ಮಂಗಳೂರು : ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವು ಧಮ೯ಕ ಆರಾಧನೆಯೊಂದಿಗೆ ಕಲಾತ್ಮಕ ಹಾಗೂ ವಾಸ್ತುಶಿಲ್ಪದ ಅದ್ಭುತ ಕೇಂದ್ರವಾಗಿದೆ. ಇಲ್ಲಿ 60 ಅಡಿ ಎತ್ತರದ ರಾಜಗೋಪೂರ, ಆಧುನಿಕ ಹಾಗೂ ಸಾಂಪ್ರದಾಯಿಕ ಶಿಲ್ಪಕಲಾ ವೈಭವವಿರುವ ಸುಂದರ ರಚನೆಗಳನ್ನು ಕಾಣಬಹುದು. ದೇವಸ್ಥಾನದ ಒಳ ಹಾಗೂ ಹೊರಗೋಡೆಗಳಲ್ಲಿ ದೇವತಾ ವೃಗ್ರಹಗಳ ಕತ್ತನೆಯು ಅದ್ಭುತ ಕೈಚಳಕವನ್ನು ತೋರುತ್ತದೆ. ಕ್ಷೇತ್ರದ ಪ್ರಧಾನ ಗರ್ಭಗುಡಿಯಲ್ಲಿ ಶ್ರೀ ಗೋಕರ್ಣನಾಥ ಶಿವಲಿಂಗದ ದಿವ್ಯ ಸ್ವರೂಪದ ದರ್ಶನ ದೊರೆಯುತ್ತದೆ. ಇದರೊಂದಿಗೆ ಅನ್ನಪೂರ್ಣೇಶ್ವರಿ, ಹನುಮಂತ, ಗಣಪತಿ, ನವರಾಗ್ರಹ, ಸುಬ್ರಹ್ಮಣ್ಯ, ಸಾಯಿಬಾಬಾ, ಶನಿದೇವನ ಮಂಟಪ ಹಾಗೂ ನಾರಾಯಣ ಗುರುಗಳ ಸನ್ನಿಧಾನ ಸೇರಿದಂತೆ ವಿವಿಧ ದೇವತಾ ಸನ್ನಿಧಿಗಳು ಇಲ್ಲಿ ನೆಲೆಗೊಂಡಿವೆ. ನವರಾತ್ರಿಯ ಸಂದರ್ಭದಲ್ಲಿ ಸಪ್ತಶತೀ ಗ್ರಂಥದಲ್ಲಿ ಉಲ್ಲೇಖಿತವಾದ ನವದುರ್ಗಾ ಸ್ವರೂಪಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ ದೇವಿಯರ ಪೂಜೆಯು ವಿಶೇಷವಾಗಿ ನಡೆಯುತ್ತದೆ.