image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಉರ್ವಸ್ಟೋರ್ ಮಾರುಕಟ್ಟೆಗೆ ಹೊಸ ರೂಪ: ಮುಡಾದಿಂದ ಸಾರ್ವಜನಿಕ ಸ್ನೇಹಿ ಆಡಳಿತ - ಸಂತೋಷ್ ಕುಮಾರ್ ಶೆಟ್ಟಿ

ಉರ್ವಸ್ಟೋರ್ ಮಾರುಕಟ್ಟೆಗೆ ಹೊಸ ರೂಪ: ಮುಡಾದಿಂದ ಸಾರ್ವಜನಿಕ ಸ್ನೇಹಿ ಆಡಳಿತ - ಸಂತೋಷ್ ಕುಮಾರ್ ಶೆಟ್ಟಿ

ಮಂಗಳೂರು: ನಗರ ಅಭಿವೃದ್ಧಿ ಪ್ರಾಧಿಕಾರದಿಂದ (ಮುಡಾ) ಉರ್ವಸ್ಟೋರ್‌ನಲ್ಲಿರುವ ಹಳೆ ಮಾರುಕಟ್ಟೆಗೆ ಹೊಸ ರೂಪ ನೀಡಲು ಕ್ರಮ ವಹಿಸಲಾಗಿದ್ದು, ತಾತ್ಕಾಲಿಕ ಮೇಲ್ಮಾವಣಿಯೊಂದಿಗೆ ಹೂವು, ತರಕಾರಿ ಹಾಗೂ ಮೀನು-ಮಾಂಸದ ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆ ರೂಪಿಸಲಾಗುತ್ತದೆ. ಮುರ್ಚನೋಳಗೆ ಈ ಮಾರುಕಟ್ಟೆ ಸಿದ್ಧಗೊಳ್ಳಲಿದೆ ಎಂದು ಸಂತೋಷ್ ಕುಮಾರ್ ಶೆಟ್ಟಿ ತಿಳಿಸಿದರು. ನಗರದಲ್ಲಿ ನಿರ್ಮಾಣವಾಗಿರುವ ಸಾಕಷ್ಟು ಮಾರುಕಟ್ಟೆಗಳು ವ್ಯಾಪಾರಿ ಹಾಗೂ ಜನಸ್ನೇಹಿಯಾಗಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಮಾರುಕಟ್ಟೆಯನ್ನು ಮಾದರಿಯಾಗಿ ನಿರ್ಮಿಸಲಾಗುವುದು ಎಂದವರು ಹೇಳಿದ್ದಾರೆ.

ಅದರ ಪಕ್ಕದಲ್ಲೇ ಸುಸಜ್ಜಿತ ವಾಣಿಜ್ಯ ಕಟ್ಟಡ ನಿರ್ಮಾಣ ಆಗಲಿದ್ದು ಅಲ್ಲಿ ಐಟಿ- ಬಿಟಿ ಸೇರಿದಂತೆ ವಾಣಿಜ್ಯ ಮುಳಿಗೆಗಳು ಮಿತ ದರದಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. ಸುಮಾರು 8 ರಿಂದ 9 ಕೋಟಿ ರೂ. ವೆಚ್ಛದಲ್ಲಿ ಈ ಕಟ್ಟಡ ನಿರ್ಮಾಣ ನಡೆಯಲಿದೆ. ಈ ವಾಣಿಜ್ಯ ಕಟ್ಟಡವು ಮಾಲ್ ಮಾದರಿಯಲ್ಲಿ ನಿರ್ಮಾಣವಾಗಲಿದೆ. ತಳ ಮಹಡಿಯಿಂದ 2ನೇ ಮಹಡಿಯವರೆಗೆ ಮಾರುಕಟ್ಟೆ ಪೂರಕವಾದ ವ್ಯಾಪಾರ-ವಹಿವಾಟುಗಳಿಗೆ ಮೀಸлиಸಲಾಗುತ್ತಿದ್ದು ಮೇಲಿನ ಅಂತಸ್ತಿನಲ್ಲಿ ಐಟಿ- ಬಿಟಿ ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಬಾಡಿಗೆ ಅಥವಾ ಲೀಸ್‌ಗೆ ನೀಡುವ ವ್ಯವಸ್ಥೆ ಮಾಡಲಾಗುವುದು. ಐಟಿ-ಬಿಟಿ, ಸ್ಟಾರ್ಟ್ ಅಪ್ ಹಾಗೂ ವಾಣಿಜ್ಯ ವ್ಯವಹಾರದ ಸಂಸ್ಥೆಗಳು ಹೊರಗಡೆ ಚದರ ಅಡಿಗೆ 100 ರೂ.ಗೂ ಅಧಿಕ ದರವನ್ನು ಪಾವತಿಸಬೇಕಾಗಿದೆ. ಈ ನೂತನ ವಾಣಿಜ್ಯ ಕಟ್ಟಡದಲ್ಲಿ ಕನಿಷ್ಠ 60 ರೂ.ಗಳಲ್ಲಿ ಒದಗಿಸುವ ವ್ಯವಸ್ಥೆಯಾಗಲಿದೆ. ಈ ಯೋಜನೆಗಳಿಗೆ ಅನುಮೋದನೆ ಪಡೆಯಲಾಗಿದ್ದು ಶೀಘ್ರವೇ ಡಿಪಿಆರ್ ಸಿದ್ಧಗೊಳ್ಳಲಿದೆ ಎಂದು ಅವರು ಹೇಳಿದರು.

ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಸಾರ್ವಜನಿಕರಿಗೆ ಪಾರದರ್ಶಕ ಆಡಳಿತ ನೀಡುವ ಉದ್ದೇಶದಿಂದ ಕಚೇರಿಯ ಪ್ರವೇಶ ದ್ವಾರದಲ್ಲಿ ಸಾರ್ವಜನಿಕ ಸ್ನೇಹಿ ಹೆಲ್ಪ್ ಡೆಸ್ಕ್ ತಿಂಗಳುಗಳಿಗೆ ಆರಂಭಿಸಲಾಗುವುದು. ನಾನು ಅಧಿಕಾರ ವಹಿಸಿಕೊಂಡ ಬಳಿಕ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲಾಗುತ್ತಿದೆ. ಇದೀಗ ಮುಡಾದ ಕೆಲಸ ಕಾರ್ಯ ಹಾಗೂ ಪ್ರಕ್ರಿಯೆಗಳನ್ನು ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗಿಸುವ ನಿಟ್ಟಿನಲ್ಲಿ ತಮ್ಮ ಕಡತಗಳ ಸ್ಥಿತಿಗತಿಯನ್ನು ಅರಿಯಲು ಕಚೇರಿಯ ಮುಂಭಾಗದಲ್ಲೇ ಹೆಲ್ಪ್‌ಡೆಸ್ಕ್ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ. ಇದೇ ವೇಳೆ ಮುಡಾ ಕಚೇರಿಗೆ ಕಾರ್ಪೊರೇಟ್ ಲುಕ್ ನೀಡುವ ಕೆಲಸ ಕಾರ್ಯಗಳು ಪ್ರಗತಿಯಲ್ಲಿವೆ. ಜನಸ್ನೇಹಿಯಾಗಿ ಮುಡಾ ಕಚೇರಿಯನ್ನು ಮಾಡುವ ನಿಟ್ಟಿನಲ್ಲಿ ಸಕಲ ರೀತಿಯ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಮುಡಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ವಸತಿ ಬಡಾವಣೆ ಗಳ ನಿರ್ಮಾಣ, ಕೆರೆಗಳ ಅಭಿವೃದ್ಧಿ ಪಾರ್ಕ್ ನಿರ್ಮಾಣ ಹಾಗೂ ಹೈಟೆಕ್ ರಸ್ತೆ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಕುಂಜತ್ತಬೈಲ್‌ನಲ್ಲಿ ಒಟ್ಟು 17 ಎಕರೆ 49 ಸೆಂಟ್ಸ್ ಜಮೀನಿನಲ್ಲಿ 875 ಲಕ್ಷ ರೂ. ವೆಚ್ಛದಲ್ಲಿ ವಸತಿ ಬಡಾವಣೆ ನಿರ್ಮಿಸಲಾಗಿದ್ದು ಒಟ್ಟು 208 ನಿವೇಶನಗಳನ್ನು ಒಳಗೊಂಡಿದೆ. ಈಗಾಗಲೇ 32 ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು ಉಳಿದ ನಿವೇಶನಗಳ ಹಂಚಿಕೆಗಾಗಿ ಪ್ರಕಟಣೆ ಹೊರಡಿಸಲಾಗಿದೆ. ಆಸಕ್ತರು ಡಿ.28ರೊಳಗೆ ನಿವೇಶನದ ಮೊತ್ತದ ಶೇ. 10ರಷ್ಟು ಹಣವನ್ನು ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಚೇಳೂರು ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ಮೊದಲ ಹಂತವಾಗಿ 45 ಎಕರೆ 85 ಸೆಂಟ್ಸ್ ಜಮೀನಿನಲ್ಲಿ ಒಟ್ಟು 709 ನಿವೇಶನಗಳ ವಸತಿ ಬಡಾವಣೆ ನಿರ್ಮಿಸಲು ಉದ್ದೇಶಿಸಲಾಗಿದೆ. ಸದ್ಯ 15.98 ಕೋಟಿ ರೂ. ಮೊತ್ತದ ಸಿವಿಲ್ ಕಾಮಗಾರಿಗೆ ಗುತ್ತಿಗೆ ನಿಗದಿಪಡಿಸಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ.

ಜಲಮೂಲಗಳ ಸಂರಕ್ಷಣೆ ಮತ್ತು ಪರಿಸರ ಅಭಿವೃದ್ಧಿಯ ದೃಷ್ಟಿಯಿಂದ ಮುಡಾ ವತಿಯಿಂದ ಒಟ್ಟು 1801 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ವಿವಿಧ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಪ್ರಮುಖವಾಗಿ, ಉಳ್ಳಾಲ ತಾಲ್ಲೂಕು ಹರೇಕಳ ಗ್ರಾಮದ ಕೆರೆ ಅಭಿವೃದ್ಧಿಗೆ 200 ಲಕ್ಷ ರೂ., ಮೂಲ್ಕಿ ಆನೆಕರೆ ಅಭಿವೃದ್ಧಿಗೆ 495 ಲಕ್ಷ ರೂ., ಉಳ್ಳಾಲ ತಾಲ್ಲೂಕು ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕುಂಪಲ ಮೂರುಕಟ್ಟೆ ಕೆರೆ ಅಭಿವೃದ್ಧಿಗೆ 495 ಲಕ್ಷ ರೂ., ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಜಪ್ಪಿನಮೊಗರು ಕೆರೆ ಅಭಿವೃದ್ಧಿಗೆ 105 ಲಕ್ಷ ರೂ. ಹಾಗೂ ಹೊಸಬೆಟ್ಟು ಗ್ರಾಮದ ಕೋಡಿ ಕೆರೆಗೆ 135 ಲಕ್ಷ ರೂ., ಅಂಬಲಮೊಗರು ವಾದ ಕೆರೆ (100 ಲಕ್ಷ ರೂ.), ಜಪ್ಪಿನ ಮೊಗರಿನ ಮತ್ತೊಂದು ಕೆರೆ (50 ಲಕ್ಷ ರೂ.), ತಲಪಾಡಿ ದೇವಿಪುರ ದೇವಸ್ಥಾನದ ಕೆರೆ (15 ಲಕ್ಷ ರೂ.) ಹಾಗೂ ಹೊಸಬೆಟ್ಟು ತಾವರೆಕೋಳ ಕೆರೆ ಅಭಿವೃದ್ಧಿಗೆ 206 ಲಕ್ಷ ರೂ. ಅನುದಾನ ಮೀಸಲಿಡಿಸಲಾಗಿದೆ ಎಂದು  ವಿವರಿಸಿದರು.

ಮನಪಾ ವ್ಯಾಪ್ತಿಯ ಹೊಸಬೆಟ್ಟು ವಾರ್ಡ್ ನಂ. 8ರ ಪ್ರೇಮನಗರದಲ್ಲಿ ಹಾಗೂ ಹರೇಕಳ ಡ್ಯಾಮ್ ಬಳಿ ಸಾರ್ವಜನಿಕ ಉದ್ಯಾನವನಗಳನ್ನು (ಪಾರ್ಕ್) ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು  ತಿಳಿಸಿದರು.

Category
ಕರಾವಳಿ ತರಂಗಿಣಿ