ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಪಕ್ಷಾತೀತ ಮತ್ತು ಜಾತ್ಯಾತೀತವಾಗಿರುತ್ತದೆ ಎಂದು ಪುತ್ತೂರು ಶಾಸಕ ಅಶೋಕ ರೈಯವರು ಹೇಳಿದರು. ಅವರು ನಗರದ ಓಷನ್ ಪರ್ಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಿಕಾ ಪ್ರತಿನಿಧಿಗಳನ್ದೇಶಿಸಿ ಮಾತನಾಡಿ, ನಮ್ಮ ಹೆಸರಿನಲ್ಲಿರುವ ಚಾರಿಟೇಬಲ್ ಟ್ರಸ್ಟನ್ನು ಸುಮಾರು 14 ವರ್ಷದಿಂದ ನಡೆಸಿಕೊಂಡು ಬರುತ್ತಾ ಇದ್ದೇನೆ. ದೀಪಾವಳಿಯ ಪ್ರಯುಕ್ತ ಪ್ರತಿವರ್ಷ ನಮ್ಮ ಟ್ರಸ್ಟಿನ ಮುಖಾಂತರ ವಸ್ತ್ರ ವಿತರಣೆ ಮತ್ತು ಸಹಭೋಜನ ಕಾರ್ಯಕ್ರಮವನ್ನು ಹಮ್ಮಿಕೊಳ್ತೇವೆ. ಇದೇ ಬರುವ ಎರಡನೇ ತಾರೀಕು ಪುತ್ತೂರಿನ ಕೊಂಬೆಟ್ಟು ಶಾಲಾ ಮೈದಾನದಲ್ಲಿ ಈ ವರ್ಷದ ಕಾರ್ಯಕ್ರಮ ನಡೆಯಲಿದೆ. 12ನೇ ವರ್ಷದ ಕಾರ್ಯಕ್ರಮ ಇದಾಗಿದ್ದು, ಈ ವರ್ಷ 75,000 ಜನರಿಗೆ ವಸ್ತ್ರ ವಿತರಣೆಯ ಎಲ್ಲಾ ತಯಾರಿಗಳನ್ನು ನಡೆಸಿದೆ. ಅದರ ಜೊತೆಗೆ 10,000 ಜನರಿಗೆ ಹೆಚ್ಚುವರಿಯಾಗಿ ನಾವು ವಸ್ತ್ರ ಸಿದ್ದ ಮಾಡಿಕೊಂಡಿದ್ದೇವೆ. ಮಕ್ಕಳಿಗೆ ಮತ್ತು ಪುರುಷರಿಗೆ ಬೆಡ್ ಶೀಟ್ ಕೂಡ ಕೊಡುತ್ತೇವೆ. ಮಹಿಳೆಯರಿಗೆ ಸೀರೆಯನ್ನು ಹಂಚುವ ಕೆಲಸವನ್ನು ಮಾಡುತ್ತೇವೆ. ಸುಮಾರು ಮುನ್ನೂರು ಜನ ಅಡಿಗೆ ಭಟ್ರು ಎರಡು ದಿವಸ ಈ ಕಾರ್ಯಕ್ರಮಕ್ಕೆ ಆಹಾರ ತಯಾರಿ ಮಾಡುವಂತಹ ಕೆಲಸವನ್ನು ಮಾಡುತ್ತಾರೆ.
ಇದರ ಜೊತೆಯಲ್ಲಿ ಗೂಡು ದೀಪ ಕಾರ್ಯಕ್ರಮವನ್ನು ಕೂಡ ನಾವು ಈ ಕಾರ್ಯಕ್ರಮದಲ್ಲಿ ಆಯೋಜನೆ ಮಾಡುತ್ತೇವೆ. ಮೊದಲನೇ ಬಹುಮಾನವಾಗಿ 10 ಸಾವಿರ ಮತ್ತೆ ಎರಡನೇ ಬಹುಮಾನವಾಗಿ 7500 ಮೂರನೇ ವಾಗಿ 5000 ಬಹುಮಾನವಾಗಿ ಕೊಡಲಾಗುತ್ತದೆ. ಕಳೆದ ಬಾರಿ ಸುಮಾರು 350 ಗೂಡುದೀಪ ಗಳು ಈ ಕಾರ್ಯಕ್ರಮದಲ್ಲಿ ಪ್ರದರ್ಶನವಾಗಿದೆ. ಈ ವರ್ಷ ಸುಮಾರು 500 ಗೂಡು ದೀಪಗಳ ಪ್ರದರ್ಶನ ಆಗುವ ಸಾದ್ಯತೆ ಇದ್ದು, ಈಗಾಗಲೆ ನೋಂದಾವಣೆ ಕಾರ್ಯ ಆಗುತ್ತಿದೆ ಎಂದರು. ಅಶೋಕ ಜನಮನ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸುತ್ತಿದ್ದು ಅವರ ಜೊತೆ ಲಕ್ಷ್ಮಿ ಹೆಬ್ಬಾಳ್ಕರ್ ಕೂಡ ಬರಲಿದ್ದಾರೆ ಅಷ್ಟೇ ಅಲ್ಲದೆ ಈ ಭಾಗದ ಎಲ್ಲಾ ಪ್ರಮುಖರು ಇದಕ್ಕೆ ಸಾಕ್ಷಿ ಆಗಲಿದ್ದಾರೆ. ಎಲ್ಲಾ ಧರ್ಮದ ಜನರು ಹತ್ತು ವರ್ಷದಿಂದಲೂ ಬಂದಿದ್ದಾರೆ ಎಂದು ಹೇಳಿದರು.ಟ್ರಸ್ಟಿನಿಂದ ಜನಪರ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ ಕಾರ್ಮಿಕ ಕಾರ್ಡ ಪ್ಯಾನ್ ಕಾರ್ಡು, ಪಾಸ್ಪೋರ್ಟ್ ಅಲ್ಲದೇ ಡ್ರೈವರ್ ಕಲಿಸುವಂತಹ ಕೆಲಸಗಳು ಒಂದು ರೂಪಾಯಿ ತೆಗೆದುಕೊಳ್ಳದೇ ಮಾಡಿದ್ದೇವೆ. ಟ್ರಸ್ಟ್ ವತಿಯಿಂದ ಈಗಾಗಲೇ ಮನೆ ಇಲ್ಲದವರಿಗೆ ಮನೆ ಕಟ್ಟಿಸಿ ಕೊಡುವ ಕೆಲಸವನ್ನು ಮಾಡುತ್ತಿದ್ದೇವೆ.ಮನೆ ಇಲ್ಲದ ಮಹಿಳೆಯರಿಗೆ ಒಂದೇ ಕಡೆ 240 ಮನೆ ಕಟ್ಟಿಸುವ ಕನಸು ಹೊಂದಿದ್ದೇವೆ. ಅದಕ್ಕಾಗಿ ಈಗಾಗಲೇ 10 ಎಕರೆ ಜಾಗ ಖರೀದಿ ಮಾಡಿದ್ದೇವೆ ಎಂದರು.
ಶಾಸಕನಾಗಿ 2023-24ರಲ್ಲಿ 1476 ಕೋಟಿ ರೂಪಾಯಿ ಅನುದಾನವನ್ನು ಪುತ್ತೂರಿಗೆ ತಂದಿದ್ದೇನೆ. 2024- 25ರಲ್ಲಿ ಅನುದಾನಗಳು ಬಿಡುಗಡೆಯಾಗುತ್ತಿದ್ದು, ಶಿಲನ್ಯಾಸ ಕಾರ್ಯ ಆಗಬೇಕಾಗಿದೆ ಎಂದರು. ಪುತ್ತೂರಿಗೆ ಮೆಡಿಕಲ್ ಕಾಲೇಜ್ ತರುವ ಪ್ರಯತ್ನ ಮಾಡಲಾಗುತ್ತಿದೆ. ಅದಕ್ಕಾಗಿ ಜಮೀನು ಗುರುತಿಸಲಾಗಿದೆ. ಅಂತರಾಷ್ಟ್ರೀಯ ಕ್ರೀಡಾಂಗಣದ ಮಾತುಕತೆ ಈಗಾಗಲೇ ಮುಗಿದಿದ್ದು ಇನ್ನು ಮೂರು ವರ್ಷದಲ್ಲಿ ಕ್ರೀಡಾಂಗಣ ಸಿದ್ಧವಾಗಲಿದೆ ಎಂದರು. ಪುತ್ತೂರಿಗೆ ಉದ್ಯಮಗಳು ಬರಬೇಕೆನ್ನುವ ನಿಟ್ಟಿನಲ್ಲಿ 150 ಎಕರೆ ಜಾಗವನ್ನು ಗುರುತಿಸಲಾಗಿದೆ. ಪ್ರವಾಸೋದ್ಯಮಕ್ಕೆ ಒತ್ತು ನೀಡುವಂತೆ ಅದಕ್ಕೂ ಅನುದಾನವನ್ನು ಮೀಸಲಿಡಲಾಗಿದೆ ಎಂದರು.