image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ವಿಕೆ ಕೋಸ್ಟಲ್ ವೆಂಚರ್ಸ್ ಸಂಸ್ಥೆ ಶುಭಾರಂಭ: ದೀಪ ಬೆಳಗಿಸಿ ಶುಭ ಕೋರಿದ ಗಣ್ಯರು

ಮಂಗಳೂರಿನಲ್ಲಿ ವಿಕೆ ಕೋಸ್ಟಲ್ ವೆಂಚರ್ಸ್ ಸಂಸ್ಥೆ ಶುಭಾರಂಭ: ದೀಪ ಬೆಳಗಿಸಿ ಶುಭ ಕೋರಿದ ಗಣ್ಯರು

ಮಂಗಳೂರು: ನಗರದ ಪಂಪ್ ವೆಲ್ ನಲ್ಲಿ ನೂತನ ‘ವಿಕೆ ಕೋಸ್ಟಲ್ ವೆಂಚರ್ಸ್’ (VK Coastal Ventures) ಸಂಸ್ಥೆಯು ರವಿವಾರ ಬೆಳಿಗ್ಗೆ ಸಂಭ್ರಮದಿಂದ ಶುಭಾರಂಭಗೊಂಡಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ನೂತನ ಉದ್ಯಮಕ್ಕೆ ಭವಿಷ್ಯದ ಯಶಸ್ಸನ್ನು ಹಾರೈಸಿದರು.

ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಎಸ್ ಎಲ್ ಶೇಟ್ ಡೈಮಂಡ್ ಹೌಸ್ ನ ಮಾಲಕರಾದ ರವೀಂದ್ರ ಶೆಟ್ ಅವರು, ಚಿತ್ರನಟ ವಿನೀತ್ ಕುಮಾರ್, ಸಮತಾ ಅಮೀನ್, ನಿತಿನ್ ರಾಜ್ ಶೆಟ್ಟಿ ಹಾಗೂ ದೀಕ್ಷಾ ಶೆಟ್ಟಿ ಅವರ ಈ ಹೊಸ ಸಾಹಸ ಮತ್ತು ಸ್ನೇಹಿತರ ಈ ಉದ್ಯಮ ಯಶಸ್ವಿಯಾಗಿ ಸಾಗಲಿ, ಸಂಸ್ಥೆಯಿಂದ ಪ್ರತಿಯೊಬ್ಬರಿಗೂ ಒಳಿತಾಗಲಿ ಎಂದು ಆಶಂಸಿಸಿದರು.

ಬಳಿಕ ಮಾತನಾಡಿದ ಡಾ. ದೇವರಾಜ್ ಆಚಾರ್ಯ ಅವರು, ವಿನೀತ್ ತಮ್ಮ ವಿದ್ಯಾರ್ಥಿಯಾಗಿದ್ದ ದಿನಗಳಿಂದಲೂ ಹೊಸ ವಿಷಯಗಳನ್ನು ಕಲಿಯುವಲ್ಲಿ ಅಪಾರ ಆಸಕ್ತಿ ಹೊಂದಿದ್ದವರು ಎಂದರು. ತಮ್ಮ ಹಳೆಯ ಗೆಳೆಯರನ್ನು ಜೊತೆಗೂಡಿಸಿಕೊಂಡು ಈ ಉದ್ಯಮವನ್ನು ಪ್ರಾರಂಭಿಸಿರುವುದು ಶ್ಲಾಘನೀಯ ಕಾರ್ಯ ಎಂದು ಶುಭ ಕೋರಿದರು.

ಉದ್ಯಮಿ ಹರಿಪ್ರಸಾದ್ ರೈ ಬೆಳ್ಳಿಪ್ಪಾಡಿ ಅವರು ಮಾತನಾಡಿ, ಮಂಗಳೂರು ಇಡೀ ರಾಜ್ಯದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ನಗರಗಳಲ್ಲಿ ಒಂದಾಗಿದೆ. ಇಂತಹ ಪ್ರಗತಿದಾಯಕ ನಗರದಲ್ಲಿ ಹೊಸ ಹೊಸ ಸಂಸ್ಥೆಗಳು ಹಾಗೂ ಉದ್ಯಮಗಳು ಕಾರ್ಯಾರಂಭ ಮಾಡುತ್ತಿರುವುದು ಖುಷಿಯ ವಿಷಯವಾಗಿದೆ ಎಂದರು. ವಿನೀತ್ ಹಾಗೂ ಅವರ ತಂಡದ ಈ ವ್ಯಾಪಾರಿ ಪಯಣ ಅತ್ಯುತ್ತಮ ಯಶಸ್ಸನ್ನು ಕಾಣಲಿ ಎಂದು ಹಾರೈಸಿದರು.

ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಅವರು ಮಾತನಾಡಿ, ವಿನೀತ್ ಕುಮಾರ್ ಅವರು ಚಿತ್ರರಂಗದಲ್ಲಿ ಸಾಧಿಸಿದ ಯಶಸ್ಸಿನಂತೆಯೇ ಈ ನೂತನ ಉದ್ಯಮ ಕ್ಷೇತ್ರದಲ್ಲೂ ಮಹತ್ತರವಾದ ಸಫಲತೆ ಗಳಿಸಲಿ ಎಂದು ಶುಭ ನುಡಿದರು.

ಕಾರ್ಯಕ್ರಮದಲ್ಲಿ ರಕ್ಷಿತ್ ರಾವ್, ಸುಧಾಂಜಿ, ಪ್ರಸಿದ್ಧ ಕಲಾವಿದ ಅರವಿಂದ್ ಬೋಳಾರ್, ಜಗನ್ನಾಥ ಶೆಟ್ಟಿ ಬಾಳ, ವಿಖ್ಯಾತ್, ಮಯೂರ್, ಅಶ್ವಿನ್, ಆನಂದ ಕುಂಪಲ, ಆರ್.ಜೆ. ಶಾಸಿಲ್, ವಿನೀತ್ ಕುಮಾರ್, ಸಮತಾ ಅಮೀನ್, ನಿತಿನ್ ರಾಜ್ ಶೆಟ್ಟಿ, ದೀಕ್ಷಾ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಸಾಹಿಲ್ ರೈ ಇಡೀ ಉದ್ಘಾಟನಾ ಸಮಾರಂಭವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.

Category
ಕರಾವಳಿ ತರಂಗಿಣಿ