ಮಂಗಳೂರು : ಮಂಗಳೂರಿನ ವಾಮಂಜೂರಿನ ಸಂತ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ (ಎಸ್.ಜೆ.ಇ.ಸಿ) ಮಹಿಳಾ ಚೆಸ್ ತಂಡವು ತುಮಕೂರಿನ ಸಿದ್ಧಗಂಗಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅಕ್ಟೋಬರ್ 27 ಮತ್ತು 28, 2026 ರಂದು ನಡೆದ ವಿಟಿಯು ರೆಸ್ಟ್ ಆಫ್ ಬೆಂಗಳೂರು ವಿಭಾಗ ಮಟ್ಟದ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ವನೀಷಾ ರಾಡ್ರಿಗಸ್ ಹಾಗೂ ಸಹಾಯಕ ಪಿಇಡಿ ಸುಧೀರ್ ಎಂ. ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಸಾಕಾರಗೊಂಡಿದೆ.
ಇದೇ ಚಾಂಪಿಯನ್‌ಶಿಪ್‌ನಲ್ಲಿ ಎಸ್.ಜೆ.ಇ.ಸಿ ಪುರುಷರ ಚೆಸ್ ತಂಡವು ಉತ್ತಮ ಪ್ರದರ್ಶನ ನೀಡಿ ಐದನೇ ಸ್ಥಾನವನ್ನು ಗಳಿಸಿದೆ. ವಿದ್ಯಾರ್ಥಿಗಳ ಕಾರ್ಯತಂತ್ರ ರೂಪಿಸುವ ಸಾಮರ್ಥ್ಯ, ಏಕಾಗ್ರತೆ, ಸ್ಪರ್ಧಾತ್ಮಕ ಮನೋಭಾವ ಮತ್ತು ಪರಿಶ್ರಮ ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ. ಈ ವಿಭಾಗೀಯ ಪಂದ್ಯಾವಳಿಯ ಯಶಸ್ಸಿನೊಂದಿಗೆ ಮಹಿಳಾ ಹಾಗೂ ಪುರುಷರ ಎರಡೂ ತಂಡಗಳು ಅಕ್ಟೋಬರ್ 29 ಮತ್ತು 30, 2026 ರಂದು ಅದೇ ಕಾಲೇಜಿನಲ್ಲಿ ನಡೆಯಲಿರುವ ವಿಟಿಯು ರಾಜ್ಯಮಟ್ಟದ ಚೆಸ್ ಚಾಂಪಿಯನ್‌ಶಿಪ್‌ಗೆ ಅಧಿಕೃತವಾಗಿ ಅರ್ಹತೆ ಪಡೆದಿವೆ. ತಂಡಗಳ ಈ ಬ್ಹೃತ್ ಸಾಧನೆಗೆ ಎಸ್.ಜೆ.ಇ.ಸಿ ಆಡಳಿತ ಮಂಡಳಿಯು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದು, ಮುಂಬರುವ ರಾಜ್ಯಮಟ್ಟದ ಚಾಂಪಿಯನ್‌ಶಿಪ್‌ನಲ್ಲಿಯೂ ಉತ್ತಮ ಪ್ರದರ್ಶನ ತೋರಲು ಶುಭ ಹಾರೈಸಿದೆ.