image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಗ್ರಿಲೀಫ್ ಉತ್ಸವ-2026: ಬೆಳ್ತಂಗಡಿಯಲ್ಲಿ ಸಾಧಕರೊಂದಿಗೆ ದೀಪಾವಳಿ ಸಂಭ್ರಮ

ಅಗ್ರಿಲೀಫ್ ಉತ್ಸವ-2026: ಬೆಳ್ತಂಗಡಿಯಲ್ಲಿ ಸಾಧಕರೊಂದಿಗೆ ದೀಪಾವಳಿ ಸಂಭ್ರಮ

ಬೆಳ್ತಂಗಡಿ: ಪರಿಸರ ಸ್ನೇಹಿ ಅಡಿಕೆ ಹಾಳೆ ತಟ್ಟೆಗಳ ತಯಾರಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಪ್ರಮುಖ ಸಂಸ್ಥೆ 'ಅಗ್ರಿಲೀಫ್ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್' ವತಿಯಿಂದ 'ಅಗ್ರಿಲೀಫ್ ಉತ್ಸವ-2026' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದ ಸಂದರ್ಭದಲ್ಲಿ, ಸಂಸ್ಥೆಯ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿ ಶ್ರಮಿಸಿದ ಉದ್ಯೋಗಿಗಳನ್ನು ಗೌರವಿಸಿ ಅಭಿನಂದಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಸಂಸ್ಥೆಯು, ಕೃಷಿ ತ್ಯಾಜ್ಯವೆಂದು ಪರಿಗಣಿಸಲಾಗುತ್ತಿದ್ದ ಅಡಿಕೆ ಹಾಳೆಗಳನ್ನು ಬಳಸಿ ನೈಸರ್ಗಿಕ, ಸುಸ್ಥಿರ ಹಾಗೂ ಪರಿಸರ ಸ್ನೇಹಿ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇದರ ಮೂಲಕ ಸುಮಾರು 10,000 ರೈತ ಕುಟುಂಬಗಳಿಗೆ ಪರ್ಯಾಯ ಆದಾಯದ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಪ್ರಸ್ತುತ 20ಕ್ಕೂ ಹೆಚ್ಚು ದೇಶಗಳ ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಅಗ್ರಿಲೀಫ್, ಸ್ಥಳೀಯ ಮಹಿಳೆಯರಿಗೆ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಸ್ಥಳೀಯ ಆರ್ಥಿಕತೆ ಮತ್ತು ಮಹಿಳಾ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ.

2025ರಲ್ಲಿ ಪ್ರತಿಷ್ಠಿತ ಜೊಮಾಟೊ ಸಂಸ್ಥೆ ಆಯೋಜಿಸಿದ್ದ ಪ್ಯಾಕಥಾನ್ ಸ್ಪರ್ಧೆಯಲ್ಲಿ ಪ್ಲಾಸ್ಟಿಕ್ ರಹಿತ ಪ್ಯಾಕೇಜಿಂಗ್ ವಿಭಾಗದಲ್ಲಿ ಅಗ್ರಿಲೀಫ್ ಪುರಸ್ಕಾರವನ್ನು ಪಡೆದುಕೊಂಡಿದೆ. ಅಮೆರಿಕವು ವಿದೇಶಿ ಆಮದುಗಳ ಮೇಲೆ ಹೆಚ್ಚಿನ ಸುಂಕ ವಿಧಿಸಿದ ಸವಾಲಿನ ಸಮಯದಲ್ಲೂ ಕೂಡ, ಹೊಸ ದೇಶಗಳ ಮಾರುಕಟ್ಟೆಗಳನ್ನು ತ್ವರಿತವಾಗಿ ಪ್ರವೇಶಿಸಿ ತನ್ನ ಮಾರಾಟವನ್ನು ವಿಸ್ತರಿಸುವ ಮೂಲಕ ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಈ ವಿಶೇಷ ಉತ್ಸವದಲ್ಲಿ ಖ್ಯಾತ ನಿರೂಪಕಿ ಅನುಶ್ರೀ, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್, 'ಸು ಸೋ' ನಿರ್ದೇಶಕ ಜೆ.ಪಿ. ತೂಮಿನಾಡ್, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಹಾಗೂ ಸುದರ್ಶನ್ ಭಟ್ ಬೆದ್ರಡಿ ಮುಂತಾದ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Category
ಕರಾವಳಿ ತರಂಗಿಣಿ