ಅಜ್ಮಾನ್/ತುಂಬೆ : ಇಲ್ಲಿನ ತುಂಬೆ ಮೆಡಿಸಿಟಿಯಲ್ಲಿ ತುಂಬೆ ವೆಟರ್ನರಿ ಮೆಡಿಸಿನ್ ಕಾಲೇಜು ಹಾಗೂ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ವತಿಯಿಂದ ಅಂತಾರಾಷ್ಟ್ರೀಯ ಒಂಟೆ ವಿಜ್ಞಾನ ವಿಚಾರಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ದುಬೈ ಒಂಟೆ ಆಸ್ಪತ್ರೆ ಮತ್ತು ಒಂಟೆ ಸಂತಾನೋತ್ಪತ್ತಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಒಂಟೆಗಳ ಆರೋಗ್ಯ, ಸಂತಾನೋತ್ಪತ್ತಿ, ಶಸ್ತ್ರಚಿಕಿತ್ಸೆ ಹಾಗೂ ಪುನಶ್ಚೇತನದ ಕುರಿತು ಚರ್ಚಿಸಲಾಯಿತು. ಅಜ್ಮಾನ್ ಆಡಳಿತಗಾರರ ನ್ಯಾಯಾಲಯದ ಅಧ್ಯಕ್ಷ ಶೇಖ್ ಡಾ. ಮಜೀದ್ ಬಿನ್ ಸಯೀದ್ ಅಲ್ ನುaimi ಮತ್ತು ತುಂಬೆ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಹಿದ್ದೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪ್ರಾಣಿ ಆರೋಗ್ಯ ಕ್ಷೇತ್ರದಲ್ಲಿ ಸಾಧನೆಗೈದ 12 ನಾಯಕರಿಗೆ ಇದೇ ವೇಳೆ ಸನ್ಮಾನಿಸಲಾಯಿತು ಹಾಗೂ ನಿರ್ಮಾಣ ಹಂತದಲ್ಲಿರುವ ಹೊಸ ತುಂಬೆ ಪಶುವೈದ್ಯಕೀಯ ಆಸ್ಪತ್ರೆಯ ಪರಿಚಯ ಮಾಡಿಕೊಡಲಾಯಿತು.
ನವೆಂಬರ್ 10 ಮತ್ತು 11 ರಂದು ಪ್ರಾಣಿ ವೈದ್ಯಕೀಯ ಸಮ್ಮೇಳನ ಹಾಗೂ ದುಬೈ ಇಕ್ವೈನ್ ಆಸ್ಪರೆಯ ಸಹಯೋಗದಲ್ಲಿ ಕುದುರೆ ಆರೈಕೆ ಮತ್ತು ತುರ್ತು ಚಿಕಿತ್ಸೆಗೆ ಸಂಬಂಧಿಸಿದ ಎರಡು ಪ್ರಮಾಣಪತ್ರ ಕೋರ್ಸ್ಗಳನ್ನು ಆರಂಭಿಸುವುದಾಗಿ ಕಾಲೇಜು ಪ್ರಕಟಿಸಿದ್ದು, ಹೆಚ್ಚಿನ ಮಾಹಿತಿಗಾಗಿ www.gmu.ac.ae ಜಾಲತಾಣಕ್ಕೆ ಭೇಟಿ ನೀಡಬಹುದು.