಾವೀನ್ಯತೆ ಮತ್ತು ಉತ್ಸಾಹವನ್ನು ಶ್ಲಾಘಿಸಿ, ವಿಜೇತರಿಗೆ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ವಿಭಾಗೀಯ ಮುಖ್ಯಸ್ಥ ಡಾ. ಹರೀಶ್ ಬಿ., ಸಂಚಾಲಕಿ ಜಯಶ್ರೀ ಎಂ., ಸಂಘಟನೆಯ ಅಧ್ಯಕ್ಷ ಲೆನ್ವಿಲ್ ಪಿಂಟೋ ಮತ್ತು ಕಾರ್ಯದರ್ಶಿ ರಶ್ಮಿತಾ ಪಿ. ಉಪಸ್ಥಿತರಿದ್ದರು. ಜೀಶಾನ್ ಸ್ವಾಗತಿಸಿದರೆ, ರಶ್ಮಿತಾ ಪಿ. ವರದಿ ಮಂಡಿಸಿದರು.

ಸ್ಪರ್ಧೆಯ ಪದವಿಪೂರ್ವ (ಯುಜಿ) ವಿಭಾಗದಲ್ಲಿ ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ಒಟ್ಟಾರೆ ಚಾಂಪಿಯನ್‌ಶಿಪ್ ಹಾಗೂ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ರನ್ನರ್ಸ್-ಅಪ್ ಪ್ರಶಸ್ತಿ ಪಡೆದವು. ಸ್ನಾತಕೋತ್ತರ (ಪಿಜಿ) ವಿಭಾಗದಲ್ಲಿ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರನ್ನರ್ಸ್-ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಸಹಾಯಕ ಪ್ರಾಧ್ಯಾಪಕ ಜೆಫ್ಸನ್ ಡಿ'ಸಿಲ್ವಾ ವಂದಿಸಿದರು ಹಾಗೂ ವಿದ್ಯಾರ್ಥಿನಿ ಜಾಯ್ಲಿನ್ ಫ್ಲೋರಿ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ