ಮೂಡಬಿದಿರೆ : ಸೆಪ್ಟೆಂಬರ್ 2026ರಲ್ಲಿ ನಡೆದ ಚಾರ್ಟर्ड ಅಕೌಂಟೆಂಟ್ (ಸಿಎ) ಇಂಟರ್ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದ ಒಟ್ಟು 21 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದು, ಕಾಲೇಜಿನ ವಿದ್ಯಾರ್ಥಿನಿ ರಕ್ಷಾ ರಾಮಚಂದ್ರ ನಾಯಕ್ ಅವರು ಎರಡು ಗ್ರೂಪ್ಗಳಲ್ಲಿ ಮೊದಲ ಪ್ರಯತ್ನದಲ್ಲೇ 435 ಅಂಕಗಳನ್ನು ಗಳಿಸಿ ರಾಷ್ಟ್ರೀಯ ಮಟ್ಟದಲ್ಲಿ 49ನೇ ರ್ಯಾಂಕ್ ಪಡೆದಿದ್ದಾರೆ. ಸಿಎ ಇಂಟರ್ಮೀಡಿಯೇಟ್ ಗ್ರೂಪ್-1ರಲ್ಲಿ ಕಾಲೇಜಿನ 18 ವಿದ್ಯಾರ್ಥಿಗಳು (ಶೇ. 54.54) ಹಾಗೂ ಗ್ರೂಪ್-2ರಲ್ಲಿ 9 ವಿದ್ಯಾರ್ಥಿಗಳು (ಶೇ. 31.03) ಉತ್ತೀರ್ಣರಾಗಿದ್ದಾರೆ. ಅವನಿ ಉಮೇಶ್ ರಾವ್ (415), ಫಾತಿಮಾ ಅಸ್ಸಾ (388), ಅಂಕಿತಾ ರಾವ್ (372), ಜೈಷ್ಣವ್ ಜೆ. (318) ಮತ್ತು ಪ್ರಜ್ವಲ್ ಕೆ. (307) ಸೇರಿದಂತೆ ಇ Aಬ್ರ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ. ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮಾಕ್ ಪರೀಕ್ಷೆಗಳು, ಪ್ರತಿದಿನ 10ರಿಂದ 12 ಗಂಟೆಗಳ ನಿರಂತರ ಅಧ್ಯಯನ ಮತ್ತು ಸಂಸ್ಥೆಯ ಶೈಕ್ಷಣಿಕ ಮಾರ್ಗದರ್ಶನವು ಈ ಯಶಸ್ಸಿಗೆ ಕಾರಣವಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವೆ ಅಭಿನಂದನೆ ಸಲ್ಲಿಸಿದ್ದಾರೆ.