image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎನ್‌ಎಂಪಿಎಯಿಂದ 'ಏಕತೆಗಾಗಿ ಓಟ' ಆಯೋಜನೆ

ಎನ್‌ಎಂಪಿಎಯಿಂದ 'ಏಕತೆಗಾಗಿ ಓಟ' ಆಯೋಜನೆ

ಮಂಗಳೂರು : ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 151ನೇ ಜನ್ಮದಿನದ ಅಂಗವಾಗಿ ನ್ಯೂ ಮಂಗಳೂರು ಬಂದರು ಪ್ರಾಧಿಕಾರವು (ಎನ್‌ಎಂಪಿಎ) ಅಕ್ಟೋಬರ್ 31ರಂದು ರಾಷ್ಟ್ರೀಯ ಏಕತಾ ದಿವಸ್ ಅನ್ನು ಅತ್ಯಂತ ದೇಶಭಕ್ತಿ ಹಾಗೂ ಉತ್ಸಾಹದಿಂದ ಆಚರಿಸಿತು.

ದೇಶದ ಏಕತೆ, ಸಮಗ್ರತೆ ಮತ್ತು ಒಗ್ಗಟ್ಟಿನ ಬದ್ಧತೆಯನ್ನು ಪುನರುಚ್ಚರಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ 'ಏಕತೆಗಾಗಿ ಓಟ' (ರನ್ ಫಾರ್ ಯೂನಿಟಿ) ಕಾರ್ಯಕ್ರಮಕ್ಕೆ ಎನ್‌ಎಂಪಿಎಯ ಉಪಾಧ್ಯಕ್ಷರಾದ ಶ್ರೀಮತಿ ಎಸ್. ಶಾಂತಿ ಅವರು ಹಿರಿಯ ಅಧಿಕಾರಿಗಳು ಹಾಗೂ ಬಂದರಿನ ನೌಕರರ ಉಪಸ್ಥಿತಿಯಲ್ಲಿ ಚಾಲನೆ ನೀಡಿದರು. ಬಂದರು ಪ್ರಾಧಿಕಾರದ ಅಧಿಕಾರಿಗಳು, ನೌಕರರು ಮತ್ತು ಸಿಬ್ಬಂದಿ ವರ್ಗದವರು ಈ ಓಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.

ಓಟದ ಮುಕ್ತಾಯದ ನಂತರ ಉಪಾಧ್ಯಕ್ಷರು ಎಲ್ಲರಿಗೂ ರಾಷ್ಟ್ರೀಯ ಏಕತಾ ದಿವಸ್ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಇದೇ ವೇಳೆ ಭಾರತದ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪಾದಪೂಜೆ ಹಾಗೂ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಲಾಯಿತು. ಈ ಕಾರ್ಯಕ್ರಮದ ಮೂಲಕ ಎನ್‌ಎಂಪಿಎ ಸಂಸ್ಥೆಯು ರಾಷ್ಟ್ರೀಯ ಐಕ್ಯತೆ ಹಾಗೂ ಸಮಗ್ರತೆಯ ಆದರ್ಶಗಳಿಗೆ ತನ್ನ ಬದ್ಧತೆಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದೆ.

Category
ಕರಾವಳಿ ತರಂಗಿಣಿ