ಮಂಗಳೂರು: ಸೆಂಟರ್ ಫಾರ್ ಅಡ್ವಾನ್ಸ್ಡ್ ಲರ್ನಿಂಗ್ (ಸಿಎಫ್‌ಎಎಲ್) ವತಿಯಿಂದ 8ನೇ ಆವೃತ್ತಿಯ 'ಮೇಕರ್ಸ್ ಫೆಟ್ 2026' ವಾರ್ಷಿಕ ಉತ್ಸವವು ನವೆಂಬರ್ 15, 2026 ರಂದು ಮಂಗಳೂರಿನ ಆಕಾಶಭವನ್‌ನಲ್ಲಿರುವ ಸಿಎಫ್‌ಎಎಲ್ ಕ್ಯಾಂಪಸ್‌ನಲ್ಲಿ ನಡೆಯಲಿದೆ. ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಕ್ಷೇತ್ರಗಳಲ್ಲಿ ಯುವ ಪ್ರತಿಭೆಗಳ ಸೃಜನಶೀಲತೆ ಹಾಗೂ ಪ್ರಯೋಗಶೀಲತೆಯನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
2019ರಿಂದ ಆರಂಭವಾಗಿರುವ ಈ ಉತ್ಸವದಲ್ಲಿ ಈ ಬಾರಿ ಬಾಟ್ ಸಾಕರ್, ಇನ್ನೋವೇಶನ್ ಚಾಲೆಂಜ್, ಮೇಕರ್ ಚಾಲೆಂಜ್ ಮತ್ತು ನೆಕ್ಸಸ್ ಕ್ವೆಸ್ಟ್‌ನಂತಹ ನಾಲ್ಕು ಪ್ರಮುಖ ಸ್ಪರ್ಧೆಗಳು ಸೇರಿದಂತೆ ಒಟ್ಟು 15ಕ್ಕೂ ಹೆಚ್ಚು ಸ್ಪರ್ಧೆಗಳು ಮತ್ತು 10 ಪ್ರದರ್ಶನಗಳು ನಡೆಯಲಿವೆ. ವಿದ್ಯಾರ್ಥಿಗಳು, ಶಾಲೆಗಳು, ಕಾಲೇಜುಗಳು ಮತ್ತು ಯುವ ವೃತ್ತಿಪರರು ಈ ಉತ್ಸವದಲ್ಲಿ ಭಾಗವಹಿಸಬಹುದಾಗಿದ್ದು, ಆಸಕ್ತರು ಅಧಿಕೃತ ವೆಬ್‌ಸೈಟ್ ಅಥವಾ ಪೋಸ್ಟರ್‌ನಲ್ಲಿರುವ ಕ್ಯೂಆರ್ ಕೋಡ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.