image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೆಎಸ್ಆರ್ಟಿಸಿ ದಸರಾ ವಿಶೇಷ ಪ್ಯಾಕೇಜ್ ಪ್ರವಾಸ ಅಕ್ಟೋಬರ್ 25ರವರೆಗೆ ವಿಸ್ತರಣೆ

ಕೆಎಸ್ಆರ್ಟಿಸಿ ದಸರಾ ವಿಶೇಷ ಪ್ಯಾಕೇಜ್ ಪ್ರವಾಸ ಅಕ್ಟೋಬರ್ 25ರವರೆಗೆ ವಿಸ್ತರಣೆ

ಮಂಗಳೂರು : ಕೆಎಸ್ಆರ್ಟಿಪಿಸಿ ವಿಭಾಗದಿಂದ ದಸರಾ ಹಬ್ಬದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಸಾರ್ವಜನಿಕರ ಬೇಡಿಕೆಯ ಮೇರೆಗೆ ಅಕ್ಟೋಬರ್ 25ರವರೆಗೆ ವಿಸ್ತರಿಸಲಾಗಿದೆ. ಮಂಗಳೂರು ಹಾಗೂ ಉಡುಪಿಯಿಂದ ವಿವಿಧ ಧಾರ್ಮಿಕ ಮತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಈ ವಿಶೇಷ ಬಸ್ ಸಂಚಾರ ಲಭ್ಯವಿರಲಿದೆ.

ಮಂಗಳೂರು ದಸರಾ ದರ್ಶನಕ್ಕೆ ವಯಸ್ಕರಿಗೆ 500 ರೂಪಾಯಿ ಹಾಗೂ ಮಕ್ಕಳಿಗೆ 400 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಮಂಗಳೂರಿನಿಂದ ಕೊಲ್ಲೂರು, ತಲಕಾವೇರಿ-ಭಾಗಮಂಡಲ ಹಾಗೂ ಶೃಂಗೇರಿಗೆ ವಯಸ್ಕರಿಗೆ 600 ರೂಪಾಯಿ ಹಾಗೂ ಮಕ್ಕಳಿಗೆ 500 ರೂಪಾಯಿ ಇರುತ್ತದೆ. ಮಂಗಳೂರು-ಸಿಗಂದೂರು ಪ್ರವಾಸಕ್ಕೆ ವಯಸ್ಕರಿಗೆ 700 ರೂಪಾಯಿ ಮತ್ತು ಮಕ್ಕಳಿಗೆ 600 ರೂಪಾಯಿ ನಿಗದಿಪಡಿಸಲಾಗಿದೆ. ಹಾಗೆಯೇ ಉಡುಪಿಯಿಂದ ಕೊಲ್ಲೂರು ಹಾಗೂ ಶೃಂಗೇರಿಗೆ ವಯಸ್ಕರಿಗೆ 500 ರೂಪಾಯಿ ಮತ್ತು ಮಕ್ಕಳಿಗೆ 400 ರೂಪಾಯಿ ಪ್ರಯಾಣ ದರವಿರುತ್ತದೆ. ಊಟ ಮತ್ತು ಉಪಹಾರವನ್ನು ಹೊರತುಪಡಿಸಿ ಈ ದರಗಳು ಅನ್ವಯಿಸಲಿವೆ. ಆಸಕ್ತ ಪ್ರಯಾಣಿಕರು ksrtc.in ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ಕೆಎಸ್ಆರ್ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ