image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆರ್‌ಜಿಯುಎಚ್‌ಎಸ್ ಕಬಡ್ಡಿ: ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಚಾಂಪಿಯನ್

ಆರ್‌ಜಿಯುಎಚ್‌ಎಸ್ ಕಬಡ್ಡಿ: ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಚಾಂಪಿಯನ್

ಮೂಡುಬಿದಿರೆ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್) ಆಯೋಜಿಸಿದ್ದ ಮಂಗಳೂರು ವಲಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಶ್ರೇಷ್ಠ ಸಾಧನೆ ಮಾಡುವ ಮೂಲಕ ಚಾಂಪಿಯನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ತಲಪಾಡಿಯ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಆಯೋಜನೆಗೊಂಡಿದ್ದ ಈ ಪ್ರತಿಷ್ಠಿತ ಪಂದ್ಯಾವಳಿಯ ಫೈನಲ್ ಹಣಾಹಣಿಯಲ್ಲಿ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಹಾಗೂ ಎಸ್‌ಡಿಎಂ ಕಾಲೇಜ್ ಆಫ್ ನ್ಯಾಚುರೋಪಥಿ ತಂಡಗಳು ಮುಖಾಮುಖಿಯಾಗಿದ್ದವು. ಆರಂಭದಿಂದಲೂ ಸಂಪೂರ್ಣ ಹಿಡಿತ ಸಾಧಿಸಿದ ಆಳ್ವಾಸ್ ಆಟಗಾರರು 34–16 ಅಂಕಗಳ ಬೃಹತ್ ಅಂತರದಿಂದ ಎಸ್‌ಡಿಎಂ ತಂಡವನ್ನು ಮಣಿಸಿ ಭರ್ಜರಿ ಜಯ ದಾಖಲಿಸಿದರು.

ಪಂದ್ಯಾವಳಿಯ ಪೂರ್ತಿದಿನ ಸಂಘಟಿತ ದಾಳಿ, ಚುರುಕಿನ ರಕ್ಷಣಾ ತಂತ್ರ ಮತ್ತು ಆಟಗಾರರ ನಡುವಿನ ಅದ್ಭುತ ಹೊಂದಾಣಿಕೆಯಿಂದ ಆಳ್ವಾಸ್ ತಂಡವು ಎದುರಾಳಿಗಳಿಗೆ ಯಾವುದೇ ಅವಕಾಶ ನೀಡದೆ ಪಂದ್ಯವನ್ನು ತನ್ನತ್ತ ಕಾಯ್ದಿರಿಸಿಕೊಂಡಿತು. ಮಂಗಳೂರು ವಲಯ ಮಟ್ಟದ ಆರ್‌ಜಿಯುಎಚ್‌ಎಸ್ ಕಬಡ್ಡಿ ಪಂದ್ಯಾವಳಿಯಲ್ಲಿ ಶ್ರೇಷ್ಠ ಸಾಧನೆ ತೋರಿ ಪ್ರಶಸ್ತಿ ಎತ್ತಿ ಹಿಡಿದ ಆಳ್ವಾಸ್ ಕಾಲೇಜಿನ ವಿಜೇತ ಕಬಡ್ಡಿ ತಂಡದ ಆಟಗಾರರನ್ನು ಮತ್ತು ಕ್ರೀಡಾ ಸಂಸ್ಥೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಅವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

Category
ಕರಾವಳಿ ತರಂಗಿಣಿ