ಮಂಗಳೂರು: ಇಲ್ಲಿನ ಕುಡುಪು, ನೀರ್‌ಮಾರ್ಗ, ಬೋಳಾರ ಹಾಗೂ ಬಿಜೈ ಫೀಡರ್‌ಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಅ. 30 ರ೦ದು ವಿದ್ಯುತ್ ನಿಲುಗಡೆಗೊಳ್ಳಲಿದೆ. ಕುಲಶೇಖರ 110/33/11 ಕೆವಿ ಉಪಕೇಂದ್ರದಿಂದ ಹೊರಡುವ 11 ಕೆವಿ ಕುಡುಪು ಫೀಡರ್ ಮತ್ತು 11 ಕೆವಿ ನೀರ್‌ಮಾರ್ಗ ಫೀಡರ್‌ನಲ್ಲಿ ಅ. 30 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ನಿರ್ವಹಣಾ ಕಾಮಗಾರಿ ಹಾಗೂ ವ್ಯವಸ್ಥೆ ಸುಧಾರಣೆ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.ಹಾಗಾಗಿ ಕುಡುಪು, ಕುಲಶೇಖರ, ಸರಿಪಲ್ಲ, ನೂಜಿ, ಸಿಲ್ವರ್‌ಗೇಟ್, ಡೈರಿ, ಬೈತುರ್ಲಿ, ಕೆ.ಹೆಚ್.ಬಿ. ಲೇಔಟ್, ನೀರುಮಾರ್ಗ, ಚೌಕಿ, ಬಿತ್ತುಪಾದೆ, ಮಲ್ಲೂರು, ಬದ್ರಿಯಾನಗರ, ಪಡು, ದೆಮ್ಮಲೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ನಂದಿಗುಡ್ಡ/ಬೋಳಾರ
ನಂದಿಗುಡ್ಡ 33/11 ಕೆವಿ ಉಪಕೇಂದ್ರದಿಂದ ಹೊರಡುವ 11 ಕೆವಿ ಬೋಳಾರ ಫೀಡರ್‌ನಲ್ಲಿ ಅ. 30 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜಂಪರ್ ಬದಲಾವಣೆ ಹಾಗೂ ಜಿ.ಓ.ಎಸ್. ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಜೆಪ್ಪು ಮಾರ್ಕೆಟ್, ಬೋಳಾರ, ಮುಳಿಹಿತ್ಲು, ಮಂಗಳಾದೇವಿ, ಬೋಳಾರ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಬಿಜೈ
ಬಿಜೈ 110/33/11 ಕೆವಿ ಉಪಕೇಂದ್ರದಿಂದ ಹೊರಡುವ 11 ಕೆವಿ ಬಿಜೈ ಫೀಡರ್‌ನಲ್ಲಿ ಅ. 30 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಕೆ.ಎಸ್.ಆರ್.ಟಿ.ಸಿ. ಎದುರು, ಬಿಜೈ ಮೈನ್ ರೋಡ್, ಬಿಜೈ ಚರ್ಚ್ ರೋಡ್, ಬಿಜೈ ನ್ಯೂರೋಡ್, ಎಂ.ಸಿ.ಎಫ್. ಕಾಲೊನಿ, ಆನೆಗುಂಡಿ, ಸಂಕೈಗುಡ್ಡ, ಸಂಕೈಗುಡ್ಡ ಗ್ಯಾಸ್ ಗೋಡೌನ್, ರಾಮಕೃಷ್ಣ ಭಜನಾ ಮಂದಿರ, ನೋಡುಲೇನ್, ಬಟ್ಟಗುಡ್ಡ, ಬಿಜೈ ಮ್ಯೂಸಿಯಂ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.