image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ದಸರಾ: ಅ. 21ರಂದು ವಿಜ್ರಂಭಣೆಯ 'ಪಿಲಿ ಅಜನೆ' ಹುಲಿಕುಣಿತ ಪ್ರದರ್ಶನ

ಮಂಗಳೂರು ದಸರಾ: ಅ. 21ರಂದು ವಿಜ್ರಂಭಣೆಯ 'ಪಿಲಿ ಅಜನೆ' ಹುಲಿಕುಣಿತ ಪ್ರದರ್ಶನ

ಮಂಗಳೂರು : ಮಂಗಳೂರು ದಸರಾ ಆಚರಣೆಯ ಪ್ರಯುಕ್ತ ಅಕ್ಟೋಬರ್ 21ರಂದು ನಗರದ ಎಂಜಿ ರೋಡ್ ದೀಪಾ ಕಂಫರ್ಟ್ಸ್ ಹತ್ತಿರ "5ನೇ ವರ್ಷದ ಪಿಲಿ ಅಜನೆ" ಕಾರ್ಯಕ್ರಮ ಅತ್ಯಂತ ವಿಜ್ರಂಭಣೆಯಿಂದ ಜರುಗಲಿದೆ. ಶ್ರೀ ಪ್ರಮೋದ್ ಕರ್ಕೇರ ನೇತೃತ್ವ ಹಾಗೂ ಶ್ರೀ ರವಿರಾಜ್ ಚೌಟ ಸಹಭಾಗಿತ್ವದಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಮಧ್ಯಾಹ್ನ 3 ಗಂಟೆಯಿಂದ ಕುಣಿತ ಭಜನೆ, ಗೊಂಬೆ ಬಳಗ, ಚೆಂಡೆ ವಾದನ ಹಾಗೂ ಭವ್ಯ ಶೋಭಾಯಾತ್ರೆ ನಡೆಯಲಿದೆ. ಶ್ರೀ ಸಾಯಿ ಚೆಂಡೆ ಟ್ರೂಪ್, ಗ್ರೂಪ್ ಎಕ್ಸ್ ಡ್ಯಾನ್ಸ್ ಅಕಾಡೆಮಿ, ಗುರುಕುಲ ಬಾಲಗೋಕುಲ ಪಾವೂರು ಹರೇಕಳ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ "ಬರ್ಕೆ ಫ್ರೆಂಡ್ಸ್" ತಂಡದಿಂದ ಸಾಹಸಮಯ ಹುಲಿ ಕುಣಿತ ಪ್ರದರ್ಶನ ಹಾಗೂ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ. ಕಳೆದ ನಾಲ್ಕು ವರ್ಷಗಳಿಂದ ಜನಮನ ಗೆದ್ದಿರುವ ಟೀಂ ಪಿಲಿ ಅಜನೆ ಈ ಬಾರಿ ಹೊಸತನದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.

Category
ಕರಾವಳಿ ತರಂಗಿಣಿ