image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಪ್ರಮುಖ ಸೇವೆಗಳ ದರ ಪರಿಷ್ಕರಣೆ

ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಪ್ರಮುಖ ಸೇವೆಗಳ ದರ ಪರಿಷ್ಕರಣೆ

ಸುಬ್ರಹ್ಮಣ್ಯ : ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಪ್ರಮುಖ ಧಾರ್ಮಿಕ ಸೇವೆಗಳಾದ ಬೆಳ್ಳಿ ರಥೋತ್ಸವ ಮತ್ತು ಪಂಚಾಮೃತ ಮಹಾಭಿಷೇಕದ ದರವನ್ನು ಪರಿಷ್ಕರಿಸಿ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಸಲ್ಲಿಸಿದ ಪ್ರಸ್ತಾವನೆಯನ್ನು ಪರಿಶೀಲಿಸಿ ಧಾರ್ಮಿಕ ದತ್ತಿ ಇಲಾಖೆ ಈ ಅನುಮೋದನೆ ನೀಡಿದ್ದು, ಮುಂದಿನ ಮೂರು ವರ್ಷಗಳ ಅವಧಿಗೆ ಇದು ಅನ್ವಯವಾಗಲಿದೆ. ಪರಿಷ್ಕೃತ ಆದೇಶದನ್ವಯ ಬೆಳ್ಳಿ ರಥೋತ್ಸವ ಸೇವೆಗೆ ಒಟ್ಟು 12,000 ರೂ. (ದೇವಸ್ಥಾನದ ನಿಧಿಗೆ 3,000 ರೂ., ಸಾಮಗ್ರಿ ವೆಚ್ಚಕ್ಕೆ 9,000 ರೂ.) ಹಾಗೂ ಪಂಚಾಮೃತ ಮಹಾಭಿಷೇಕ ಸೇವೆಗೆ ಒಟ್ಟು 11,000 ರೂ. (ದೇವಸ್ಥಾನದ ನಿಧಿಗೆ 1,000 ರೂ., ಸಾಮಗ್ರಿ ವೆಚ್ಚಕ್ಕೆ 10,000 ರೂ.) ನಿಗದಿಪಡಿಸಲಾಗಿದೆ. ಪ್ರತಿನಿತ್ಯ ಸಾವಿರಾರು ಭಕ್ತರು ಆಗಮಿಸುವ ಈ ಕ್ಷೇತ್ರದಲ್ಲಿ ಇನ್ನುಮುಂದೆ ಭಕ್ತರು ಪರಿಷ್ಕೃತ ದರಪಟ್ಟಿಯಂತೆ ಸೇವೆಗಳನ್ನು ಪಡೆದುಕೊಳ್ಳಬೇಕಾಗಿದೆ.

Category
ಕರಾವಳಿ ತರಂಗಿಣಿ