image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ಜೈಲಿನಲ್ಲಿ ಕೈದಿಗಳಿಗೆ ಅಣಬೆ ಕೃಷಿ ತರಬೇತಿ ಸಮಾರೋಪ

ಮಂಗಳೂರು ಜೈಲಿನಲ್ಲಿ ಕೈದಿಗಳಿಗೆ ಅಣಬೆ ಕೃಷಿ ತರಬೇತಿ ಸಮಾರೋಪ

ಮಂಗಳೂರು: ಜಿಲ್ಲಾ ಕಾರಾಗೃಹದ ಕೈದಿಗಳ ಪುನರ್ವಸತಿ ಹಾಗೂ ಸ್ವಾವಲಂಬನೆಗಾಗಿ ಪ್ರಿಸನ್ ಮಿನಿಸ್ಟ್ರಿ ಇಂಡಿಯಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೂರು ದಿನಗಳ ಅಣಬೆ ಕೃಷಿ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಅಕ್ಟೋಬರ್ 14ರಿಂದ 16ರವರೆಗೆ ನಡೆದ ಈ ತರಬೇತಿಯಲ್ಲಿ ಸುಮಾರು 23 ಮಂದಿ ಕೈದಿಗಳು ಉತ್ಸಾಹದಿಂದ ಭಾಗವಹಿಸಿ ಪ್ರಾಯೋಗಿಕ ಜ್ಞಾನ ಪಡೆದುಕೊಂಡರು. ಕಾಸರಗೋಡಿನ ಶ್ರೀ ಪಾಂಡುರಂಗ ಮತ್ತು ತಂಡದವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾರ್ಗದರ್ಶನ ನೀಡಿದರು.

ಅಕ್ಟೋಬರ್ 16ರಂದು ನಡೆದ ಸಮಾರೋಪ ಸಮಾರಂಭದಲ್ಲಿ ತರಬೇತಿ ಪೂರ್ಣಗೊಳಿಸಿದ ಕೈದಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಿಸನ್ ಮಿನಿಸ್ಟ್ರಿ ಇಂಡಿಯಾ ಮಂಗಳೂರು ಘಟಕದ ಆಧ್ಯಾತ್ಮಿಕ ನಿರ್ದೇಶಕ ವಂದನೀಯ ಫಾ. ಸ್ಟೀಫನ್ ಪಿರೇರಾ ಮಾತನಾಡಿ, ಇಂತಹ ಕೌಶಲ್ಯಗಳು ಕೈದಿಗಳಿಗೆ ಬಿಡುಗಡೆಯ ನಂತರ ಗೌರವಯುತ ಜೀವನ ನಡೆಸಲು ನೆರವಾಗಲಿವೆ ಎಂದು ಅಭಿಪ್ರಾಯಪಟ್ಟರು. ಜೈಲು ಅಧೀಕ್ಷಕ ಶ್ರೀ ಶರಣ ಬಸಪ್ಪ ಅವರು ಪಿಎಂಐ ಸಂಸ್ಥೆಯ ಸೇವೆಯನ್ನು ಶ್ಲಾಘಿಸಿ, ಕೈದಿಗಳಿಗೆ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಿವಿಮಾತು ಹೇಳಿದರು. ಈ ಸಂದರ್ಭದಲ್ಲಿ ಜೈಲು ಸಿಬ್ಬಂದಿ ಹಾಗೂ ಪಿಎಂಐ ಸಂಯೋಜಕರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ