ಮಂಗಳೂರು : ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ಹಾಗೂ ಶೈನ್ ಫೌಂಡೇಶನ್ ಸಹಯೋಗದಲ್ಲಿ ನವೆಂಬರ್ 12 ರಿಂದ 14 ರವರೆಗೆ 'ಸೈನೆರ್ಜಿಯಾ-26' ರಾಷ್ಟ್ರೀಯ ತಾಂತ್ರಿಕ ಮತ್ತು ನಾವೀನ್ಯತಾ ಉತ್ಸವವನ್ನು ಆಯೋಜಿಸಲಾಗಿದೆ. 8ನೇ ತರಗತಿಯಿಂದ ಎಂಜಿನಿಯರಿಂಗ್ವರೆಗಿನ 5,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 425ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗವಹಿಸುವ ನಿರೀಕ್ಷೆಯಿದೆ.
ಈ ಮೂರು ದಿನಗಳ ಉತ್ಸವದಲ್ಲಿ 13ನೇ ಆವೃತ್ತಿಯ 'ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ (SSTH)' ನಡೆಯಲಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ₹2,00,000 ಮೊತ್ತದ ಆರಂಭಿಕ ಅನುದಾನ (Seed Grant) ನೀಡಲಾಗುತ್ತದೆ. ಇದರ ಜೊತೆಗೆ EG ಸಂಸ್ಥೆಯ ಪ್ರಾಯೋಜಕತ್ವದಲ್ಲಿ SOSC ಆಯೋಜಿಸುವ 36 ಗಂಟೆಗಳ ಹ್ಯಾಕಥಾನ್ ಒಳಗೊಂಡ 'ಡೆವ್ಹೋಸ್ಟ್', ನವೆಂಬರ್ 13ರಂದು ಬೆಳಿಗ್ಗೆ 9 ಗಂಟೆಗೆ ಏರ್ ಶೋ ಹೊಂದಿರುವ 'ಏರೋಫಿಲಿಯಾ' ಉತ್ಸವ ಹಾಗೂ ಸಹ್ಯಾದ್ರಿ ರೋಬೋಟಿಕ್ಸ್ ಕ್ಲಬ್ನಿಂದ ರೋಬೋ ಸಾಕರ್, ಸುಮೋ ರೋಬೋಟಿಕ್ಸ್ ಸ್ಪರ್ಧೆಗಳು ಆಕರ್ಷಣೆಯಾಗಲಿವೆ.
ಉದ್ಘಾಟನಾ ಸಮಾರಂಭದಲ್ಲಿ GTTC ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಿದ್ದಲಿಂಗಪ್ಪ ಬಿ. ಪೂಜಾರಿ ಮತ್ತು EG India ಮುಖ್ಯ ಡೇಟಾ ವಿಜ್ಞಾನಿ ಡಾ. ಪ್ರಖ್ಯಾತ್ ರೈ ಭಾಗವಹಿಸಲಿದ್ದು, ನವೆಂಬರ್ 14ರ ಸಮಾರೋಪ ಸಮಾರಂಭದಲ್ಲಿ ಶ್ರೀ ಶಶಿಧರ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವು ಸಾರ್ವಜನಿಕರಿಗೆ ಉಚಿತವಾಗಿದ್ದು, ಸ್ಥಳದಲ್ಲೇ ನೋಂದಣಿಗೆ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ synergia@sahyadri.edu.in ಅಥವಾ ಸಂಯೋಜಕರಾದ ಡಾ. ಪ್ರಶಾಂತ್ ರಾವ್ (9448983914) ಅವರನ್ನು ಸಂಪರ್ಕಿಸಬಹುದು.