image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ರಜೆ ಒಂದು ದಿನ ವಿಸ್ತರಣೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಸರಾ ರಜೆ ಒಂದು ದಿನ ವಿಸ್ತರಣೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಘೋಷಿಸಲಾಗಿದ್ದ ದಸರಾ ರಜೆಯನ್ನು ಅಕ್ಟೋಬರ್ 22 ರವರೆಗೆ ಒಂದು ದಿನ ಹೆಚ್ಚುವರಿಯಾಗಿ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆಯು ಅಧಿಕೃತ ಆದೇಶ ಹೊರಡಿಸಿದೆ. ಐತಿಹಾಸಿಕ ದಸರಾ ಹಬ್ಬದ ಪೂಜೆ ಮತ್ತು ಮೆರವಣಿಗೆಯು ಅಕ್ಟೋಬರ್ 21 ರ ರಾತ್ರಿ ಅಂತಿಮ ದಿನವಾಗಿರುವುದರಿಂದ, ದೂರದ ಜಿಲ್ಲೆಗಳಿಂದ ಬಂದು ಪಾಲ್ಗೊಳ್ಳುವ ಮಕ್ಕಳು ಮತ್ತು ಪೋಷಕರು ವಾಪಸ್ ತೆರಳಲು ತಡವಾಗಲಿದೆ ಹಾಗೂ ಮರುದಿನವೇ ಅಂದರೆ ಅಕ್ಟೋಬರ್ 22 ರಂದು ಶಾಲೆಗಳು ಪುನರಾರಂಭಗೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಹಾಜರಾಗಲು ಕಷ್ಟವಾಗಲಿದೆ ಎಂಬ ಸಾರ್ವಜನಿಕರ ಮತ್ತು ಜನಪ್ರತಿನಿಧಿಗಳ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೆಚ್ಚುವರಿಯಾಗಿ ಘೋಷಿಸಲಾದ ಈ ರಜೆಯನ್ನು ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳಿಗೆಚ್ಯುತಿಯಾಗದಂತೆ ಮುಖ್ಯ ಶಿಕ್ಷಕರ ವಿವೇಚನೆಯಲ್ಲಿ ನೀಡಲಾದ 4 ಸ್ಥಳೀಯ ರಜೆಗಳ ಪೈಕಿ 1 ಸ್ಥಳೀಯ ರಜೆಯನ್ನು ಬಳಸಿಕೊಂಡು ಸರಿಹೊಂದಿಸುವಂತೆ ಸೂಚಿಸಲಾಗಿದೆ.

Category
ಕರಾವಳಿ ತರಂಗಿಣಿ