image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತುಳುವ ಮಹಾಸಭೆಯ ಅಧ್ಯಕ್ಷೆಯಾಗಿ ಅನಿತಾ ನಾಯಕ್ ನೇಮಕ

ತುಳುವ ಮಹಾಸಭೆಯ ಅಧ್ಯಕ್ಷೆಯಾಗಿ ಅನಿತಾ ನಾಯಕ್ ನೇಮಕ

ಮಂಗಳೂರು : ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ಹಿರಿಯ ತಂತ್ರಜ್ಞಾನ ವೃತ್ತಿಪರ ಹಾಗೂ ಸಾಂಸ್ಕೃತಿಕ ಸಂಘಟಕಿ ಅನಿತಾ ನಾಯಕ್ ಅವರು ತುಳುವ ಮಹಾಸಭೆಯ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಕಳೆದ ಮೂರು ದಶಕಗಳಿಂದ ಅಮೆರಿಕದಲ್ಲಿ ನೆಲೆಸಿರುವ ಅನಿತಾ ನಾಯಕ್ ಅವರು ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್ ಕ್ಷೇತ್ರ ಯಶಸ್ವಿ ವೃತ್ತಿಜೀವನ ನಡೆಸುತ್ತಿದ್ದು, ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗದಲ್ಲಿಯೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಪ್ರಮಾಣೀಕೃತ ಯೋಗ ಶಿಕ್ಷಕಿ ಮತ್ತು ಆಯುರ್ವೇದ ಸಲಹೆಗಾರ್ತಿಯಾಗಿರುವ ಅವರು ಕ್ಯಾಲಿಫೋರ್ನಿಯಾದಲ್ಲಿ ಸಮಗ್ರ ಆರೋಗ್ಯ ಸೇವಾ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

೨೦೨೧ರಲ್ಲಿ 'ತುಳಸಿ ತುಳು ಕೂಟ' ಸಂಸ್ಥೆಯನ್ನು ಸ್ಥಾಪಿಸಿದ ಅನಿತಾ ನಾಯಕ್ ಅವರು, ಅಮೆರಿಕದಲ್ಲಿ ತುಳು ಭಾಷೆ, ಹಬ್ಬ-ಹರಿದಿನಗಳು ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಸ್ತುತ ಆಲ್ ಅಮೆರಿಕಾ ತುಳು ಅಸೋಸಿಯೇಷನ್ (AATA) ಆಡಳಿತ ಮಂಡಳಿಯ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ವಿಶ್ವದ ಮೊದಲ ಆನ್‌ಲೈನ್ ತುಳು ಗ್ರಂಥಾಲಯ 'ರಾಣಿ ಅಬ್ಬಕ್ಕ ಗೇಣದ ಚಾವಡಿ' ಯೋಜನೆ ಯಶಸ್ವಿಯಾಗಿ ಸಾಕಾರಗೊಳ್ಳುವಲ್ಲಿ ಶ್ರಮಿಸಿದ್ದಾರೆ. ಅನಿತಾ ನಾಯಕ್ ಅವರ ಈ ನೂತನ ಜವಾಬ್ದಾರಿಗೆ ತುಳುವರ್ಲ್ಡ್ ಫೌಂಡೇಶನ್‌ನ ಗೌರವಾಧ್ಯಕ್ಷ ಶ್ರೀಹರಿನಾರಾಯಣದಾಸ ಅಸ್ರಣ್ಣ ಕಟೀಲ್, ಅಧ್ಯಕ್ಷೆ ಭಾನುಮತಿ ಶೆಟ್ಟಿ, ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಪದಾಧಿಕಾರಿಗಳು ಹಾಗೂ ಕರಾವಳಿಯ ಪ್ರಮುಖ ಸಾಂಸ್ಕೃತಿಕ ಮುಖಂಡರು ಶುಭಾಶಯ ಕೋರಿದ್ದಾರೆ.

Category
ಕರಾವಳಿ ತರಂಗಿಣಿ